For Quick Alerts
  ALLOW NOTIFICATIONS  
  For Daily Alerts

  ಪರುಲ್ ಯಾದವ್ ನಾಟಿ ಕೋಳಿ ಐಟಂ ಸಾಂಗ್

  By ಜೀವನರಸಿಕ
  |

  'ಶ್ರಾವಣಿ ಸುಬ್ರಮಣ್ಯ' ಸಿನಿಮಾದಲ್ಲಿ ನಾಟಿಕೋಳಿಯಂತೆ ಟೇಸ್ಟಿಯಾಗಿ ಸೊಂಟ ಬಳುಕಿಸಿರೋ ಪರೂಲ್ ಈಗೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಈ ಹಾಟ್ ಬ್ಯೂಟಿ ಇನ್ಮುಂದೆ ಐಟಂ ಸಾಂಗ್ ನಕ್ಕೋ ಜಿ ಅಂದಿದ್ದಾರೆ. ಇದೇ ನನ್ನ ಮೊದಲ ಮತ್ತು ಕೊನೆಯ ಐಟಂ ಸಾಂಗ್ ಅಂದಿದ್ದಾರೆ.

  ಇನ್ಮುಂದೆ ಯಾರೇ ಆಫರ್ ಮಾಡಿದ್ರೂ ನಕ್ಕೋ ನಕ್ಕೋ ಅನ್ನೋದು ಗ್ಯಾರಂಟಿಯಂತೆ. ಆದ್ರೆ ಈಗ 'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾಗೆ ಕುಣಿದಿರೋದು ನೋಡಿದ್ರೆ ಮತ್ತೊಂದು ಐಟಂ ಸಾಂಗ್ ಗೆ ಆಫರ್ ಬರದೇ ಇರೋದಿಲ್ಲ ಅನ್ನೋ ಮಾತು ಗಾಂಧಿನಗರದ್ದು.

  ಪ್ರೊ.ಎಂ.ಕೃಷ್ಣೇಗೌಡರು ಬರೆದಿರುವ "ನಾಟಿ ಕೋಳಿ ಬೋಟಿ ಗೊಜ್ಜು, ನಾಟಿ ಹುಡುಗಿ ನಾನ್ ವೆಜ್ಜು" ಎಂಬ ಹಾಡಿಗೆ ಪರುಲ್ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ ರಾಕ್ ಲೈನ್ ಸ್ಟುಡಿಯೋದಲ್ಲಿ ಭರ್ಜರಿ ಸೆಟ್ ಹಾಕಲಾಗಿದೆ. ಸುಮಾರು ರು.35 ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ಹಾಡನ್ನು ತೆರೆಗೆ ತರಲಾಗುತ್ತಿದೆ.

  ಆದರೆ ರಾಗಿಣಿಗೆ ಸಿಕ್ಕ ಹಾಗೆ ಬಾಲಿವುಡ್ ನಲ್ಲಿ ಐಟಂ ಆಗೋಕೆ ಆಫರ್ ಬಂದ್ರೆ ಆಗೇನ್ಮಾಡ್ತೀರಾ ಅನ್ನೋ ಪ್ರಶ್ನೇನಾ ಪರ್ತಕರ್ತರ ಇನ್ನೂ ಕೇಳಿಲ್ಲ. ಇಷ್ಟಕ್ಕೂ ಪಾರುಲ್ ಹೇಳಿರೋದು ಇನ್ಮುಂದೆ ಐಟಂ ಸಾಂಗ್ ಮಾಡೋದಿಲ್ಲ ಅಂತ. ಆದರೆ ಬಾಲಿವುಡ್ ನಲ್ಲಿ ಮಾಡೋದಿಲ್ಲ ಅಂತೇನು ಹೇಳಿಲ್ಲ ಸೋ ಯಾವನಿಗ್ಗೊತ್ತು.

  ಪರೂಲ್ ಬಳುಕೋ ಬಳ್ಳಿಯಂತೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂದಾಗ ನಮ್ದೂಕೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂದಿದ್ದ ಪಡ್ಡೆಗಳು ಈಗ 'ಶ್ರಾವಣಿ ಸುಬ್ರಹ್ಮಣ್ಯ'ದ ನಾಟಿ ಕೋಳಿ ಟೇಸ್ಟಿಗೆ ಫಿದಾ ಆಗೋದು ಕನ್ಫರ್ಮ್.

  English summary
  Actress Parul Yadav to do a special number in hie next film, Shravani Subramanya, I readily agreed, even though I am against doing such songs, said the actress. Shravani Subramanya stars Golden Star Ganesh and Amoolya in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X