'ವಾಸು'ವಿನ ಜೋಡಿ ತರ್ಲೆ ಮಹಾಲಕ್ಷ್ಮಿಯ ಮಾತು ಕೇಳಿ
Recommended Video

'ವಾಸು ನಾನು ಪಕ್ಕಾ ಕಮರ್ಷಿಯಲ್' ಸಿನಿಮಾದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ಸಿನಿಮಾ ಕೂಡ ಬಿಡುಗಡೆಯಾಗಲು ಒಂದೇ ದಿನ ಬಾಕಿ ಇದೆ. ನಾಳೆ (ಶುಕ್ರವಾರ) ಈ ಸಿನಿಮಾ ಅದ್ದೂರಿಯಾಗಿ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.
'ವಾಸು ನಾನು ಪಕ್ಕಾ ಕಮರ್ಷಿಯಲ್' ಕಮರ್ಷಿಯಲ್ ಹುಡುಗಿಯಾಗಿ ಕಾಣಿಸಿಕೊಂಡಿರುವುದು ನಟಿ ನಿಶ್ವಿಕಾ ನಾಯ್ಡು. ಈಗಾಗಲೇ 'ಅಮ್ಮ ಐ ಲವ್ ಯೂ' ಹಾಗೂ 'ಪಡ್ಡೆ ಹುಲಿ' ಚಿತ್ರದಲ್ಲಿ ನಟಿಸಿರುವ ನಿಶ್ಚಿಕಾ ಅವರ ಮೊದಲ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಅವರು ಮಹಾಲಕ್ಷ್ಮಿ ಎಂಬ ಪಾತ್ರವನ್ನು ಮಾಡಿದ್ದು ಸಖತ್ ಖಡಕ್ ಡೈಲಾಗ್ ಹೇಳುವ ಬಜಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ತಮ್ಮ 'ವಾಸು ನಾನು ಪಕ್ಕಾ ಕಮರ್ಷಿಯಲ್' ಸಿನಿಮಾದ ಬಗ್ಗೆ ಈಗ ನಟಿ ನಿಶ್ವಿಕಾ ನಾಯ್ಡು 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಾರೆ. ಪಟ ಪಟ ಅಂತ ತಮ್ಮ ಪಾತ್ರದ ಹಾಗೂ ಇಡೀ ಚಿತ್ರದ ವಿವರವನ್ನು ಹಂಚಿಕೊಂಡಿದ್ದಾರೆ.
ಇನ್ನು, 'ವಾಸು ನಾನು ಪಕ್ಕಾ ಕಮರ್ಷಿಯಲ್' ನಟ ಅನಿಶ್ ತೇಜಶ್ವರ್ ಅಭಿನಯದ ಹೊಸ ಸಿನಿಮಾವಾಗಿದೆ. ಈ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಹಾಡುಗಳು ಹಿಟ್ ಆಗಿದೆ. ಕನ್ನಡದ ಸ್ಟಾರ್ ನಟರಾದ ದರ್ಶನ್, ಸುದೀಪ್, ಪುನೀತ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಹೊಗಳಿದ್ದಾರೆ. ಈ ಚಿತ್ರ ನಾಳೆ ರಿಲೀಸ್ ಆಗುತ್ತಿದೆ.


Click it and Unblock the Notifications











