ಯಾಕೆ ದಪ್ಪ ಆಗಿದ್ದೀರಿ ಅಂತ ಯಾರು ಕೇಳಲ್ಲ: ಬಾಡಿ ಶೇಮಿಂಗ್ ಬಗ್ಗೆ ನಿತ್ಯಾ ಮೆನನ್ ಮಾತು
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಿತ್ಯಾ ಮೆನನ್ ಇತ್ತೀಚಿಗೆ ಬಾಡಿಶೇಮಿಂಗ್ ವಿಚಾರವಾಗಿ ಹೆಚ್ಚು ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿಕೊಡುವಾಗ ತೆಳ್ಳಗೆ ಬಳಕುವ ಬಳ್ಳಿಯಂತಿದ್ದ ಮೈನಾ ಸುಂದರಿ ಈಗ ಏಕಾಏಕಿ ದಪ್ಪಗಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
Recommended Video
ಸೌಂದರ್ಯ ಜೊತೆಗೆ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ನಿದ್ದೆ ಕದ್ದಿರುವ ನಿತ್ಯಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ನಿತ್ಯಾ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಮೈನಾ ಸಿನಿಮಾ ನಿತ್ಯಾಗೆ ಕನ್ನಡದಲ್ಲಿ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದೆ. ನಂತರ ಸುದೀಪ್ ಜೊತೆ ಕೋಟಿಗೊಬ್ಬ-2 ಸಿನಿಮಾದಲ್ಲಿಯೂ ಮಿಂಚಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿತ್ಯಾ, ಮಿಶನ್ ಮಂಗಲ್ ಸಿನಿಮಾ ಮೂಲಕ ಬಾಲಿವುಡ್ ಗೂ ಕಾಲಿಟ್ಟಿದ್ದಾರೆ. ಅಕ್ಷಯ್ ಕುಮಾರ್ ಜೊತೆ ತೆರೆಹಂಚಿಕೊಂಡಿದ್ದಾರೆ. ಬಾಲಿವುಡ್ ನ ಮೊದಲ ಸಿನಿಮಾವೆ ದೊಡ್ಡ ಮಟ್ಟಕ್ಕೆ ಸಕ್ಸಸ್ ತಂದುಕೊಂಡಿದೆ. ಇತ್ತೀಚಿಗೆ ಸೌತ್ ವರ್ಸಸ್ ನಾರ್ತ್ ಚರ್ಚೆಯಲ್ಲಿ ಭಾಗಿಯಾಗಿದ್ದ ನಿತ್ಯಾ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್, ಕಾಮೆಂಟ್ ಗಳಿಗೆ ಈಗ ತಲೆಕೆಡಿಸಿಕೊಳ್ಳಲ್ಲ ಎನ್ನುವ ನಿತ್ಯಾ ದಪ್ಪಗಾಗಿರುವ ಬಗ್ಗೆ ಹೇಳಿದ್ದೇನು? ಮುಂದೆ ಓದಿ..

ನಿತ್ಯಾ ಸಿನಿಮಾಗಳು
ನಿತ್ಯಾ ಸದ್ಯ ಮಲಯಾಳಂ ಮತ್ತು ತಮಿಳು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ಲೋಕಕ್ಕೂ ಕಾಲಿಟ್ಟಿದ್ದಾರೆ. ಡಬ್ಬಿಂಗ್ ಕಲಾವಿದೆಯೂ ಆಗಿ ಕೆಲಸ ಮಾಡಿದ್ದಾರೆ. ಮಲಯಾಳಂ ಮೂಲದವರಾದ ನಿತ್ಯಾ ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ. ವಿಶೇಷ ಅಂದರೆ ನಿತ್ಯಾ ದಕ್ಷಿಣ ಭಾರತದ ಎಲ್ಲಾ ಭಾಷೆಯನ್ನು ಮಾತನಾಡುತ್ತಾರೆ.


Click it and Unblock the Notifications











