ಪೂಜಾ ಗೌಡ ಆಗಲಿರುವ ನಟಿ ಪೂಜಾಗಾಂಧಿ!

By ಉದಯರವಿ

ಮಹಿಳೆಯರಿಗೆ ಮದುವೆ ಎಂಬ ಮೂರಕ್ಷರದ ನಂಟಿನ ಮೂರು ಗಂಟು ಬಿದ್ದರೆ ಅವರ ಹೆಸರೂ ಬದಲಾಗುತ್ತದೆ, ಜಾತಕವೂ ಬದಲಾಗುತ್ತವೆ. ರಕ್ಷಿತಾ ಪ್ರೇಮ್, ತಾರಾ ವೇಣು, ಸ್ನೇಹಾ ಪ್ರಸನ್ನ...ಹೀಗೆ ಹಲವರನ್ನು ಉದಾಹರಿಸಬಹುದು.

ಈಗ ನೇರವಾಗಿ ವಿಷಯಕ್ಕೆ ಬರುವುದಾದರೆ ಪೂಜಾಗಾಂಧಿ ಬರಲಿರುವ 2013ರ ಏಪ್ರಿಲ್ ತಿಂಗಳಲ್ಲಿ ಹಸೆಮಣೆ ಏರುತ್ತಿದ್ದಾರೆ. ಕನ್ನಡದ ಹುಡುಗನನ್ನೇ ವರಿಸುವುದಾಗಿ ಹೇಳಿದ್ದ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ತೀರ್ಥಹಳ್ಳಿಯ ಗಂಡು ಆನಂದ್ ಗೌಡ ಅವರೊಂದಿಗೆ ಪೂಜಾಗಾಂಧಿ ನಿಶ್ಚಿತಾರ್ಥವೇನೋ ನಡೆದಿದೆ. ಇನ್ನು ಮದುವೆಗೆ ಮಂಗಳವಾದ್ಯಗಳು ಮೊಳಗಬೇಕಷ್ಟೇ. ಈಗಾಗಲೆ ಹಾರ, ತಾಂಬೂಲ ಹಾಗೂ ಉಂಗುರ ಬದಲಾಯಿಸಿಕೊಂಡಿರುವ ಪೂಜಾ ಇನ್ನು ಸಪ್ತಪದಿ ತುಳಿಯುವುದೊಂದು ಬಾಕಿ ಇದೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಆನಂದ್ ಗೌಡರಿಗೆ ಈಗಾಗಲೆ ಮದುವೆಯಾಗಿ ವಿಚ್ಛೇದನವನ್ನೂ ಪಡೆದಿದ್ದಾರೆ. ಮಾರ್ಚ್ 1, 2003ರಲ್ಲಿ ಆನಂದ್ ಅವರು ಪದ್ಮಭೂಷಣ ಬಿ.ಸರೋಜಾ ದೇವಿ ಅವರ ಮೊಮ್ಮಗಳು ಇಂದಿರಾ ಪರಮೇಶ್ವರಿ ಅವರನ್ನು ವರಿಸಿದ್ದರು.

ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನ ಪಡೆದಿದ್ದಾರೆ. ಗುರುವಾರ (ನ.15) ಕೇವಲ ಬಂಧು ಮಿತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಮದುವೆ ಬಳಿಕ ಪೂಜಾಗಾಂಧಿ ಅವರು ಪೂಜಾ ಗೌಡ ಆಗಲಿದ್ದಾರೆ ಎನ್ನುತ್ತವೆ ಮೂಲಗಳು.

More from Filmibeat

English summary
Kannada actress Pooja Gandhi engaged to a divorcee Anand Gowda at her residence on Thursday morning after rituals. The marriage is slated to take place in April 2013. Pooja Gandhi will be Pooja Gowda after marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X