For Quick Alerts
  ALLOW NOTIFICATIONS  
  For Daily Alerts

  ಮತ್ತೆ ಐಪಿಎಲ್ ಶುರುವಾಗಿದ್ದಕ್ಕೆ ಪಾರೂಲ್ ಯಾದವ್ ಫುಲ್ ಖುಷ್

  |

  ಕೊರೊನಾ ವೈರಸ್ ಲಾಕ್‌ಡೌನ್‌ ಕಾರಣದಿಂದ ಮನರಂಜನೆಯ ಎಲ್ಲ ಕ್ಷೇತ್ರಗಳು ಬಂದ್ ಆಗಿದ್ದವು. ತಿಂಗಳುಗಳ ಕಾಲ ಮನೆಯಲ್ಲಿಯೇ ಕೂತು ಸಮಯ ಕಳೆಯಬೇಕಿತ್ತು. ಐಪಿಎಲ್ ಟೂರ್ನಿಯಾದರೂ ಇದ್ದಿದ್ದರೆ ಟೈಂ ಪಾಸ್‌ ಆಗ್ತಿತ್ತು ಎಂದು ಅದೆಷ್ಟೋ ಜನ ಅಂದುಕೊಂಡಿದ್ದು ಉಂಟು.

  ಆದ್ರೆ, ಈ ವರ್ಷ ಐಪಿಎಲ್ ಸಹ ಆಯೋಜನೆ ಮಾಡುವುದು ಕಷ್ಟಸಾಧ್ಯ ಎನ್ನಲಾಗಿತ್ತು. ಆದ್ರೀಗ, ಭಾರತದಿಂದ ದುಬೈಗೆ ಟೂರ್ನಿ ಸ್ಥಳಾಂತರಿಸಿ ಐಪಿಎಲ್ ಟೂರ್ನಿಗೆ ಚಾಲನೆ ಸಹ ಸಿಕ್ಕಿದೆ.

  ಆರಂಭ ಪಂದ್ಯ ಸೋಲಿನಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್

  ಸೆಪ್ಟೆಂಬರ್ 19 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಪಂದ್ಯ ನಡೆದಿದ್ದು, ಧೋನಿ ಸಾರಥ್ಯದ ಸಿಎಸ್‌ಕೆ ತಂಡ ಉದ್ಘಾಟನಾ ಪಂದ್ಯ ಜಯಿಸಿದೆ.

  ಕೊನೆಗೂ ಐಪಿಎಲ್ ಟೂರ್ನಿ ಆರಂಭವಾಗಿದ್ದಕ್ಕೆ ನಟಿ ಪಾರೂಲ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು, ''ಓ ದೇವರೆ ಕೊನೆಗೂ ಐಪಿಎಲ್ ಮತ್ತೆ ಬಂತು. ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಬರಿ ಕೆಟ್ಟ ಬೆಳವಣಿಗೆಳನ್ನು ನೋಡಿ ನೋಡಿ ಬೇಸತ್ತಿದ್ದ ಜನರಿಗೆ ಸ್ವಲ್ಪ ಸಮಾಧಾನ ಸಿಕ್ಕಿದೆ'' ಎಂದು ಸಂತಸಗೊಂಡಿದ್ದಾರೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada

  ಪಾರೂಲ್ ಯಾದವ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ನಟಿ ಮೇಘನಾ ಗಾಂವ್ಕರ್ ''ಹೌದು, ನಿಜ....ಸ್ವಲ್ಪನಾದರೂ ಮನರಂಜನೆ ಸಿಕ್ಕಿದ್ದಕ್ಕೆ ಖುಷಿ'' ಎಂದು ಹೇಳಿದ್ದಾರೆ.

  English summary
  Kannada actress Parul Yadav and meghana gaonkar expressed happy about IPL Season 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X