'ಆಣೆ ಮಾಡಿ ಹೇಳುತ್ತೇನೆ, ನನಗೆ ತಾಯ್ತನ ಬೇಡ' ಎಂದ ನಟಿ ಪಾರುಲ್ ಯಾದವ್

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಕಲಾವಿದರು ಸೇರಿದಂತೆ ಎಲ್ಲಾ ಭಾಷೆಯ ಸೆಲೆಬ್ರಿಟಿಗಳು ಸಹ ಈ ಕೃತ್ಯ ಖಂಡಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಈ ಪ್ರಕರಣ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ಪಾರುಲ್ ಯಾದವ್ ತಾನು ತಾಯಿಯಾಗುವುದಿಲ್ಲ, ಹೆಣ್ಣು ಮಗುವಾದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಾರುಲ್ ಆತಂಕ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

"ತಾಯ್ತನವೆ ಹೆಣ್ಣಿನ ಸಾರಂಶ. ಆದರೆ ಈಗ ನಾನು ತಾಯಿ ಆಗಲು ಬಯಸುವುದಿಲ್ಲ. ಒಂದು ಹೆಣ್ಣಾಗಿ ಹೀಗೆ ಹೇಳುವುದು ತುಂಬಾ ಕಷ್ಟ. ಆದರೆ ನಾನು ಆಣೆ ಮಾಡಿ ಹೇಳುತ್ತೇನೆ. ನಾನು ನಿಜಕ್ಕೂ ತಾಯ್ತನ ತ್ಯಾಜಿಸುತ್ತೇನೆ. ನನ್ನ ಮಗು ಹೆಣ್ಣಾದರೆ ಏನು ಗತಿ?. ಈ ದೇಶ ಮಹಿಳೆಯರಿಗೆ ಕ್ರೂರಿಯಾಗಿದೆ." ಎಂದು ಹೇಳಿದ್ದಾರೆ.

Actress Parul Yadav Says Dont Want To Be A Mother

ಇತ್ತೀಚಿಗೆ ಡ್ರಗ್ಸ್ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಚಾರದಲ್ಲಿ ಕೇವಲ ನಟಿಯರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ ಎಂದು ಪಾರುಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿ ಪುರುಷರು ಯಾರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ.

ಡ್ರಗ್ಸ್ ಪ್ರಕರಣದ ತನಿಖೆ ವಿರುದ್ಧವೂ ಪಾರುಲ್ ಕೆಂಡಕಾರಿದ್ದರು. ನಟಿಯರನ್ನು ಬಂಧಿಸಿ ಅವರ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತಿರುವವರ ವಿರುದ್ಧ ಪಾರುಲ್ ಕಿಡಿಕಾರಿದ್ದರು. ದೇಶದಲ್ಲಿ ಭಯಾನಕ ಸಮಸ್ಯೆಗಳು ಸಾಕಷ್ಟಿವೆ. ಆದರೆ ಅಂತಹ ವಿಷಯಗಳು ಯಾಕೆ ಚರ್ಚೆಯಾಗುತ್ತಿಲ್ಲ, ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಬೇಕು ಅಂತನೆ ಹೆಣೆದಿರುವ ತಂತ್ರವಿದು ಎಂದು ಪಾರುಲ್ ಆಕ್ರೋಶ ವ್ಯಕ್ತಡಿಸಿದ್ದರು.

Recommended Video

ಇವರೇನಾ ಗಟ್ಟಿಮೇಳದ ಆದ್ಯ! | Gattimela | Adya | Filmibeat Kannada

More from Filmibeat

English summary
Hathras gang rape case: Actress Parul Yadav condemned Hathras gang rape. Parul yadav says don't want to be a mother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X