For Quick Alerts
  ALLOW NOTIFICATIONS  
  For Daily Alerts

  ಹೊಸ ಉದ್ಯಮ ಪ್ರಾರಂಭಿಸಿದ್ದಾರೆ ಪೂಜಾ: ಮದುವೆಯ ಯೋಚನೆಯೂ ಇದೆ

  |

  ನಟಿ ಪೂಜಾ ಗಾಂಧಿ ಹೊಸ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. 2018 ರಲ್ಲಿ ದಂಡುಪಾಳ್ಯ 3 ನಲ್ಲಿ ಕಾಣಿಸಿಕೊಂಡಿದ್ದ ಪೂಜಾ ಗಾಂಧಿ ಆ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ಈಗ 'ಸಂಹಾರಿಣಿ' ಮೂಲಕ ಬೆಳ್ಳಿ ತೆರೆಗೆ ಮರಳಿದ್ದಾರೆ ಮಳೆ ಹುಡುಗಿ.

  ಆದರೆ ಈ ನಡುವಿನ ಸಮಯವನ್ನು ಅವರು ಸುಮ್ಮನೇ ಕಳೆದಿಲ್ಲ. ಹಲವು ಹೊಸ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಪೂಜಾ ಗಾಂಧಿ.

  ನಟಿ ಪೂಜಾ ಗಾಂಧಿ ಹೊಸ ಉದ್ಯಮವೊಂದನ್ನು ಸಹ ಪ್ರಾರಂಭಿಸಿದ್ದಾರೆ. ಮೆಡಿಕಲ್ ಸಪ್ಲೈ ಚೇನ್ ಪ್ರಾರಂಭಿಸಿರುವ ಪೂಜಾ ಗಾಂಧಿ. ಔಷಧಗಳ ಸರಬರಾಜು, ವೈದ್ಯಕೀಯ ಪರಿಕರಗಳ ಸರಬರಾಜು ಉದ್ಯಮ ನಡೆಸುತ್ತಿದ್ದಾರೆ.

  ಉದ್ಯಮವನ್ನು ಹತ್ತಿರದಿಂದ ಅವರೇ ಮೇಲ್ವಿಚಾರಣೆ ಮಾಡುತ್ತಿದ್ದು, 'ಸಿನಿಮಾ ಜೊತೆಗೆ ಕಾರ್ಪೊರೇಟ್ ಲೈಫ್ ಅನ್ನು ಸಹ ಬಹಳ ಎಂಜಾಯ್ ಮಾಡುತ್ತಿದ್ದೇನೆ, ಇದು ಬಹಳ ಭಿನ್ನವಾದ ಕ್ಷೇತ್ರ ಕಲಿಯುತ್ತಿದ್ದೇನೆ' ಎಂದಿದ್ದಾರೆ ಪೂಜಾ ಗಾಂಧಿ.

  ಮದುವೆ ಬಗ್ಗೆಯೂ ಮಾತನಾಡಿರುವ ಪೂಜಾ ಗಾಂಧಿ, 'ಎಲ್ಲದಕ್ಕೂ ಸಮಯ ಕೂಡಿಬರಬೇಕು, ಸದ್ಯಕ್ಕೆ ನಾನೀಗ 'ಹ್ಯಾಪಿಲಿ ಸಿಂಗಲ್' ಮುಂದೆ ಏನಾಗುತ್ತದೆಯೋ ನೋಡಬೇಕು. ಹಾಗೇನಾದರು ಇದ್ದರೆ ಖಂಡಿತ ಹೇಳುತ್ತೇನೆ' ಎಂದಿದ್ದಾರೆ ಪೂಜಾ ಗಾಂಧಿ.

  Recommended Video

  ನೆಟ್ಟಿಗರಿಗೆ ಪ್ರಿಯಾಂಕ ಚೋಪ್ರಾ ಏನ್ ಹೇಳಿದ್ದಾರೆ ಗೊತ್ತಾ? | Priyanka Chopra | Filmibeat Kannada

  ಪೂಜಾ ಗಾಂಧಿ ನಟಿಸಿರುವ 'ಸಂಹಾರಿಣಿ' ಸಿನಿಮಾ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ. ಸಿನಿಮಾವು ಸಂಪೂರ್ಣ ಆಕ್ಷನ್ ಸಿನಿಮಾ ಆಗಿರಲಿದೆ.

  English summary
  Actress Pooja Gandhi started new business. She also told she is happily single now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X