ಪೂಜಾಗಾಂಧಿ ಬೆವರಿಳಿಸಿದ ರಾಯಚೂರು ತಾಪಮಾನ

By Rajendra

ಎಸಿ ಸಿಟಿ ಬೆಂಗಳೂರಿನಲ್ಲಿ ಹಾಯಾಗಿದ್ದ ಮುಂಗಾರು ಮಳೆ ಬೆಡಗಿ ಪೂಜಾಗಾಂಧಿ 'ಬಿಸಿ' ಸಿಟಿಗೆ ಭೇಟಿ ಕೊಟ್ಟಿದ್ದೇ ಬೆವತು ಹೋಗಿದ್ದಾರೆ. ರಾಯಚೂರು ತಾಪಮಾನ ಮೊದಲೇ ಜಾಸ್ತಿ. ಇನ್ನು ಹಾಟ್ ಬೆಡಗಿಯರು ಭೇಟಿ ಕೊಟ್ಟರೆ ಇನ್ನೇನಾಗಬೇಡ.

ಪೂಜಾಗಾಂಧಿ ಅವರು ರಾಯಚೂರಿನಲ್ಲಿ ಭಾನುವಾರ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿದರು. ಬಿಸಿಬಿಸಿ ಪ್ರಚಾರದ ಜೊತೆಗೆ ಅವರು ಹನಿ ಹನಿ ಬೆವರಿ ಬಳಲಿದರು.

Actress Pooja Gandhi
ಆಗಾಗ ತಂಪು ಪಾನೀಯ, ಎಳನೀರು, ನೀರು ಕುಡಿದು ಸುಧಾರಿಸಿಕೊಂಡರು. ಆದರೂ ಅವರ ಬಳಳಿಕೆ ಕಡಿಮೆ ಆದಂತೆ ಕಾಣಲಿಲ್ಲ. ರಾಯಚೂರಿನ ಪ್ರಮುಖ ಸ್ಥಳಗಳಿಗೂ ಭೇಟಿ ನೀಡಿ ಪ್ರಚಾರ ಕೈಗೊಂಡರು.

ನಗರದ ಪ್ರಮುಖ ಸ್ಥಳ ಶಂಶಾಲಂ ದರ್ಗಾದ ಒಳಗೆ ಹೋಗಿ ಬರುವಷ್ಟರಲ್ಲಿ ಬಿಸಿಲಿಗೆ ಬಹಳಷ್ಟು ಬೆವೆತು ಹೋಗಿದ್ದರು. ತಮ್ಮ ಕಾರಿನಲ್ಲಿ ಕುಳಿತು ಎಸಿ ಆನ್ ಮಾಡಿಕೊಂಡು ನಿಟ್ಟುಸಿರು ಬಿಟ್ಟರು.

ಒಂದೆರಡು ದಿನ ಬಿಸಿಲಿಗೆ ಹೀಗಾದರೆ ಇನ್ನು ಮುಂದಿನ ಕಥೆ ಏನು ಎಂದು ರಾಯಚೂರು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಪೂಜಾಗಾಂಧಿ ಮಾತ್ರ ಸೋತರು ಅಷ್ಟೇ ಗೆದ್ದರೂ ಅಷ್ಟೇ ರಾಯಚೂರು ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
Kannada actress Pooja Gandhi exhausts in Raichur for extreme hot weather. She is busy in election campaign for BSR Congress party, she is also contesting for Karnataka assembly election 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X