ಪಬ್ಲಿಕ್‌ನಲ್ಲಿ ಲಿಪ್ ಲಾಕ್ ಮಾಡಿದ ನಟಿ ನಿಶ್ವಿಕಾ ನಾಯ್ಡು: ಖಾಸಗಿ ವಿಡಿಯೋ ವೈರಲ್
ಕನ್ನಡ ಚಿತ್ರರಂಗದ ಜನಪ್ರಿಯ ಯುವ ನಟಿ ನಿಶ್ವಿಕಾ ನಾಯ್ಡು ಅವರ ಖಾಸಗಿ ಪಾರ್ಟಿಯ ವಿಡಿಯೋ ಒಂದು ವೈರಲ್ ಆಗಿದೆ.
ನಿಶ್ವಿಕಾ ನಾಯ್ಡು, ತಮ್ಮ ಗೆಳತಿಯರೊಟ್ಟಿಗೆ ಪಾರ್ಟಿ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ವಿಡಿಯೋಗಳಲ್ಲಿ ಬಹಳ 'ವೈಲ್ಡ್' ಆಗಿ ಕಾಣಿಸಿಕೊಂಡಿದ್ದಾರೆ ನಿಶ್ವಿಕಾ ನಾಯ್ಡು.
ಕೆಲವು ಗೆಳತಿಯರೊಟ್ಟಿಗೆ ಗೋವಾಕ್ಕೆ ತೆರಳಿದ್ದ ನಿಶ್ವಿಕಾ ನಾಯ್ಡು, ಅಲ್ಲಿ ಸಾಕಷ್ಟು ವೈಲ್ಡ್ ಆಗಿಯೇ ಪಾರ್ಟಿ ಮಾಡಿರುವುದು ವಿಡಿಯೋಗಳಿಂದ ಗೊತ್ತಾಗುತ್ತಿದೆ. ಒಂದು ವಿಡಿಯೋದಲ್ಲಂತೂ ಹುಕ್ಕಾ ಸೇದುತ್ತಿರುವ ಗೆಳತಿಯ ತುಟಿಗೆ ಗಾಢವಾಗಿ ತುಟ್ಟಿಒತ್ತಿ ಚುಂಬಿಸಿ ತಮ್ಮ ಬಾಯಿಯಿಂದ ಹೊಗೆ ಬಿಟ್ಟಿದ್ದಾರೆ ನಿಶ್ವಿಕಾ ನಾಯ್ಡು.

ನಿಶ್ವಿಕಾ ನಾಯ್ಡು ಅವರ ಈ ವಿಡಿಯೋಗಳು ಭಾರಿ ವೈರಲ್ ಆಗಿವೆ. ವಿಡಿಯೋದಲ್ಲಿ ಗೆಳತಿಯರು ಪರಸ್ಪರ ಮಾದಕವಾಗಿ ಚುಂಬಿಸಿಕೊಳ್ಳುತ್ತಿದ್ದಾರೆ. ಜೋರಾಗಿಯೇ ಪಾರ್ಟಿ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ ನಿಶ್ವಿಕಾ ನಾಯ್ಡು, ನಾಲಗೆ ಹೊರ ಚಾಚಿ ಕೆಟ್ಟ ಸಂಜ್ಞೆ ಸಹ ಮಾಡಿದ್ದಾರೆ.
ನಿಶ್ವಿಕಾ ನಾಯ್ಡು ಅವರ ಈ ವೈಲ್ಡ್ ಪಾರ್ಟಿಯ ವಿಡಿಯೋಗಳನ್ನು ಅವರ ಗೆಳತಿಯೇ ಒಬ್ಬರು ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಆದರೆ ಆ ಬಳಿಕ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೆ ಕೆಲವರು ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ನಿಶ್ವಿಕಾ ನಾಯ್ಡು ಕನ್ನಡದ ನಟಿಯಾಗಿದ್ದು, 2018ರ 'ಅಮ್ಮ ಐ ಲವ್ ಯು' ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಬಳಿಕ 'ವಾಸು, ನಾನು ಪಕ್ಕಾ ಕಮರ್ಶಿಯಲ್', 'ಪಡ್ಡೆಹುಲಿ', 'ಜಂಟಲ್‌ಮನ್', 'ರಾಮಾರ್ಜುನ', 'ಸಖತ್' ಸಿನಿಮಾಗಳಲ್ಲಿ ನಟಿಸಿರುವ ನಿಶ್ವಿಕಾ ಇದೀಗ 'ಗುರು-ಶಿಷ್ಯರು' ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. 'ದಿಲ್ ಪಸಂದ್' ಹೆಸರಿನ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.


Click it and Unblock the Notifications











