ಮತ್ತೆ ಮಹೇಶ್ ಬಾಬು ಜೊತೆ ನಟಿ ಪೂಜಾ: ರಶ್ಮಿಕಾ ಜಾಗ ಕಿತ್ತುಕೊಂಡರಾ 'ಮಹರ್ಷಿ' ನಾಯಕಿ?
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸದ್ಯ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬುಗೆ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ಮಹೇಶ್ ಬಾಬು ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್ ನಟರ ಚಿತ್ರಕ್ಕೆ ಆಯ್ಕೆಯಾದ ಸಂತಸ ಮತ್ತು ಎಕ್ಸಾಯಿಟ್ ಮೆಂಟ್ ನಲ್ಲಿದ್ದಾರೆ ರಶ್ಮಿಕಾ.
ಆದ್ರೀಗ ಈ ಸಿನಿಮಾಗೆ ಮತ್ತಿಬ್ಬರ ನಾಯಕಿಯರ ಹೆಸರು ಕೇಳಿ ಬರುತ್ತಿದೆ. ಹೌದು, 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಮತ್ತು ತಮನ್ನಾ ಇಬ್ಬರು ಕಾಣಿಸಿಕೊಳ್ಳಲಿದ್ದಾರಂತೆ. ಹಾಗಂತ ಇವರು ರಶ್ಮಿಕಾ ಜಾಗವನ್ನು ಕಸಿದುಕೊಂಡಿದ್ದಾರೆ ಅಂತ ಅಂದ್ಕೋಬೇಡಿ. ಬದಲಾಗಿ ಚಿತ್ರದ ವಿಶೇಷ ಪಾತ್ರದಲ್ಲಿ ಇಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪೂಜಾ ಹೆಗ್ಡೆ ಮತ್ತು ಮಹೇಶ್ ಇಬ್ಬರು ಮಹರ್ಷಿ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಮತ್ತೆ ಎರಡನೇ ಬಾರಿ ಮಹೇಶ್ ಬಾಬು ಜೊತೆ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಚಿತ್ರದಲ್ಲಿ ಪೂಜಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಮತ್ತೊಂದೆಡೆ ನಟಿ ತಮನ್ನಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅಗಡು ಚಿತ್ರದಲ್ಲಿ ತಮನ್ನಾ ಮತ್ತು ಮಹೇಶ್ ಬಾಬು ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಮತ್ತೆ ಒಂದಾದರು ಅಚ್ಚರಿ ಇಲ್ಲ. ಆದ್ರೆ ಪೂಜಾ ಮತ್ತು ತಮನ್ನಾ ಬೇರೆ ಬೇರೆ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೋ ಅಥವಾ ಒಂದೆ ಹಾಡಿನಲ್ಲಿ ಹೆಜ್ಜೆ ಹಾಕುತ್ತಾರೋ ಎನ್ನುವ ವಿಚಾರ ರಿವೀಲ್ ಮಾಡಿಲ್ಲ.
'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಮಹೇಶ್ ಬಾಬು ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅನೀಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದೆ. ಚಿತ್ರ ಸಂಕ್ರಾಂತಿಗೆ ತೆರೆಗೆ ಬುರುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಸದ್ಯ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ.


Click it and Unblock the Notifications











