»   » ತಾರೆ ಪಾರ್ವತಿ ಮೆಲ್ಟನ್ ಗೆ ಕೂಡಿಬಂತು ಕಂಕಣಬಲ

ತಾರೆ ಪಾರ್ವತಿ ಮೆಲ್ಟನ್ ಗೆ ಕೂಡಿಬಂತು ಕಂಕಣಬಲ

Posted By:
Subscribe to Filmibeat Kannada
ಇಂಡಿಯನ್ ಅಮೆರಿಕನ್ ತಾರೆ ಪಾರ್ವತಿ ಮೆಲ್ಟನ್ ಗೆ ಕಂಕಣಭಾಗ್ಯ ಕೂಡಿಬಂದಿದೆ. ತೆಲುಗು ಹಾಗೂ ಮಲಯಾಳಂನ ಅಲ್ಲೊಂದಿ ಇಲ್ಲೊಂದು ಚಿತ್ರಗಳಲ್ಲಿ ಅಭಿನಯಿಸಿ ಹೆಸರುವಾಸಿಗಿರುವ ಈ ನಟಿ ಕನ್ನಡದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ನಲ್ಲೂ ಅಭಿನಯಿಸಿದ್ದಾರೆ. ಆದರೆ ಆ ಚಿತ್ರ ಇನ್ನೂ ತೆರೆಕಂಡಿಲ್ಲ.

ತೆಲುಗಿನ 'ದೂಕುಡು' ಚಿತ್ರದಲ್ಲಂತೂ ಈಕೆಯ ಐಟಂ ಹಾಡಿಗೆ ಪಡ್ಡೆಗಳು ಕ್ಲೀನ್ ಬೌಲ್ಡ್ ಆಗಿದ್ದರು. ತಮ್ಮ ಬಹುಕಾಲದ ಬಾಯ್ ಫ್ರೆಂಡ್ ಕೈಹಿಡಿಯುತ್ತಿದ್ದಾರೆ ಪಾರ್ವತಿ. ಆಕೆಯ ಬಾಯ್ ಫ್ರೆಂಡ್ ಹೆಸರು ಶಂಶು ಲಲಾನಿ.

ಇವರಿಬ್ಬರ ಮದುವೆ ಇದೇ ಡಿಸೆಂಬರ್ 29ರಂದು ಮುಂಬೈನಲ್ಲಿ ನಡೆಯಲಿದೆ. ಶಂಶು ಅವರು ಮುಂಬೈನಲ್ಲಿ ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರೂ ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದು ಈಗ ಮದುವೆ ಮೂಲಕ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

ಸದ್ಯಕ್ಕೆ ಪಾರ್ವತಿ ಮೆಲ್ಟನ್ ಮುಂಬೈನಲ್ಲೇ ವಾಸಿಸುತ್ತಿದ್ದಾರೆ. ಈಕೆಯ ತಾಯಿ ಭಾರತೀಯ ಮೂಲದವರಾದರೆ ತಂದೆ ಜರ್ಮನ್ ದೇಶದವರು. ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ. ಭರತನಾಟ್ಯ ಕಲಾವಿದೆಯೂ ಆಗಿರುವ ಈಕೆ ಹಿಂದುಧರ್ಮವನ್ನು ಪಾಲಿಸುತ್ತಿದ್ದಾರೆ. (ಏಜೆನ್ಸೀಸ್)

English summary
The latest buzz is that actress Parvathi Melton is all set to enter the wedlock with her longtime boyfriend Shamsu Lalani on December 29, 2012 in Mumbai. Shamsu is a Mumbai based real estate businessman.
Please Wait while comments are loading...