ನಾಯಕಿಯಾಗಿ ತೆಲುಗಿಗೆ ನಿವೇದಿತಾ ಗೌಡ ಎಂಟ್ರಿ!

ನಿವೇದಿತ ಗೌಡ ಇತ್ತೀಚೆಗೆ ಸುದ್ದಿಯಾಗಿದ್ದು, ಮಿಸೆಸ್ ಇಂಡಿಯಾ ಸ್ಪರ್ಧೆಯ ಮೂಲಕ. ಈ ಸ್ಪರ್ಧೆಯಲ್ಲಿ ನಿವೇದಿತಾ ಭಾಗವಹಿಸಿದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಸದಾ ನಿವೇದಿತಾ ಗೌಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಿವೇದಿತಾ ಗೌಡ ಸಿನಿಮಾದಲ್ಲಿ ನಟಿಸಿಲ್ಲ, ಆದರೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಗಾಗಿದ್ದಾರೆ. ಇದರ ಜೊತೆಗೆ ನಿವೇದಿತಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾಗಿ ಗೆದ್ದು ಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿತ್ತು.

ಆದರೆ ನಿವೇದಿತಾ ಸಿನಿಮಾಗಳಲ್ಲಿ ಯಾವ ನಟಿಸುತ್ತಾರೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ನಿವೇದಿತಾ ಗೌಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಯಾವ ಸಿನಿಮಾ, ಯಾವಾಗ ನಿವೇದಿತಾ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ ಎನ್ನುವುದನ್ನು ಮುಂದೆ ಓದಿ...

ನಾಯಕಿಯಾದ ನಿವೇದಿತಾ ಗೌಡ!

ನಾಯಕಿಯಾದ ನಿವೇದಿತಾ ಗೌಡ!

ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕ ಪರಿಚಿತವಾದ ನಟಿ ನಿವೇದಿತಾ ಗೌಡ ಮೊದಲಿನಿಂದಲೂ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಹಲವು ಕಾರ್ಯಕ್ರಮಗಳ ಮೂಲಕ ನಿವೇದಿತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ನಿವೇದಿತಾ ಗೌಡ ಹೆಚ್ಚು ಸಕ್ರಿಯವಾಗಿ ಇರುವುದರ ಜೊತೆಗೆ, ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈಗ ನಿವೇದಿತಾ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಸಮಯ ಬಂದಾಯ್ತು.

ತೆಲುಗಿನಲ್ಲಿ ನಿವೇದಿತಾ ಸಿನಿಮಾ!

ತೆಲುಗಿನಲ್ಲಿ ನಿವೇದಿತಾ ಸಿನಿಮಾ!

ಇತ್ತೀಚೆಗಷ್ಟೇ ನಿವೇದಿತಾ ಮಿಸೆಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಹರಿದು ಬರುತ್ತಿದೆ. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿನಿಂದ ಹಲವು ಆಫರ್ಸ್ ಬಂದಿವೆಯಂತೆ. ಈಗಾಗಲೇ ಕಥೆ ಕೇಳಿ, ಥ್ರಿಲ್ ಆಗಿರುವ ನಿವೇದಿತಾ ಕಂಟೆಂಟ್ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಟಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು, ತಮ್ಮ ಮೊದಲ ಸಿನಿಮಾದಲ್ಲಿಯೇ ಭಿನ್ನ ಪಾತ್ರದ ಮೂಲಕ ಗಮನ ಸೆಳೆಯಲು ರೆಡಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಸಿನಿಮಾದ ಬಗ್ಗೆ ನಟಿ ನಿವೇದಿತಾ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

'Mrs.ಇಂಡಿಯಾ' ನಿವೇದಿತಾ!

ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಎಂಟ್ರಿ ಕೊಟ್ಟಾಗಿನಿಂದ, ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ನಿವೇದಿತಾ ಗೌಡ ಈ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಅಭಿಮಾನಿಗಳು ಶುಭಕೋರುತ್ತಿದ್ದರು. ಅಂತೆಯೇ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. 'ವಿನ್ನರ್ ಆಫ್ ಪೀಪಲ್ಸ್ ಚಾಯ್ಸ್ 2022 ಆಫ್ Mrs.ಇಂಡಿಯಾ.' ಎನ್ನುವ ಬಿರುದನ್ನು ನಿವೇದಿತಾ ಮುಡಿಗೇರಿಸಿಕೊಂಡಿದ್ದಾರೆ. ಅಂದರೆ, ನಿವೇದಿತಾ ಜನರ ಆಯ್ಕೆಯ ವಿಭಾಗದಲ್ಲಿ ಈ ಪ್ರಶಸ್ತಿಗೆ ಪಡೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ!

ಇನ್ನು ನಿವೇದಿತಾ ಮಿಸೆಸ್ ಇಂಡಿಯಾ ಪಟ್ಟಕ್ಕೇರಿದ ಬಳಿಕ, ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇನ್ನು ಈ ಹಿಂದೆ, ಕ್ಯಾಟ್ ವಾಕ್ ಮಾಡುವುದರಿಂದ ಹಿಡಿದು, ಸ್ಟೈಲಿಶ್ ಮ್ಯಾನರಿಸಂ ಸೇರಿದಂತೆ ಹಲವು ವಿಚಾರಗಳಲ್ಲಿ ಟ್ರೈನಿಂಗ್ ಪಡೆದು ಕೊಂಡಿದ್ದ ವಿಡಿಯೋ ಕೂಡ ಹಂಚಿಕೊಂಡಿದ್ದರು. ಇದಕ್ಕಾಗಿ ಹಲವು ಫೋಟೊ ಶೂಟ್ ಕೂಡ ಮಾಡಿಸಲಾಗಿದೆ. ಇನ್ನು ತಮ್ಮ ವೈಯಕ್ತಿಕ ಡಯೆಟ್, ಶಾಪಿಂಗ್ ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

More from Filmibeat

English summary
Actress Niveditha Gowda Entry To Tollywood As Heroine, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X