For Quick Alerts
  ALLOW NOTIFICATIONS  
  For Daily Alerts

  ನಟಿ ಪೂಜಾಗಾಂಧಿ ಕ್ವಾಲಿಫಿಕೇಷನ್ ಎಸ್ಸೆಸ್ಸೆಲ್ಸಿ ಪಾಸು

  By Rajendra
  |
  ಸಿನಿಮಾ ತಾರೆಗಳ ಬಗ್ಗೆ ಅಭಿಮಾನಿಗಳಿಗೆ ಸಣ್ಣ ದೊಡ್ದ ಕುತೂಹಲಗಳು ಇರುತ್ತವೆ. ಅವರು ಏನು ಓದಿದ್ದಾರೆ? ಎಷ್ಟು ಸಂಪಾದಿಸುತ್ತಾರೆ? ಅವರ ಫಿಟ್ ನೆಸ್ ರಹಸ್ಯ ಏನು? ಸ್ವಂತ ಮನೆನಾ, ಬಾಡಿಗೆ ಮನೆಯೆ? ಹೀಗೆ ನಾನಾ ಪ್ರಶ್ನೆಗಳು ಅವರನ್ನು ಕಾಡುತ್ತಿರುತ್ತವೆ.

  ನಟಿ ಪೂಜಾಗಾಂಧಿ ಅವರು ಏನಿಲ್ಲ ಎಂದರೂ ಡಿಗ್ರಿ ಮಾಡಿರುತ್ತಾರೆ ಬಿಡ್ರಿ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರು ಓದಿರುವುದು ಕೇವಲ ಎಸ್ಸೆಸ್ಸೆಲ್ಸಿ ಎಂಬುದು ನಾಮಪತ್ರ ಸಲ್ಲಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

  ಇಷ್ಟಕ್ಕೂ ಅವರು ಓದಿರುವುದು ಮೀರತ್ ಕಂಟೋನ್ಮೆಂಟ್ ಪಬ್ಲಿಕ್ ಶಾಲೆಯಲ್ಲಿ 1999ರಲ್ಲಿ 10ನೇ ತರಗತಿ ಉತ್ತೀರ್ಣರಾಗಿದ್ದಾರೆ. ಪೂಜಾಗಾಂಧಿ ಅವರು ರಾಯಚೂರು ಕ್ಷೇತ್ರದಿಂದ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವುದು ಗೊತ್ತೇ ಇದೆ.

  ಇನ್ನೊಂದು ಕಡೆ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದ್ದು ಮುಖ ಮೇಕಪ್ ಕಂಡು ಬಹಳ ದಿನಗಳಾಗಿವೆ. ದೇಹದ ತೂಕ ನಾಲ್ಕು ಕೆ.ಜಿಗಳಷ್ಟು ಕಡಿಮೆಯಾಗಿದೆ. ಈ ಬಿಜಿ ಶೆಡ್ಯೂಲ್ ನಲ್ಲೂ ನಿತ್ಯ ಅರ್ಧಗಂಟೆ ಯೋಗ ಮಾಡುತ್ತಿದ್ದಾರೆ.

  ರಾಯಚೂರಿನಲ್ಲಿ ಬೆಳಗ್ಗೆ 5.30ಕ್ಕೆ ಎದ್ದು ಸಾಧ್ಯವಾದರೆ ಜಾಗಿಂಗ್ ಮಾಡುತ್ತಾರೆ. ಬೆಳಗ್ಗೆ 7ಕ್ಕೆ ಉಪಾಹಾರ ಸೇವನೆ, 8ಕ್ಕೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ರಾಯಚೂರು ಜನರ ಕಷ್ಟಗಳನ್ನು ನೋಡಿದಾಗ ಬಿಸಿಲು ಏನೇನೂ ಅಲ್ಲ ಅನ್ನಿಸುತ್ತದೆ ಎನ್ನುತ್ತಾರೆ ಪೂಜಾಗಾಂಧಿ. (ಏಜೆನ್ಸೀಸ್)

  English summary
  Kannada actress Pooja Gandhi contesting from election from Raichur assembly constituency. She files a nomination, she passed SSLC in the year 1999, studied at Meerut cantonment school.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X