'ಮೈನಾ' ಬೆಡಗಿ ನಿತ್ಯಾ ಮೆನನ್ ಗೆ ನಿರ್ದೇಶನದ 'ಜೋಶ್'
'ಮೈನಾ' ಚಿತ್ರದಲ್ಲಿ ಮನಸೊರೆಗೊಳಿಸುವಂತ ಪಾತ್ರದಲ್ಲಿ ಮಿಂಚಿದ್ದ ಮಲ್ಲು ಕುಟ್ಟಿ ನಟಿ ನಿತ್ಯಾ ಮೆನನ್. ಬೆಂಗಳೂರಲ್ಲಿ ಹುಟ್ಟಿ ಬೆಳೆದ ಈ ಚೆಲುವೆ, ಕನ್ನಡ ಚಿತ್ರರಂಗಕ್ಕಿಂತ ಹೆಚ್ಚಾಗಿ ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲೇ ಜನಪ್ರಿಯ.
'ಸೆವೆನ್ ಓ ಕ್ಲಾಕ್', 'ಜೋಶ್', 'ಮೈನಾ', ಮುಂತಾದ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ನಿತ್ಯಾ ಮೆನನ್ ಗಿನ್ನೂ 26 ವರ್ಷ. ಅಷ್ಟು ಬೇಗ ನಿರ್ದೇಶಕಿಯಾಗುವುದಕ್ಕೆ ಮನಸ್ಸು ಮಾಡಿದ್ದಾಳೆ ಈ ಹುಡುಗಿ.

ಅಸಲಿಗೆ, ನಿತ್ಯಾ ಮೆನನ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದೇ ನಿರ್ದೇಶಕಿಯಾಗಬೇಕು ಅನ್ನುವ ಕನಸು ಹೊತ್ತು. ಮಣಿಪಾಲ್ ಇನ್ಸ್ಟಿಟ್ಯೂಟ್ ನಲ್ಲಿ ಪತ್ರಿಕೋದ್ಯಮ ಓದಿರುವ ನಿತ್ಯಾಗೆ ಪತ್ರಕರ್ತೆಯಾಗುವ ಗುರಿ ಇತ್ತು. [ನಾಗಶೇಖರ್ 'ಮೈನಾ' ಕಲರ್ ಫುಲ್ ಸೆಂಚುರಿ]
ಆದ್ರೆ, ಈಗಿನ ಪತ್ರಿಕೋದ್ಯಮದ ಬಗ್ಗೆ ತಿಳಿದುಕೊಂಡಿರುವ ನಿತ್ಯಾ, ಅದಕ್ಕೆ ತಿಲಾಂಜಲಿ ಬಿಟ್ಟು ಪುಣೆ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನದ ತರಬೇತಿ ಪಡೆದರು. ಅಲ್ಲದೇ ಅಂದೇ ಚಿತ್ರವೊಂದಕ್ಕೆ ನಿರ್ದೇಶಿಸುವುದಕ್ಕೆ ಮನಸ್ಸು ಮಾಡಿದ್ದ ನಿತ್ಯಾ, ಅಕಸ್ಮಾತ್ ಆಗಿ ನಟನೆಗೆ ಇಳಿದರು. [ಪ್ರತಿಭಾವಂತೆ ನಿತ್ಯಾಗೆ ಪೊಗರು ಜಾಸ್ತಿ ಅಂತೆ!]
ನಟನೆ ಜೊತೆ ಜೊತೆಗೆ ಗಾಯಕಿಯಾಗಿಯೂ ನಿತ್ಯಾ ಸಖತ್ ಫೇಮಸ್. ಇದೀಗ ಕೈತುಂಬಾ ಅವಕಾಶಗಳಿದ್ದರೂ, ಸದ್ದಿಲ್ಲದೇ ತಮ್ಮ ನಿರ್ದೇಶನದ ಚಿತ್ರಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರಂತೆ. ಎಲ್ಲಾ ನಿತ್ಯಾ ಪ್ಲಾನ್ ಪ್ರಕಾರ ಓಕೆ ಆದರೆ, ಸದ್ಯದಲ್ಲೇ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರಂತೆ. (ಏಜೆನ್ಸೀಸ್)


Click it and Unblock the Notifications











