For Quick Alerts
  ALLOW NOTIFICATIONS  
  For Daily Alerts

  ಅರಮನೆಯ 'ದರ್ಬಾರ್' ಹಾಲ್ ನಲ್ಲಿ ಫೋಟೋ: ವಿವಾದಕ್ಕೆ ಸಿಲುಕಿದ ನಿಧಿ ಸುಬ್ಬಯ್ಯ

  By Harshitha
  |

  ವಿಶ್ವವಿಖ್ಯಾತ ಮೈಸೂರು ಅರಮನೆಯೊಳಗೆ ಫೋಟೋ ಕ್ಲಿಕ್ ಮಾಡಿಕೊಳ್ಳುವ ಅವಕಾಶ ಯಾರಿಗೂ ಇಲ್ಲ. ಅರಮನೆಯ ಒಳಾಂಗಣ ಹಾಗೂ ಜಯಮಾರ್ತಾಂಡಾ ದ್ವಾರದ ಬಳಿಯೂ ಫೋಟೋ ಶೂಟ್ ಮಾಡುವ ಹಾಗಿಲ್ಲ. ಅರಮನೆಯ ಭದ್ರತೆಯನ್ನ ಗಮನದಲ್ಲಿ ಇಟ್ಟುಕೊಂಡು ದರ್ಬಾರ್ ಹಾಲ್ ಸೇರಿದಂತೆ ಅರಮನೆಯ ಒಳಾಂಗಣವನ್ನ ಹೈ ಸೆಕ್ಯೂರಿಟಿ ಝೋನ್ ಅಂತ ಪರಿಗಣಿಸಲಾಗಿದ್ದು, ಯಾರೂ ಕೂಡ ಫೋಟೋ ತೆಗೆಯುವಂತಿಲ್ಲ.

  ಅರಮನೆಯೊಳಗೆ ಪ್ರಿ-ವೆಡ್ಡಿಂಗ್ ಫೋಟೋಶೂಟ್ ನಡೆಸಿ, ಜೋಡಿಯೊಂದು ವಿವಾದಕ್ಕೆ ಸಿಲುಕಿದ್ದು ನಿಮಗೆ ನೆನಪಿರಬಹುದು. ಇದೀಗ ಇಂಥದ್ದೇ ವಿವಾದದಲ್ಲಿ ಕೊಡಗಿನ ಬೆಡಗಿ, ಕನ್ನಡ ನಟಿ ನಿಧಿ ಸುಬ್ಬಯ್ಯ ಸಿಲುಕಿದ್ದಾರೆ.

  ಮೈಸೂರು ಅರಮನೆ ಫೋಟೋಶೂಟ್ ವಿವಾದ : ಏನು, ಎತ್ತ?

  ಮೈಸೂರು ಅರಮನೆಯ ಒಳಗೆ ನಿಧಿ ಸುಬ್ಬಯ್ಯ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದಾರೆ. ಅರಮನೆಯ ದರ್ಬಾರ್ ಹಾಲ್ ನಲ್ಲಿ ಕುಳಿತು ನಿಧಿ ಸುಬ್ಬಯ್ಯ ತೆಗೆಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಫೋಟೋ ಶೂಟ್ ಗೆ ನಿಷೇಧ ಇದ್ದರೂ, ಅರಮನೆಯೊಳಗೆ ಅದರಲ್ಲೂ ವರ್ಲ್ಡ್ ಫೇಮಸ್ ದರ್ಬಾರ್ ಹಾಲ್ ನಲ್ಲಿ ನಿಧಿ ಸುಬ್ಬಯ್ಯ ಹೇಗೆ ಫೋಟೋ ತೆಗೆಸಿಕೊಂಡರು ಎಂಬ ಚರ್ಚೆ ಶುರುವಾಗಿದೆ.

  ಮೈಸೂರು ಅರಮನೆ ಫೋಟೋಶೂಟ್ ಸಾಧ್ಯವಾಗಿದ್ದು ಹೀಗೆ!

  ಅಷ್ಟಕ್ಕೂ, ದರ್ಬಾರ್ ಹಾಲ್ ನಲ್ಲಿ ತೆಗೆಸಿಕೊಂಡ ಫೋಟೋವನ್ನ ಸ್ವತಃ ನಿಧಿ ಸುಬ್ಬಯ್ಯ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಅವಕಾಶ ನೀಡಿದ್ಮೇಲೆ, ನಿಧಿ ಫೋಟೋ ತೆಗೆಸಿಕೊಂಡಿದ್ರಾ.? ಇಲ್ಲಾ ಇದು ಭದ್ರತಾ ಸಿಬ್ಬಂದಿಯ ವೈಫಲ್ಯವೋ.? ತಿಳಿದು ಬಂದಿಲ್ಲ. ಒಟ್ನಲ್ಲಿ ನಿಧಿ ಸುಬ್ಬಯ್ಯ ಫೋಟೋ ಮಾತ್ರ ಸದ್ಯಕ್ಕೆ ವಿವಾದಕ್ಕೆ ಗ್ರಾಸವಾಗಿದೆ.

  English summary
  Kannada Actress Nidhi Subbaiah's photo inside Mysuru Palace stirs controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X