ಕಾಂತಾರ ಸಿನಿಮಾ ಆಡಿಷನ್‌ಗೆ ಅವಕಾಶ ಕೊಡಿ: ರಿಷಬ್ ಶೆಟ್ಟಿ ಬಳಿ ಮನವಿ ಮಾಡಿದ ಆರ್‌ಎಕ್ಸ್ 100 ಬೆಡಗಿ!
ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿಸಿದೆ. ಕಾಂತಾರ ಸಿನಿಮಾದ ಭಾಗ ಎರಡಕ್ಕಾಗಿ ಕಾಯುತ್ತಿದ್ದವರಿಗೆ ನಟ ಶಾಕ್ ನೀಡಿ, ಇದರ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ತೆಗೆಯುತ್ತೇನೆ ಎಂದಿದ್ದರು. ಇದರ ಬೆನ್ನಲ್ಲೇ ನಟ ಕಾಂತಾರ: ಅಧ್ಯಾಯ 1ರ ಮುಹೂರ್ತ ಮುಗಿಸಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಕಾಂತಾರ ಅಧ್ಯಾಯ 1ಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಾಯಕರಾಗಿದ್ದಾರೆ. ನಾಯಕಿ ಮತ್ತು ಇತರ ಪಾತ್ರಗಳ ಹುಡುಕಾಟ ನಡೆಯುತ್ತಿದೆ. ಸಿನಿಮಾ ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ 'ಕಾಂತಾರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ' ಎಂದಿದ್ದಾರೆ. ಇದಕ್ಕೆ ಮೊದಲ ಪ್ರತಿಕ್ರಿಯೆಯಾಗಿ ಖ್ಯಾತ ನಟಿ ಪಾಯಲ್ ರಜಪೂತ್ ತನ್ನನ್ನು ಆಡಿಷನ್‌ಗೆ ಕರೆಯಿರಿ ಎಂದು ಮನವಿ ಮಾಡಿದ್ದಾರೆ!.

ಆಡಿಷನ್‌ಗೆ ಕರೆಯಿರಿ ಎಂದು ರಿಷಬ್ ಶೆಟ್ಟಿಗೆ ಮನವಿ ಮಾಡಿದ ಪಾಯಲ್ ರಜಪೂತ್
ಕಾಂತಾರ ಚಿತ್ರ 2022 ರ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ. ಕಾಂತಾರ: ಅಧ್ಯಾಯ 1ಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾ ಮುಂದಿನ ವರ್ಷ ಅಥವಾ 2025 ರಲ್ಲಿ ತೆರೆಗೆ ಬರಲಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಚಿತ್ರತಂಡದ ಮೇಲೆ ನಿರೀಕ್ಷಯ ಭಾರ ಹೆಚ್ಚುತ್ತಿದೆ. ಇದರ ನಡುವೆಯೇ ಟಾಲಿವುಡ್ ನಟ ಪಾಯಲ್ ರಜಪೂತ್ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರುತ್ತಿದ್ದಾರೆ.
ಚಿತ್ರದ ಭಾಗವಾಗಲು ಬಯಸುವವರ ಆಡಿಷನ್‌ಗಾಗಿ ಕರೆ ಮಾಡಲಾಗಿತ್ತು. ಅದಕ್ಕೆ ಹಲವು ಮಂದಿ ಕಾಮೆಂಟ್ ಮಾಡಿದ್ದರು. ಅದರಲ್ಲಿ ನಟಿ ಪಾಯಲ್ ರಜಪೂತ್, "ನಾನು ಈ ಅತ್ಯುತ್ತಮ ಚಿತ್ರದ ಭಾಗವಾಗಲು ಆಸಕ್ತಿ ಹೊಂದಿದ್ದೇನೆ. ದಯವಿಟ್ಟು ನನ್ನನ್ನು ಆಡಿಷನ್‌ಗಾಗಿ ಪರಿಗಣಿಸಿ. ಪಾಯಲ್ ರಜಪೂತ್" ಎಂದು ಕಾಮೆಂಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ರಿಷಬ್ ಶೆಟ್ಟಿಗೆ ಆರ್‌ಎಕ್ಸ್ 100 ಬೆಡಗಿ ಮನವಿ
ಹೊಂಬಾಳೆ ಫಿಲ್ಮ್ಸ್ ಪೋಸ್ಟ್‌ಗೆ ಕಾಮೆಂಟ್ ಮಾಡಿದಕ್ಕಿಂತ ಹೆಚ್ಚಾಗಿ, ಪಾಯಲ್ ತಮ್ಮ ಟ್ವಿಟರ್ ಟೈಮ್‌ಲೈನ್‌ನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ತಮ್ಮ ಇತ್ತೀಚಿನ 'ಮಂಗಳವಾರಂ' ಸಿನಿಮಾವನ್ನು ನೋಡಿ ಎಂದು ಕೂಡ ಮನವಿ ಮಾಡಿದ್ದಾರೆ.

"ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಕಾಂತಾರ: ಅಧ್ಯಾಯ 1 ಗಾಗಿ ಆಡಿಷನ್‌ಗಳು ನಡೆಯುತ್ತಿವೆ ಎಂದು ನನಗೆ ತಿಳಿದಿದೆ. ಈ ಪ್ರಾಜೆಕ್ಟ್‌ಗೆ ಕೊಡುಗೆ ನೀಡಲು ನಾನು ಉತ್ಸುಕಳಾಗಿದ್ದೇನೆ. ನನ್ನ ಇತ್ತೀಚಿನ ಚಲನಚಿತ್ರ ಮಗಳವಾರಂ ಸಿನಿಮಾದಲ್ಲಿ ನನ್ನ ಅಭಿನಯಕ್ಕಾಗಿ ಹೆಚ್ಚು ಪ್ರಶಂಸೆ ಬಂದಿದೆ. ಹೀಗಾಗಿ ನೀವು ಈ ಸಿನಿಮಾ ನೋಡಲು ಸ್ವಲ್ಪ ಸಮಯ ಮೀಸಲಿಡಿ. ದಯವಿಟ್ಟು ಈ ಪ್ರಾಜೆಕ್ಟ್‌ಗಾಗಿ ಆಡಿಷನ್ ಪ್ರಕ್ರಿಯೆಯ ಕುರಿತು ಸಲಹೆ ನೀಡಿ" ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಅವರ ಹೆಸರನ್ನು ಮೆನ್ಷನ್ ಮಾಡಿದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಕಾಂತಾರದಲ್ಲಿ ಕೆಲಸ ಮಾಡುವವರು ಅರ್ಜಿ ಸಲ್ಲಿಸಿ
ಕಾಂತಾರ ಚಿತ್ರದ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ಕಾಂತಾರ ಸಿನಿಮಾದಲ್ಲಿ ಪಾತ್ರಗಳಿಗೆ ಹುಟುಕಾಟ ನಡೆಸುತ್ತಿದೆ. ಈ ಸಿನಿಮಾದಲ್ಲಿ ನಟಿಸಲು ಸಾಕಷ್ಟು ಜನರಿಗೆ ಅವಕಾಶವಿರಲಿದೆ. ಹೀಗಾಗಿ ಆಸಕ್ತರು ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ. 'ಸಿನಿಮಾದಲ್ಲಿ ನಟಿಸಲು ವಯಸ್ಸಿನ ಮಿತಿ ಇದೆ. ಕಾಂತಾರದ ಭಾಗವಾಗಲು ಬಯಸುವ ಪುರುಷರ ವಯಸ್ಸು 30 ವರ್ಷದಿಂದ 60 ವರ್ಷದ ಒಳಗೆ ಇರಬೇಕು. ಅದೇ ರೀತಿ 18 ರಿಂದ 60 ವರ್ಷದ ಮಹಿಳೆಯರು ಅರ್ಜಿ ಸಲ್ಲಿಸಬಹುದು.


Click it and Unblock the Notifications











