ಬೆತ್ತಲೆ ಬೆನ್ನು ತೋರಿದ 'ಅಭಿನೇತ್ರಿ' ಪೂಜಾಗಾಂಧಿ

By Rajendra

ಒಂದಷ್ಟು ಗ್ಯಾಪ್ ನ ಬಳಿಕ ನಟಿ ಪೂಜಾಗಾಂಧಿ ಅವರು ಮತ್ತೆ ಬೆಳ್ಳಿಪರದೆಗೆ ಅಡಿಯಿಟ್ಟಿದ್ದಾರೆ. ಈ ಬಾರಿ ಅವರು ಅರುವತ್ತು, ಎಪ್ಪತ್ತರ ದಶಕದ ತಾರೆಯೊಬ್ಬರ ಗೆಟಪ್ ನಲ್ಲಿ ಬಂದಿರುವುದು ವಿಶೇಷ. ಪೂಜಾಗಾಂಧಿ ನಟಿಸಿ, ನಿರ್ಮಿಸುತ್ತಿರುವ 'ಅಭಿನೇತ್ರಿ' ಚಿತ್ರ ಈಗಾಗಲೆ ಸೆಟ್ಟೇರಿದೆ.

ಈ ಚಿತ್ರದ ಫೋಟೋಗಳು ಶೀರ್ಷಿಕೆಗೆ ತಕ್ಕಂತೆ ಇರುವುದು ವಿಶೇಷ. ಚಿತ್ರದಲ್ಲಿನ ತಮ್ಮ ಗೆಟೆಪ್ ಬಗ್ಗೆ ಈಗಾಗಲೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಇದು ಮಿನುಗು ತಾರೆ ಕಲ್ಪನಾ ಅಥವಾ ಮಂಜುಳಾ ಅವರ ಜೀವನ ಕಥೆಯಲ್ಲಾ ಎಂದಿದ್ದಾರೆ.

ಅರುವತ್ತು, ಎಪ್ಪತ್ತರ ದಶಕದ ತಾರೆಯೊಬ್ಬಳ ಕಥೆ ಇದು ಎಂದಿರುವ ಅವರು, ಅಂದಿನ ಚಿತ್ರೋದ್ಯಮ ಹೇಗಿತ್ತು ಎಂಬ ಬಗ್ಗೆಯೂ ಬೆಳಕು ಚೆಲ್ಲುತ್ತಿದ್ದಾರೆ. ಈ ಚಿತ್ರ ಯಾವುದೇ ತಾರೆ ಕುರಿತಾದ ಚಿತ್ರವಲ್ಲ. ಅರುವತ್ತು, ಎಪ್ಪತ್ತರ ದಶಕದಲ್ಲಿ ತಾರೆಯೊಬ್ಬಳ ಕಥೆ ಎಂದಿದ್ದಾರೆ.

ಈ ಚಿತ್ರ ಡಿಫರೆಂಟ್ ಆಗಿರುತ್ತದೆ. ಹಾಗಾಗಿ ಎಪ್ಪತ್ತರ ದಶಕದ ಸೆಟ್ ಗಳು, ಕಾಸ್ಟ್ಯೂಮ್ ಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಚೆನ್ನೈನಲ್ಲಿ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ ಪೂಜಾಗಾಂಧಿ. ಸ್ಲೈಡ್ ಗಳಲ್ಲಿ ನೋಡಿ ಡಿಫರೆಂಟ್ ಗೆಟಪ್ ನಲ್ಲಿ ಪೂಜಾಗಾಂಧಿ.

ಅರುವತ್ತು, ಎಪ್ಪತ್ತರ ದಶಕದ ಅನಾವರಣೋತ್ಸವ

ಅರುವತ್ತು, ಎಪ್ಪತ್ತರ ದಶಕದ ಅನಾವರಣೋತ್ಸವ

ಕನ್ನಡ ಚಿತ್ರರಂಗದ ಮಟ್ಟಿಗೆ ಎಪ್ಪತ್ತರ ದಶಕ ಸುವರ್ಣ ಯುಗ. ಆಗ ಚೆನ್ನೈನಲ್ಲಿ ಕನ್ನಡ ಚಿತ್ರಗಳನ್ನು ರಾತ್ರಿ ವೇಳೆ ಚಿತ್ರೀಕರಿಸಲಾಗುತ್ತಿತ್ತು. ಬೆಳಗಿನ ವೇಳೆ ಸ್ಟುಡಿಯೋಗಳ ಅಭಾವ ಇತ್ತು. ಆಗಿನ ಕಾಲದ ಚಿತ್ರ ನಿರ್ಮಾಣದ ಕಷ್ಟನಷ್ಟಗಳು ಹೇಗಿದ್ದವು ಎಂಬುದನ್ನೂ ತಮ್ಮ ಚಿತ್ರದಲ್ಲಿ ಅನಾವರಣಗೊಳ್ಳಲಿದೆ ಎಂದಿದ್ದಾರೆ ಪೂಜಾಗಾಂಧಿ.

ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಸತೀಶ್ ಪ್ರಧಾನ್ ನಿರ್ದೇಶಿಸುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಪೂಜಾಗಾಂಧಿ ಜೊತೆ ಮಕರಂದ್ ದೇಶ್ ಪಾಂಡೆ, ರವಿಶಂಕರ್ ಇದ್ದಾರೆ.

ಮನೋಮೂರ್ತಿ ಅವರ ಸಂಗೀತ ಚಿತ್ರಕ್ಕಿದೆ

ಮನೋಮೂರ್ತಿ ಅವರ ಸಂಗೀತ ಚಿತ್ರಕ್ಕಿದೆ

ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ತಾರಾ ಅವರನ್ನು ಸಂಪರ್ಕಿಸಲಾಗಿದೆಯಂತೆ. ಮನೋಮೂರ್ತಿ ಅವರ ಸಂಗೀತ ಚಿತ್ರಕ್ಕಿದ್ದು ಸೆಪ್ಟೆಂಬರ್ 27ರಿಂದ ಶೂಟಿಂಗ್ ಆರಂಭ.

ಶ್ರೀಕೃಷ್ಣ ಪ್ರೊಡಕ್ಷನ್ಸ್ ಹೆಸರಿನಲ್ಲಿ ಚಿತ್ರ ನಿರ್ಮಾಣ

ಶ್ರೀಕೃಷ್ಣ ಪ್ರೊಡಕ್ಷನ್ಸ್ ಹೆಸರಿನಲ್ಲಿ ಚಿತ್ರ ನಿರ್ಮಾಣ

ಇದು ಪೂಜಾಗಾಂಧಿ ಹೋಂ ಬ್ಯಾನರ್ ಚಿತ್ರ. ತಮ್ಮ ಸ್ವಂತ ನಿರ್ಮಾಣ ಚಿತ್ರಕ್ಕೆ ಶ್ರೀಕೃಷ್ಣ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ.

ಆದರೆ ಇದು 'ದಂಡುಪಾಳ್ಯ' ಗೆಟಪ್ ಅಲ್ಲ

ಆದರೆ ಇದು 'ದಂಡುಪಾಳ್ಯ' ಗೆಟಪ್ ಅಲ್ಲ

'ದಂಡುಪಾಳ್ಯ' ಚಿತ್ರದಲ್ಲಿ ಬೀಡಿ ಸೇದುತ್ತಾ, ಸೇಂದಿ ಕುಡಿಯುತ್ತಾ ಬೆತ್ತಲೆ ಬೆನ್ನು ತೋರಿಸಿ ಸಾಕಷ್ಟು ವಾದ ವಿವಾದಕ್ಕೆ ಕಾರಣರಾಗಿದ್ದರು. ಬಳಿಕ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈಗ ವಿಭಿನ್ನ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಬೆತ್ತಲೆ ಬೆನ್ನು, ಜರತಾರಿ ಸೀರೆ ಗೆಟಪ್

ಬೆತ್ತಲೆ ಬೆನ್ನು, ಜರತಾರಿ ಸೀರೆ ಗೆಟಪ್

ಚಿತ್ರದ ಕೆಲವು ಸ್ಟಿಲ್ಸ್ ಗಳಲ್ಲಿ ಪೂಜಾಗಾಂಧಿ ಬೆತ್ತಲೆ ಬೆನ್ನು ತೋರಿದ್ದಾರೆ. ಆದರೆ ಇಲ್ಲಿ 'ದಂಡುಪಾಳ್ಯ'ದಷ್ಟು ಧಾರಾಳತೆ ಇಲ್ಲ. ಜರತಾರಿ ಸೀರೆಯಲ್ಲೂ ಮಿಂಚಿದ್ದಾರೆ.

ಮತ್ತೆ ರಾಜಕೀಯಕ್ಕೆ ಬರುವ ಸಿದ್ಧತೆಯೇ?

ಮತ್ತೆ ರಾಜಕೀಯಕ್ಕೆ ಬರುವ ಸಿದ್ಧತೆಯೇ?

ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದು ಹಾಗೂ ಮದುವೆ ಸ್ವಪ್ನಗಳು ಚದುರಿ ಹೋದ ಘಟನೆಗಳನ್ನು ಮರೆತು ಅವರು ಈಗ ಹೊಸ ಉತ್ಸಾಹದಿಂದ ಮರಳಿದ್ದಾರೆ. ಮುಂದೆಯೂ ರಾಜಕೀಯಕ್ಕೆ ಬರುವ ಸೂಚನೆಯೆ ಈ ಚಿತ್ರ?

More from Filmibeat

English summary
Here is the actress Pooja Gandhi's upcoming film Abhinetri some more different stills. Her role in Abhinetri is not about yesteryear actress Kalpana. Sathish Pradhan directed film is about a mythical heroine and the film is set in the 60's and 70's.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X