For Quick Alerts
  ALLOW NOTIFICATIONS  
  For Daily Alerts

  'ರುದ್ರಿ' ಟ್ರೈಲರ್ ರಿಲೀಸ್ ವೇಳೆ ಭಾವುಕರಾದ ನಟಿ ಪಾವನಾ ಗೌಡ

  |

  ಹೆಣ್ಣುಮಕ್ಕಳ ಮೇಲಾಗುವ ದೌರ್ಜನ್ಯದ ವಿರುದ್ಧ ಹೋರಾಡುವ ಸಿನಿಮಾ 'ರುದ್ರಿ'. ಒಂದಿಷ್ಟು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ರುದ್ರಿ ಸಿನಿಮಾದ ಟ್ರೈಲರ್ ಇತ್ತೀಚಿಗಷ್ಟೆ ಚಿತ್ರಾಭಿಮಾನಿಗಳ ಮುಂದೆ ಬಂದಿದೆ. ಈ ಟ್ರೈಲರ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಯುವ ನಿರ್ದೇಶಕ ದೇವೇಂದ್ರ ಬಡಿಗೇರ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಟ್ರೈಲರ್ ನಲ್ಲಿಯೆ ಭರವಸೆ ಮೂಡಿಸಿದೆ.

  ರುದ್ರಿ ಹೆಸರೇ ಹೇಳುವ ಹಾಗೆ ಇದು ಮಹಿಳಾ ಪ್ರಧಾನ ಸಿನಿಮಾ. ಉತ್ತರ ಕರ್ನಾಟಕ ಶೈಲಿಯಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಇತ್ತೀಚಿಗೆ ಚಿತ್ರದ ಟ್ರೈಲರ್ ಅನ್ನು ಕಾನ್ರಾಡ್ ಹೋಟೆಲ್ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ರೇಣುಕಾ ಯೋಗರಾಜ್ ಭಟ್, ಮಿಷನ್ ಮಂಗಲ್ ಖ್ಯಾತಿಯ ನಿರ್ದೇಶಕ ಜಗನ್ ಶಕ್ತಿ, ನಿರ್ಮಾಪಕ ಸಿ.ಆರ್ ಮನೋಹರ್, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  'ರುದ್ರಿ'ಯ ಅವತಾರದಲ್ಲಿ ಬಂದ 'ಜಾಕ್ಸನ್' ಪಾವನಾ ಗೌಡ'ರುದ್ರಿ'ಯ ಅವತಾರದಲ್ಲಿ ಬಂದ 'ಜಾಕ್ಸನ್' ಪಾವನಾ ಗೌಡ

  ಚಿತ್ರದ ನಿರ್ದೇಶಕ ಬಡಿಗೇರ್ ದೇವೇಂದ್ರ ಮಾತನಾಡಿ, "ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅವರು ಅದನ್ನು ಅದುಮಿಟ್ಟುಕೊಳ್ಳುವುದೇ ಹೆಚ್ಚು. ಈ ರೀತಿಯ ನೈಜ ಘಟನೆಗಳು ಈ ಸಿನಿಮಾಕ್ಕೆ ಸ್ಪೂರ್ತಿ. ಎಂದು ಹೇಳಿದರು.

  ಇನ್ನು ನಟಿ ಪಾವನಾ ಮಾತನಾಡಿ ಇದು ಮಹಿಳಾ ಪ್ರಧಾನ ಚಿತ್ರ. ಅದರಲ್ಲೂ ಹೆಣ್ಣುಮಕ್ಕಳ ಮೇಲಿನ ಕಾಳಜಿಯಿಂದ ನಿರ್ಮಾಣವಾದ ಈ ಸಿನಿಮಾಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹದ ಅಗತ್ಯವಿದೆ. ಎಲ್ಲಾ ಚಿತ್ರಗಳಿಗೂ ಒಂದೇ ರೀತಿಯ ಗೌರವ, ಪ್ರೀತಿ ಸಿಗಲಿ, ಕೊನೇ ಪಕ್ಷ 2020ರಲ್ಲಿಯಾದರೂ ಕೆಲವು ಮನಸ್ಥಿತಿಗಳು ಬದಲಾಗಲಿ ಎಂದು ಮಾತನಾಡುತ್ತ ಭಾವುಕರಾದರು.

  English summary
  Kannada actress Pavana Gowda starrer women oriented film Rudri Trailer released. This movie is directed by Devendra Badiger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X