»   » ಕೊಡಗಿನ ಬೆಡಗಿ, ನಟಿ ನಿಧಿ ಸುಬ್ಬಯ್ಯಗೆ ಕಂಕಣ ಬಲ

ಕೊಡಗಿನ ಬೆಡಗಿ, ನಟಿ ನಿಧಿ ಸುಬ್ಬಯ್ಯಗೆ ಕಂಕಣ ಬಲ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯಗೆ ಕಲ್ಯಾಣ ಯೋಗ ಕೂಡಿ ಬಂದಿದೆ. ಮುಂಬೈ ಮೂಲದ ಉದ್ಯಮಿ ಲವೇಶ್ ರನ್ನು ನಿಧಿ ಮದುವೆಯಾಗಲಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಸಾಂಪ್ರದಾಯಿಕ ಕೊಡಗು ಶೈಲಿಯಲ್ಲಿ ವಿವಾಹ ನಡೆಯಲಿದೆ.

ವಿರಾಜಪೇಟೆ ತಾಲೂಕು ಐಮಂಗಲ ಗ್ರಾಮದವರಾದ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ರವರ ಪತ್ನಿ ಜಾನ್ಸಿ ಮತ್ತು ಏಕಮಾತ್ರ ಪುತ್ರಿ ನಟಿ ನಿಧಿ ಸುಬ್ಬಯ್ಯ ಅವರ ಮದುವೆ ನಿಶ್ಚಿತಾರ್ಥ ಮಾತುಕತೆ ಜನವರಿ ತಿಂಗಳಿನಲ್ಲಿ ನಡೆಯಿತಂತೆ. ಅಂದ ಹಾಗೆ ಇದು ಲವ್ ಕಮ್ ಆರೇಂಜ್ಡ್ ಮ್ಯಾರೇಜ್ ಎಂದು ನಿಧಿ ಸುಬ್ಬಯ್ಯ ಹೇಳಿಕೊಂಡಿದ್ದಾರೆ.

Actress Nidhi Subbaiah to wed Lavesh Khairajani in Kodagu this February

ಕಾಮನ್ ಫ್ರೆಂಡ್ ಒಬ್ಬರಿಂದ ಲವೇಶ್ ಅವರ ಪರಿಚಯವಾಯಿತು, ನಂತರ ಇಬ್ಬರೂ ಒಂದೂವರೆ ವರ್ಷಗಳ ಗೆಳೆತನವನ್ನು ಈಗ ವಿವಾಹ ಬಂಧನಕ್ಕೊಳಪಡಿಸಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡದಲ್ಲಿ ಪಂಚರಂಗಿ, ಅಣ್ಣಾಬಾಂಡ್, ಕೃಷನ್ ಮ್ಯಾರೇಜ್ ಸ್ಟೋರಿ ಚಿತ್ರದಲ್ಲಿ ನಟಿಸಿರುವ ನಿಧಿ, ಹಿಂದಿಯಲ್ಲಿ ಓ ಮೈಗಾಡ್, ಅಜಬ್ ಗಜನ್ ಲವ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Actress Nidhi Subbaiah to wed Lavesh Khairajani in Kodagu this February

ಮೈಸೂರಿನ ಗೋಕುಲಂನಲ್ಲಿ ಬೆಳೆದ ನಿಧಿ, ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದಿರುವ ಕ್ರೀಡಾಪಟು(sailing ನಲ್ಲಿ), ನಂತರ ಸಿವಿಎಲ್ ಇಂಜಿನಿಯರಿಂಗ್ ಓದು ಅರ್ಧಕ್ಕೆ ಬಿಟ್ಟು ಮಾಡೆಲಿಂಗ್ ಜಗತ್ತಿಗೆ ಕಾಲಿರಿಸಿದರು. 2009ರಲ್ಲೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಿಧಿ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಕಳೆದ ವರ್ಷ ಅಪ್ಪನನ್ನು ಕಳೆದುಕೊಂಡ ನಿಧಿ ಅವರು ಈಗ ಮುಂಬೈನಲ್ಲಿ ನೆಲೆಸಿದ್ದು, ಮದುವೆ ನಂತರ ಮುಂಬೈಗೆ ತೆರಳಲಿದ್ದಾರೆ.

English summary
Kannada actress Nidhi Subbaiah all set to wed her beau Lavesh Khairajani a Mumbai based businessman in Kodagu this February

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada