ಡಾ.ಸುರೇಶ್ ಶರ್ಮಾ ಸುಳ್ಳು ಹೇಳುತ್ತಿದ್ದಾರಾ?

By Harshitha

ಮಳೆ ಹುಡುಗಿ ನಟಿ ಪೂಜಾ ಗಾಂಧಿ ವಿರುದ್ಧ ಬರೋಬ್ಬರಿ ಒಂದು ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ.

ತಿಂಗಳುಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪೂಜಾ ಗಾಂಧಿಗೆ ಹಣ ನೀಡಿದ್ದ ಡಾ.ಸುರೇಶ್ ಶರ್ಮಾ ದೂರು ದಾಖಲಿಸಿದ್ದರು. ನಿನ್ನೆ ಸಂಜೆ ಅದರ ಸಂಧಾನ ಸಭೆ ಕರೆಯಲಾಗಿತ್ತು.

ನಟಿ, ನಿರ್ಮಾಪಕಿ ಪೂಜಾ ಗಾಂಧಿ, 'ಅಭಿನೇತ್ರಿ' ಚಿತ್ರದ ನಿರ್ದೇಶಕ ಸತೀಶ್ ಪ್ರಧಾನ್, ಡಾ.ಸುರೇಶ್ ಶರ್ಮಾ, ಅವರ ಸಹಾಯಕ ನಿರ್ಮಲ್ ಸೇರಿದಂತೆ ಹಲವರು ನಿನ್ನೆ ಫಿಲ್ಮ್ ಚೇಂಬರ್ ನಲ್ಲಿ ಅಧ್ಯಕ್ಷ ಥಾಮಸ್ ಡಿಸೋಜ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. [ಆ ಒಂದು ಕೋಟಿ ರೂಪಾಯಿ ಎಲ್ಲಿ ಹೋಯ್ತು.?]

Actress Pooja Gandhi Rs 1 crore loan controversy - Is Dr.Suresh Sharma lying?

ಪೂಜಾ ಗಾಂಧಿ ಮತ್ತು ಡಾ.ಸುರೇಶ್ ಶರ್ಮಾ ಅವರ ಮುಖಾಮುಖಿಗೆ ಫಿಲ್ಮ್ ಚೇಂಬರ್ ಸಾಕ್ಷಿಯಾಗಿತ್ತು. 'ಹಣ ತೆಗೆದುಕೊಂಡೇ ಇಲ್ಲ' ಅಂತ ನಟಿ ಪೂಜಾ ಗಾಂಧಿ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದರು. ಇದನ್ನ ಒಪ್ಪಿಕೊಳ್ಳದ ಡಾ.ಸುರೇಶ್ ಶರ್ಮಾ, ಒಂದು ಕೋಟಿ ಸಾಲ ಕೊಟ್ಟಿದ್ದೇನೆ ಅಂತ ವಾದಿಸಿದರು. [ನಟಿ ಪೂಜಾ ವಿರುದ್ಧ ಸುರೇಶ್ ಶರ್ಮಾ ನೀಡಿರುವ ದೂರಿನಲ್ಲೇನಿದೆ?]

'ಸಾಕ್ಷಿ' ಇದೆಯಾ? ಅಂತ ಪೂಜಾ ಗಾಂಧಿ ಪ್ರಶ್ನಿಸಿದ್ದಕ್ಕೆ, ಕ್ಷಣಕಾಲ ಡಾ.ಸುರೇಶ್ ಶರ್ಮಾ ತಬ್ಬಿಬ್ಬಾದರು. ಇಬ್ಬರ ನಡುವಿನ ವ್ಯವಹಾರಕ್ಕೆ ಸಾಕ್ಷಿ ಎನ್ನಲಾಗಿದ್ದ ಡಾ.ಸುರೇಶ್ ಶರ್ಮಾ ಸಹಾಯಕ ನಿರ್ಮಲ್ ಕೂಡ 'ಆಧಾರ' ವಿಷಯವಾಗಿ ತುಟಿ ಬಿಚ್ಚಲಿಲ್ಲ.

ಮಾಧ್ಯಮದವರು ಸಾಕ್ಷಿ ಒದಗಿಸುವಂತೆ ಕೇಳಿದಾಗ, ಇನ್ನು ಮೂರು ದಿನಗಳಲ್ಲಿ ಡಾಕ್ಯುಮೆಂಟ್ಸ್ ತರುತ್ತೇನೆ ಅಂತ ಡಾ.ಸುರೇಶ್ ಶರ್ಮಾ ಹೇಳಿದರು. [ಪೂಜಾ ಗಾಂಧಿ ಮುಚ್ಚಿಡುತ್ತಿರುವ 'ಆ' ವಿಷಯವೇನು?]

ಫೆಬ್ರವರಿಯಲ್ಲಿ ದೂರು ನೀಡಿದ್ದರೂ, ವಾಣಿಜ್ಯ ಮಂಡಳಿಗೆ ಈವರೆಗೂ ಡಾ.ಸುರೇಶ್ ಶರ್ಮಾ ಯಾಕೆ ಸಾಕ್ಷಿ ಆಧಾರಗಳನ್ನ ನೀಡಿಲ್ಲ ಅನ್ನೋದು ಈಗ ಅನೇಕರಲ್ಲಿ ಹಲವು ಅನುಮಾನಗಳನ್ನ ಹುಟ್ಟುಹಾಕಿವೆ. [ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?]

ಅಲ್ಲದೇ, ಅಲ್ಲಿದ್ದ ಯಾರೊಂದಿಗೂ ಹೆಚ್ಚು ಮಾತನಾಡದ ಡಾ.ಸುರೇಶ್ ಶರ್ಮಾ ಮೂರು ದಿನಗಳ ನಂತ್ರ ಡಾಕ್ಯುಮೆಂಟ್ಸ್ ತರುತ್ತೇನೆ ಅಂತ ಹೊರಟು ಹೋದರು. ಒಂದು ವೇಳೆ ಸಾಕ್ಷಿ ಆಧಾರಗಳನ್ನ ಒದಗಿಸಿದರೆ, ಪೂಜಾ ಗಾಂಧಿ ಸಿಕ್ಕಿಬೀಳೋದು ಖಚಿತ. ಇಲ್ಲಾಂದ್ರೆ, ಡಾ.ಸುರೇಶ್ ಶರ್ಮಾ ಸುಳ್ಳು ಹೇಳುತ್ತಿದ್ದಾರೆ ಅಂತ ವಾಣಿಜ್ಯ ಮಂಡಳಿ ನಿರ್ಧರಿಸಬಹುದೇನೋ!?

More from Filmibeat

English summary
Meeting in KFCC was held to solve the dispute between Kannada Actress Pooja Gandhi and Dr.Suresh Sharma. Since, no documents was produced, Meeting is postponed for 3 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X