ಪೂಜಾ ಗಾಂಧಿ ಮುಚ್ಚಿಡುತ್ತಿರುವ 'ಆ' ವಿಷಯವೇನು?

By Harshitha

ನಟಿ ಪೂಜಾ ಗಾಂಧಿ ವಿರುದ್ಧ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಾಲ ತೀರಿಸದ ಆರೋಪ ಕೇಳಿ ಬಂದಿದೆ. 'ಅಭಿನೇತ್ರಿ' ಸಿನಿಮಾ ವೇಳೆ ಸಾಲ ಪಡೆದಿದ್ದ ಪೂಜಾ ಗಾಂಧಿ ಮತ್ತು ಅವರ ತಂದೆ ಪವನ್ ಗಾಂಧಿ ಈಗ ಹಣವನ್ನ ವಾಪಸ್ ನೀಡುತ್ತಿಲ್ಲ ಅಂತ ಡಾ.ಸುರೇಶ್ ಶರ್ಮಾ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

''ಈ ಆರೋಪ ಶುದ್ಧ ಸುಳ್ಳು. ನನ್ನ ಮತ್ತು ಸುರೇಶ್ ಶರ್ಮಾ ನಡುವೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ'' ಅಂತ ಪೂಜಾ ಗಾಂಧಿ ಸ್ಪಷ್ಟ ಪಡಿಸಿದ್ದಾರೆ. [ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?]

ತಮ್ಮ ಮೇಲೆ ಬಂದಿರುವ ಆರೋಪವನ್ನ ಸಾರಾಸಗಟಾಗಿ ತಳ್ಳಿ ಹಾಕಿರುವ ಪೂಜಾ ಗಾಂಧಿ, ''ಡಾ.ಸುರೇಶ್ ಶರ್ಮಾ ಅವರ ಬಗ್ಗೆ ಕೂಡ ಹೇಳುವ ವಿಷಯಗಳು ತುಂಬಾ ಇವೆ. ಅವರಿಗೆ ಬೇಕಾಗಿದ್ದು ಸಿಗದೇ ಇರುವ ಕಾರಣಕ್ಕೆ ಈ ವಿವಾದ ಹುಟ್ಟುಹಾಕಿದ್ದಾರೆ. ಅದೇನಂಥ ನಾನು ಈಗಲೇ ಹೇಳಲ್ಲ'' ಅಂತ ಹೇಳಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

ಹಾಗಾದ್ರೆ, ಈ ವಿವಾದ ಮತ್ತು ಡಾ.ಸುರೇಶ್ ಶರ್ಮಾ ಕುರಿತು ಪೂಜಾ ಗಾಂಧಿ ಏನು ಹೇಳಿದ್ದಾರೆ? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

'ಇಮೇಜ್ ಗೆ ಡ್ಯಾಮೇಜ್ ಮಾಡುವ ಪ್ರಯತ್ನ'

'ಇಮೇಜ್ ಗೆ ಡ್ಯಾಮೇಜ್ ಮಾಡುವ ಪ್ರಯತ್ನ'

''ಇದು ನನ್ನ ಇಮೇಜ್ ಗೆ ಡ್ಯಾಮೇಜ್ ಮಾಡುವ ಪ್ರಯತ್ನ. ನನಗೂ ಇದಕ್ಕೂ ಸಂಬಂಧ ಇಲ್ಲ. ನಾನು ಸುಮಾರು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಹೊಸ ಸಿನಿಮಾ ಕೂಡ ಶುರುಮಾಡುತ್ತಿದ್ದೇನೆ. ನನ್ನ ಮೇಲೆ ಇಂತಹ ಆರೋಪ ಮಾಡಿ ಅವರು ಏನು ಪ್ರೂವ್ ಮಾಡೋಕೆ ಹೋಗ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ.'' - ಪೂಜಾ ಗಾಂಧಿ

'ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ'

'ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ'

''ನಾನು ಸಾಲ ಪಡೆದಿರುವುದು ನಿಜವಾಗಿದ್ದರೆ, 'ಅಭಿನೇತ್ರಿ' ರಿಲೀಸ್ ಟೈಮ್ ನಲ್ಲೇ ಅವರು ಹೊರಗೆ ಬರಬೇಕಿತ್ತು. ಈಗ ಆಚೆ ಬಂದು ಸುಳ್ಳು ಸುದ್ದಿ ಹಬ್ಬಿಸಿ ನನ್ನ ಇಮೇಜ್ ಗೆ ಡ್ಯಾಮೇಜ್ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ.'' - ಪೂಜಾ ಗಾಂಧಿ

'ಡರ್ಟಿ ಸಿಚ್ಯುಯೇಷನ್'

'ಡರ್ಟಿ ಸಿಚ್ಯುಯೇಷನ್'

''ಇದು ತುಂಬಾ ಡರ್ಟಿ ಸಿಚ್ಯುಯೇಷನ್ ತರಹ ಕಾಣಿಸುತ್ತಿದೆ. ನಾನು ಇದರಲ್ಲಿ ಕೆಟ್ಟವಳಾಗೋಕೆ ಇಷ್ಟ ಪಡಲ್ಲ. ನನ್ನ ಬಗ್ಗೆ ಸುಳ್ಳು ಆರೋಪ ಮಾಡಿರುವ ಡಾ.ಸುರೇಶ್ ಶರ್ಮಾ ಅವರ ಬಗ್ಗೆ ಕೂಡ ಮಾತನಾಡುವುದಕ್ಕೆ ನನ್ನ ಹತ್ತಿರ ತುಂಬಾ ವಿಷಯಗಳು ಇವೆ. ಸಮಯ ಬಂದಾಗ ಅದನ್ನೆಲ್ಲವನ್ನೂ ಹೇಳುತ್ತೇನೆ.'' - ಪೂಜಾ ಗಾಂಧಿ

'ಕ್ಯಾಮರಾ ಮುಂದೆ ಹೇಳೋ ವಿಷಯಗಳಲ್ಲ'

'ಕ್ಯಾಮರಾ ಮುಂದೆ ಹೇಳೋ ವಿಷಯಗಳಲ್ಲ'

''ಸುರೇಶ್ ಶರ್ಮಾ ಅವರ ಮೇಲೆ ನನಗೆ ತುಂಬಾ ಗೌರವ ಇತ್ತು. ಅವರು ನನಗೆ ತಂದೆ ಸಮಾನ. 'ತಿಪ್ಪಜ್ಜಿ ಸರ್ಕಲ್' ಸಿನಿಮಾದಲ್ಲಿ ಅವರ ಜೊತೆ ಆಕ್ಟ್ ಮಾಡಿದ್ದೇನೆ. ಕೆಲವು ವಿಷಯಗಳಿವೆ. ಅದನ್ನೆಲ್ಲಾ ನಾನು ಕ್ಯಾಮರಾ ಮುಂದೆ ಹೇಳೋಕೆ ಆಗಲ್ಲ. ನಾನು ಅವರನ್ನ ತಂದೆ ಸಮಾನವಾಗಿ ನೋಡ್ದೆ. ಆದರೆ, ಅವರ ದೃಷ್ಟಿ ಏನಿತ್ತು ಅಂತ ನನಗೆ ಗೊತ್ತಿಲ್ಲ. ಈಗ ನಾನು ಯಾವುದರ ಬಗ್ಗೆಯೂ ಕಾಮೆಂಟ್ ಮಾಡೋಕೆ ಇಷ್ಟ ಪಡಲ್ಲ'' - ಪೂಜಾ ಗಾಂಧಿ

'ಇದು ಮೆಂಟಲ್ Harassment'

'ಇದು ಮೆಂಟಲ್ Harassment'

''ಕೆಲವರಿಗೆ ಕೆಲವು ಸಿಗದೇ ಇದ್ದಾಗ, ಮೆಂಟಲ್ Harrasment ಕೊಡ್ತಾರೆ. ಈಗ ಅವರು ನನಗೆ ಮಾಡ್ತಿರುವುದು ಅದೇ. ತುಂಬಾ ವಿಷಯಗಳು ಇವೆ. ಈಗ ನಾನು ಏನನ್ನೂ ಹೇಳಲ್ಲ.'' - ಪೂಜಾ ಗಾಂಧಿ

'ಇದೆಲ್ಲಾ ಪಬ್ಲಿಸಿಟಿ ಸ್ಟಂಟ್'

'ಇದೆಲ್ಲಾ ಪಬ್ಲಿಸಿಟಿ ಸ್ಟಂಟ್'

''ತಿಪ್ಪಜ್ಜಿ ಸರ್ಕಲ್' ಸಿನಿಮಾ ರಿಲೀಸ್ ಮಾಡ್ಬೇಕು. ಅದು ಎರಡು ವರ್ಷದಿಂದ ನಿಂತಿದೆ. ಪಬ್ಲಿಸಿಟಿ ಸ್ಟಂಟ್ ಮಾಡೋಕೆ ಈ ತರಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.'' - ಪೂಜಾ ಗಾಂಧಿ

'ಸುರೇಶ್ ಶರ್ಮಾ ನನ್ನ ಕಾಲು ಹಿಡಿದುಕೊಂಡಿದ್ದರು'

'ಸುರೇಶ್ ಶರ್ಮಾ ನನ್ನ ಕಾಲು ಹಿಡಿದುಕೊಂಡಿದ್ದರು'

''ಒಂದು ದಿನ ಸುರೇಶ್ ಶರ್ಮಾ ಅವರು ನನ್ನ ಕಾಲು ಹಿಡಿದುಕೊಂಡಿದ್ದರು. ಅದನ್ನೆಲ್ಲಾ ನಾನು ಹೇಳಲ್ಲ'' - ಪೂಜಾ ಗಾಂಧಿ

'ತುಂಬಾ ಚೀಪ್ ಮತ್ತು ಡರ್ಟಿ'

'ತುಂಬಾ ಚೀಪ್ ಮತ್ತು ಡರ್ಟಿ'

''ಒಂದು ದಿನ ನನ್ನ ಬಳಿ ಸುರೇಶ್ ಶರ್ಮಾ ಒಂದು ಮಾತನ್ನ ಕೇಳಿದರು. ಅದನ್ನ ಹೇಳಿ ಯಾವ ಕುಟುಂಬಕ್ಕೂ ಹರ್ಟ್ ಮಾಡೋಕೆ ನಾನು ಇಷ್ಟ ಪಡಲ್ಲ. ತುಂಬಾ ಚೀಪ್ ಅಂಡ್ ಡರ್ಟಿ ಅದು. ಅದು ಸಾಧ್ಯ ಅಗ್ಲಿಲ್ಲ ಅನ್ನುವ ಕಾರಣಕ್ಕೆ ಈ ವಿವಾದ ಶುರುಮಾಡಿದ್ದಾರೆ. ಅದನ್ನೆಲ್ಲಾ ನಾನು ಚೇಂಬರ್ ಮತ್ತು ಕೋರ್ಟ್ ನಲ್ಲಿ ಹೇಳುತ್ತೇನೆ'' - ಪೂಜಾ ಗಾಂಧಿ

ಎಲ್ಲದಕ್ಕೂ ಕೋರ್ಟ್ ನಲ್ಲೇ ಉತ್ತರ

ಎಲ್ಲದಕ್ಕೂ ಕೋರ್ಟ್ ನಲ್ಲೇ ಉತ್ತರ

ಮಾಧ್ಯಮಗಳಿಗೆ ನಟಿ ಪೂಜಾ ಗಾಂಧಿ ನೀಡಿರುವ ಹೇಳಿಕೆ ಪ್ರಕಾರ ಅವರಿಗೆ ಸುರೇಶ್ ಶರ್ಮಾ ಅವರಿಂದ ಕಿರಿಕಿರಿ ಆಗುತ್ತಿತ್ತು. ಎಲ್ಲವನ್ನೂ ಕ್ಯಾಮರಾ ಮುಂದೆ ಹೇಳೋಕೆ ಇಚ್ಛಿಸದ ಪೂಜಾ ಗಾಂಧಿ, ವಿವಾದಕ್ಕೆ ಫಿಲ್ಮ್ ಚೇಂಬರ್ ಮತ್ತು ಕೋರ್ಟ್ ನಲ್ಲಿ ಉತ್ತರ ನೀಡುತ್ತೇನೆ ಅಂದಿದ್ದಾರೆ. ಹಣದ ವಿಚಾರಕ್ಕೆ ಭುಗಿಲೆದ್ದಿರುವ ಈ ವಿವಾದ ಮುಂದೆ ಯಾವ್ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡ್ಬೇಕು.

More from Filmibeat

English summary
Kannada Actress Pooja Gandhi has turned down all the allegations on her made by Producer, Actor cum Financier Suresh Sharma. Pooja Gandhi clarifies that she has not taken Rs 1 crore from Suresh Sharma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X