ನಟಿ ಪಾರ್ವತಿ ಬಿಚ್ಚಿಟ್ಟ ಆಘಾತದ ಸುದ್ದಿ : 12 ವರ್ಷದ ಬಳಿಕ ತಿಳಿದ ಸತ್ಯ!

ಮೀ ಟೂ ವೇದಿಕೆಯಲ್ಲಿ ಭಾರತ ಚಿತ್ರರಂಗದ ಅನೇಕ ನಟಿಯರು ಈಗಾಗಲೇ ಮಾತನಾಡಿದ್ದಾರ. ಕೆಲವರು ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ್ದರೆ, ಇನ್ನು ಕೆಲವರು ನೋವಿನಲ್ಲಿ ಇರುವ ಮಹಿಳೆಯರ ಪರ ನಿಂತಿದ್ದಾರೆ.

ಬಾಲಿವುಡ್ ನಲ್ಲಿ ಶುರುವಾಗಿ ನಂತರ ಸೌತ್ ಗೆ ಬಂದಿರುವ ಮೀಟೂ ಪರಿಣಾಮ ದಕ್ಷಿಣದ ನಾಲ್ಕು ಭಾಷೆಗಳ ಮೇಲೆ ಆಗಿದೆ. ಈಗ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿರುವ ನಟಿ ಪಾರ್ವತಿ ಈ ಬಗ್ಗೆ ಮಾತನಾಡಿದ್ದಾರೆ.

ಮೀ ಟೂ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಘಟನೆಯನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

ಮಾಮಿ ಚಲನಚಿತ್ರೋತ್ಸವದಲ್ಲಿ

ಮಾಮಿ ಚಲನಚಿತ್ರೋತ್ಸವದಲ್ಲಿ

ದೆಹಲಿಯಲ್ಲಿ ಸದ್ಯ ನಡೆಯುತ್ತಿರುವ ಮಾಮಿ ಚಲನಚಿತ್ರೋತ್ಸವದಲ್ಲಿ ನಟಿ ಪಾರ್ವತಿ ಕೂಡ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೀ ಟೂ ಬಗ್ಗೆ ಮಾತನಾಡಿರುವ ಅವರು ತಮ್ಮ ಜೀವನದಲ್ಲೇ ಆದ ಕರಾಳ ಘಟನೆಯನ್ನು ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ.

ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ

ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ

ಪಾರ್ವತಿ ಅವರಿಗೆ ಬಾಲ್ಯದಲ್ಲಿಯೇ ಕೆಟ್ಟ ಅನುಭವ ಆಗಿತ್ತಂತೆ. ತಾವು ಮೂರ್ನಾಲ್ಕು ವರ್ಷದ ಹುಡುಗಿ ಆಗಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಪಾರ್ವತಿ ಹೇಳಿದ್ದಾರೆ. ಅವರ ಮಾತು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.

12 ವರ್ಷ ಬಳಿಕ

12 ವರ್ಷ ಬಳಿಕ

ಏನು ಅರಿಯದ ಆ ವಯಸ್ಸಿನಲ್ಲಿ ಆದ ಆ ಘಟನೆ ಪಾರ್ವತಿ ಅವರ ತಿಳುವಳಿಕೆಗೆ ಬಂದಿದ್ದು 17 ವರ್ಷದ ಬಳಿಕ ಅಂದರೆ 20 ವರ್ಷ ತುಂಬಿದ ಮೇಲೆ. ಆ ನಂತರ ಈ ಘಟನೆಯನ್ನು ಯಾರ ಜೊತೆಗೆ ಹೇಳಿಕೊಳ್ಳದ ಅವರು ಈಗ 12 ವರ್ಷ ಬಳಿಕ ತಮ್ಮ ನೋವು ಹಂಚಿಕೊಂಡಿದ್ದಾರೆ.

ಮೀ ಟೂ ವೇದಿಕೆಯಲ್ಲಿ ಪಾರ್ವತಿ

ಮೀ ಟೂ ವೇದಿಕೆಯಲ್ಲಿ ಪಾರ್ವತಿ

ತಮ್ಮ ಮೇಲೆ ಆದ ಈ ಕಹಿ ಘಟನೆ ಹೇಳುವ ಮೂಲಕ ಮೀಟೂ ವೇದಿಕೆಗೆ ಪಾರ್ವತಿ ಅವರ ಆಗಮನವಾಗಿದೆ. ಕನ್ನಡದ ನಟಿಯರಾದ ಶ್ರುತಿ ಹರಿಹರನ್, ಸಂಗೀತ ಭಟ್, ಸಂಜನಾ ಸೇರಿದಂತೆ ಸೌತ್ ಚಿತ್ರರಂಗದ ಸಾಕಷ್ಟು ನಟಿಯರು ಈ ಬಗ್ಗೆ ಮಾತನಾಡಿದ್ದಾರೆ.

ಸೌತ್ ನಟರು ಸಾಥ್ ನೀಡುತ್ತಿಲ್ಲ

ಸೌತ್ ನಟರು ಸಾಥ್ ನೀಡುತ್ತಿಲ್ಲ

ಇದೇ ವೇಳೆ ಮೀಟೂ ಅಭಿಯಾನಕ್ಕೆ ಸೌತ್ ಚಿತ್ರರಂಗದ ನಟರು ತಮ್ಮ ಸಾಥ್ ನೀಡುತ್ತಿಲ್ಲ ಎಂದು ಪಾರ್ವತಿ ಆರೋಪ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಈ ಅಭಿಯಾನ ಶುರು ಮಾಡಿದಾಗ ಅನೇಕ ನಟರು ಬೆಂಬಲ ಸೂಚಿಸಿದರು, ಆದರೆ, ದಕ್ಷಿಣ ಭಾರತದಲ್ಲಿ ಆ ರೀತಿ ಆಗಲಿಲ್ಲ ಎಂದಿದ್ದಾರೆ ಪಾರ್ವತಿ.

ಕನ್ನಡಿಗರಿಗೂ ಚಿರಪರಿಚಿತ

ಕನ್ನಡಿಗರಿಗೂ ಚಿರಪರಿಚಿತ

ಪಾರ್ವತಿ ಕನ್ನಡಿಗರಿಗೆ ಸಹ ಚಿರಪರಿಚಿತವಾದ ನಟಿ. ಕನ್ನಡದಲ್ಲಿ 'ಮಿಲನ', 'ಪೃಥ್ವಿ', 'ಮಳೆ ಬರಲಿ ಮಂಜು ಇರಲಿ' ಹಾಗೂ 'ಅಂದರ್ ಬಾಹರ್' ಸಿನಿಮಾಗಳಲ್ಲಿ ಪಾರ್ವತಿ ನಟಿಸಿದ್ದಾರೆ. ಒಂದು ಸಿನಿಮಾಗಿಂತ ಇನ್ನೊಂದು ಸಿನಿಮಾದಲ್ಲಿ ಬೇರೆಯದ್ದೇ ಪಾತ್ರವನ್ನು ಪ್ರಯತ್ನ ಮಾಡುವ ಇರುವ ಸೌತ್ ಚಿತ್ರರಂಗ ಕಂಡ ಪ್ರತಿಭಾವಂತ ನಟಿ.

More from Filmibeat

English summary
Actress Parvathy had been assaulted as a child. She supports Me Too campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X