ತಮ್ಮ ಪ್ರೀತಿ ಪಾತ್ರರಿಂದ ಟ್ಯಾಟೂ ಹಾಕಿಸಿಕೊಂಡ ಪವಿತ್ರಾ ಗೌಡ; ಅದರ ಅರ್ಥ ಏನು?

By ಫಿಲ್ಮಿಬೀಟ್ ಡೆಸ್ಕ್

ನಟಿ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ದರ್ಶನ್ ಸೋಶಿಯಲ್ ಮೀಡಿಯಾ ವಾಕ್ಸಮರ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಪವಿತ್ರಾ ಗೌಡ ಮಾಡಿದ್ದ ಪೋಸ್ಟ್ ಭಾರೀ ವೈರಲ್ ಆಗಿತ್ತು. ತಮ್ಮಿಬ್ಬರ ಫೋಟೊಗಳನ್ನು ಕೂಡ ಆಕೆ ಹಂಚಿಕೊಂಡಿದ್ದರು.

ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದಾರೆ. ಆದರೆ ದರ್ಶನ್ ಜೊತೆಗೆ ಆಕೆಯ ಹೆಸರು ತಳುಕು ಹಾಕಿಕೊಂಡು ಸಾಕಷ್ಟು ಬಾರಿ ಚರ್ಚೆ ಆಗಿತ್ತು. ಒಂದೂವರೆ ತಿಂಗಳ ಹಿಂದೆ ಆಕೆಯ ಪೋಸ್ಟ್‌ ವಿಜಯಲಕ್ಷ್ಮಿ ದರ್ಶನ್‌ ಅವರನ್ನು ಕೆರಳಿಸಿತ್ತು. ಇಬ್ಬರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಏಟು- ತಿರುಗೇಟು ನಡೀತು. ಬಳಿಕ ಇಬ್ಬರೂ ಸೈಲೆಂಟ್ ಆಗಿದ್ದರು. ನಟ ದರ್ಶನ್ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

Actress Pavithra Gowda Tattooed On Her Wrist netizens Leaves Fans Guessing

ಸದ್ಯ ನಟಿ ಪವಿತ್ರಾ ಗೌಡ ಕೈಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ವೀಡಿಯೋ ವೈರಲ್ ಆಗುತ್ತಿದೆ. ಆಕೆ ಹಾಕಿಸಿಕೊಂಡಿರುವ ಟ್ಯಾಟೂ ಅರ್ಥ ಏನು ಎಂದು ಕೆಲವರು ಊಹಿಸಲು ಶುರು ಮಾಡಿದ್ದಾರೆ. ಬಿಗ್‌ಬಾಸ್ ಸೀಸನ್‌ 10ರ ಸ್ಪರ್ಧಿ ನೀತು ವನಜಾಕ್ಷಿ ಟ್ಯಾಟೂ ಸ್ಟುಡಿಯೋ ಹೊಂದಿದ್ದಾರೆ. ಪವಿತ್ರಾ ಗೌಡ ಹಾಗೂ ನೀತು ಆತ್ಮೀಯ ಸ್ನೇಹಿತರು. ಇದೀಗ ನೀತು ಅವರ ಸ್ಟುಡಿಯೋದಕ್ಕೆ ಆಕೆಯ ಕೈಯಿಂದಲೇ ಪವಿತ್ರಾ ಗೌಡ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಪವಿತ್ರಾ ಗೌಡ ತಮ್ಮ ಬಲಗೈ ಮಣಿಕಟ್ಟಿನ ಮೇಲೆ '777' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನೀತು ವನಜಾಕ್ಷಿ ಈ ವಿಡಿಯೋ ಹಂಚಿಕೊಂಡು ನನ್ನ ಪ್ರೀತಿ ಪಾತ್ರರಿಗೆ ಟ್ಯಾಟೂ ಹಾಕಿದ್ದು ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಈ ಟ್ಯಾಟೂ ಅರ್ಥ ಏನು ಎಂದು ಹುಡುಕಾಟ ನಡೆಸಿದ್ದಾರೆ.

ಅಂದಹಾಗೆ 'ಜಗ್ಗುದಾದ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಪರಿಚಯವಾಗಿತ್ತು ಎನ್ನಲಾಗುತ್ತದೆ. 2017ರ ಸುಮಾರಿಗೆ ನಟ ದರ್ಶನ್ ಜೊತೆಗಿನ ಫೋಟೊವನ್ನು ನಟಿ ಪವಿತ್ರಾ ಗೌಡ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಬಳಿಕ ಅದನ್ನು ತೆಗೆದಿದ್ದರು. ಆ ಬಳಿಕ ದರ್ಶನ್ ಕುಟುಂಬ ಸದಸ್ಯರ ಜೊತೆಗಿ ಪವಿತ್ರಾ ಗೌಡ ಕಾಣಿಸಿಕೊಂಡಿದ್ದ ಫೋಟೊಗಳು ಹೊರ ಬಂದಿತ್ತು. ಇನ್ನು 'ಕುರುಕ್ಷೇತ್ರ' ಚಿತ್ರದ ಸೆಟ್‌ಗೂ ಆಕೆ ಹೋಗಿದ್ದ ಫೋಟೊಗಳು ಲೀಕ್ ಆಗಿ ಸುದ್ದಿಯಾಗಿತ್ತು.

ಇತ್ತೀಚೆಗಷ್ಟೆ ನಟಿ ಪವಿತ್ರಾ ಗೌಡ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಿರುಗೇಟು ನೀಡಿದ್ದರು. ಪವಿತ್ರಾ ಗೌಡರ ವೈಯಕ್ತಿಕ ಜೀವನದ ಬಗ್ಗೆ ಫೋಟೊ ಸಮೇತ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು.

"ಸಾಮಾನ್ಯವಾಗಿ ನಾನು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ನನ್ನ ಫ್ಯಾಮಿಲಿ ಹಿತದೃಷ್ಟಿಯಿಂದ ಈಗ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನನಗೆ ಅನಿಸುತ್ತಿದೆ. ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಪೋಸ್ಟ್ ಮಾಡಿದ್ದರು. ಇದು ಇಲ್ಲಿಗೆ ನಿಲ್ಲಲಿಲ್ಲ. ವಿಜಯಲಕ್ಷ್ಮಿ ಪೋಸ್ಟ್‌ಗೆ ತಿರುಗೇಟು ನೀಡಿ ಪವಿತ್ರಾ ಗೌಡ ಮತ್ತೊಂದು ಪೋಸ್ಟ್ ಮಾಡಿದ್ದರು.

"ನಮ್ಮಿಬ್ಬರ ರಿಲೇಷನ್‌ಶಿಪ್‌ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಎಲ್ಲಾ ಗೊತ್ತಿತ್ತು. ಈ ಬಗ್ಗೆ ಹಲವು ಬಾರಿ ಫೋನ್ ಮಾಡಿ ಮಾತನಾಡಿದ್ದೇನೆ, ನನಗೆ ಯಾವುದೇ ಪ್ರಾಬ್ಲಂ ಇಲ್ಲ ಎಂದು ವಿಜಯಲಕ್ಷ್ಮಿ ಖುದ್ದಾಗಿ ಹೇಳಿದ್ದಾರೆ ಎಂದು ಪವಿತ್ರಾ ಗೌಡ ಪ್ರತಿಕ್ರಿಯಿಸಿದ್ದರು. ಬಳಿಕ ಈ ವಿಚಾರದ ಬಗ್ಗೆ ಇಬ್ಬರೂ ಮೌನವಹಿಸಿದರು.

More from Filmibeat

English summary
Actress Pavithra Gowda Tattooed from her bestie Nithu Vaanjaksshi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X