ಕನ್ನಡ ಚಿತ್ರಗಳಲ್ಲಿ ಚಾನ್ಸ್ ಸಿಕ್ಕಿಲ್ಲ ಅದಕ್ಕೆ ನಟಿಸುತ್ತಿಲ್ಲ: ನಿವೇದಿತಾ ಗೌಡ!

ನಿವೇದಿತ ಗೌಡ ಇತ್ತೀಚೆಗೆ ಸುದ್ದಿಯಾಗಿದ್ದು, ಮಿಸೆಸ್ ಇಂಡಿಯಾ ಸ್ಪರ್ಧೆಯ ಮೂಲಕ. ಈ ಸ್ಪರ್ಧೆಯಲ್ಲಿ ನಿವೇದಿತಾ ಭಾಗವಹಿಸಿದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ನಿವೇದಿತಾ ಗೌಡ ಕೂಡ ಖುಷಿಯಲ್ಲಿ ಹಂಚಿಕೊಂಡಿದ್ದಾರೆ.

Recommended Video

ನಿವೇದಿತಾ ಗೌಡ ಇನ್ಮುಂದೆ ಸಿನಿಮಾ ನಾಯಕಿ | Filmibeat Kannada

ನಿವೇದಿತಾ ಗೌಡ ಸಿನಿಮಾದಲ್ಲಿ ನಟಿಸಿಲ್ಲ, ಆದರೆ ಕಿರುತೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಿವೇದಿತಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾಗಿ ಗೆದ್ದು ಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.

ಆದರೆ ನಿವೇದಿತಾ ಸಿನಿಮಾಗಳಲ್ಲಿ ಯಾವಾಗ ನಟಿಸುತ್ತಾರೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ನಿವೇದಿತಾ ಗೌಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಅದು ಕನ್ನಡ ಸಿನಿಮಾ ಅಲ್ಲ. ತೆಲುಗು ಸಿನಿಮಾ. ಈ ಬಗ್ಗೆ ನಿವೇದಿತಾ ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ್ದಾರೆ. ನಿವೇದಿತಾ ನಾಯಕಿಯಾಗಿ ನಟಿಸುವ ಬಗ್ಗೆ ಏನ್ ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ...

ತೆಲುಗಿನಲ್ಲಿ ನಿವೇದಿತಾ ಗೌಡ ಹಿರೋಯಿನ್!

ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕ ಪರಿಚಿತವಾದ ನಟಿ ನಿವೇದಿತಾ ಗೌಡ ಮೊದಲಿನಿಂದಲೂ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಹಲವು ಕಾರ್ಯಕ್ರಮಗಳ ಮೂಲಕ ನಿವೇದಿತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ನಿವೇದಿತಾ ಗೌಡ ಹೆಚ್ಚು ಸಕ್ರಿಯವಾಗಿ ಇರುವುದರ ಜೊತೆಗೆ, ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈಗ ನಿವೇದಿತಾ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಸಮಯ ಬಂದಾಯ್ತು. ನಿವೇದಿತಾ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಕನ್ನಡದಲ್ಲಿ ನಟಿಸಲು ತುಂಬಾ ಆಸೆ ಇದೆ: ನಿವೇದಿತಾ!

ನಟಿ ನಿವೇದಿತಾ ಗೌಡ ನಾಯಾಕಿಯಾಗಿ ಅಭಿನಯಿಸುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಕನ್ನಡದಲ್ಲಿ ಅಲ್ಲ. ಬದಲಿಗೆ ತೆಲುಗಿನಲ್ಲಿ, ಈ ಬಗ್ಗೆ ಮಾತನಾಡಿರುವ ನಿವೇದಿತಾ ಕನ್ನಡದಲ್ಲಿ ಯಾಕೆ ನಟಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. "ನಾನು ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದೇನೆ. ಆದರೆ ಕನ್ನಡ ಸಿನಿಮಾಗಳಲ್ಲಿ ಅವಕಾಶ ಸಿಕ್ಕಲ್ಲ ಅದಕ್ಕೆ ಅಭಿನಯಿಸುತ್ತಿಲ್ಲ. ಇಲ್ಲಿ ತನಕ ಯಾವುದೆ ಅವಕಾಶ ಬಂದಿಲ್ಲ. ಹಾಗೊಂದು ವೇಳೆ ಕನ್ನಡದಲ್ಲಿ ಅವಕಾಶ ಸಿಕ್ಕಿದ್ದರೆ, ಖಂಡಿತಾ ಸಿನಿಮಾ ಮಾಡುತ್ತೇನೆ." ಎಂದಿದ್ದಾರೆ.

ತೆಲುಗಿನಲ್ಲಿ ನಿವೇದಿತಾ ಸಿನಿಮಾ ಖಚಿತ!

ನಿವೇದಿತಾ ಗೌಡ ತೆಲುಗಿನಲ್ಲಿ ಸಿನಿಮಾ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ. ಈಗಾಗಲೇ ಕಥೆ ಕೇಳಿದ ಅವರು, ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. "ಹೌದು ತೆಲುಗಿನಿಂದ ಆಫರ್ ಬರ್ತಿದೆ. ಇಲ್ಲ ಅಂತಲ್ಲ, ಆದರೆ ಈ ಬಗ್ಗೆ ಈಗಲೇ ಹೆಚ್ಚಿನದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಇನ್ನೂ ಎಲ್ಲವೂ ಅಂತಿಮವಾದ ಬಳಿಕ ನಾನೇ ಎಲ್ಲವನ್ನೂ ರಿವೀಲ್ ಮಾಡುತ್ತೇನೆ. ನಾಯಕ ಯಾರು, ನಿರ್ದೇಶಕ ಯಾರು ಎನ್ನುವುದನ್ನು ಈಗಲೇ ರಿವೀಲ್ ಮಾಡಲು ಸಾಧ್ಯವಿಲ್ಲ". ಎಂದು ನಿವೇದಿತಾ ಹೇಳಿದ್ದಾರೆ. ಈ ಮೂಲಕ ಟಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ನಿವೇದಿತಾ. ಇನ್ನು ಸದ್ಯದಲ್ಲಿಯೇ ತಮ್ಮ ಸಿನಿಮಾ ಬಗ್ಗೆ ನಿವೇದಿತಾ ಪ್ರಕಟ ಮಾಡಲಿದ್ದಾರೆ.

'Mrs.ಇಂಡಿಯಾ' ನಿವೇದಿತಾ ಸಿಕ್ಕಾಪಟ್ಟೆ ಬ್ಯುಸಿ!

ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಎಂಟ್ರಿ ಕೊಟ್ಟಾಗಿನಿಂದ, ಸಾಕಷ್ಟು ವಿಚಾರದಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ನಿವೇದಿತಾ ಗೌಡ ಈ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಅಭಿಮಾನಿಗಳು ಶುಭಕೋರುತ್ತಿದ್ದರು. ಅಂತೆಯೇ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. 'ವಿನ್ನರ್ ಆಫ್ ಪೀಪಲ್ಸ್ ಚಾಯ್ಸ್ 2022 ಆಫ್ Mrs.ಇಂಡಿಯಾ.' ಎನ್ನುವ ಬಿರುದನ್ನು ನಿವೇದಿತಾ ಮುಡಿಗೇರಿಸಿಕೊಂಡಿದ್ದಾರೆ. ಅಂದರೆ ನಿವೇದಿತಾ ಜನರ ಆಯ್ಕೆಯ ವಿಭಾಗದಲ್ಲಿ ಈ ಪ್ರಶಸ್ತಿಗೆ ಪಡೆದುಕೊಂಡಿದ್ದಾರೆ.

More from Filmibeat

English summary
Actress Niveditha Gowda On Not Getting Chance In Kannada Movies, She Is Doing Tollywood Films, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X