'ತಿಥಿ' ಚಿತ್ರದ ನಂತರ ಮತ್ತೆ ಬಂದ ನಟಿ ಪೂಜಾ
'ತಿಥಿ' ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಾವೇರಿ ಪಾತ್ರ ನಿರ್ವಹಿಸಿದ್ದ ನಟಿ ನೆನಪಿರುತ್ತೆ. ಈ ಚಿತ್ರದ ಅದ್ಭುತ ಅಭಿನಯಕ್ಕೆ 'ಅತ್ಯುತ್ತಮ ಪೋಷಕ ನಟಿ' ರಾಜ್ಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದರು ಈ ನಟಿ.
ಈ ಚಿತ್ರದ ನಂತರ ಪೂಜಾ ಮತ್ಯಾವ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಈಗ ಹೊಸ ಚಿತ್ರದ ಮೂಲಕ ಮತ್ತೆ ಪೂಜಾ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಹೌದು, ''ನೀವು ಕರೆ ಮಾಡಿದ ಚಂದದಾರರು ಬಿಜಿಯಾಗಿದ್ದಾರೆ'' ಎಂಬ ಚಿತ್ರಕ್ಕೆ ಪೂಜಾ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

'ದೂದ್ ಸಾಗರ್' ಚಿತ್ರವನ್ನ ನಿರ್ದೇಶನ ಮಾಡಿದ್ದ ಸ್ಯಾಮುಯಲ್ ಟೋನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ''ಲೈಫ್ ನಲ್ಲಿ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಬಿಜಿಯಾಗಿರುತ್ತಾರೆ, ಕೆಲಸವಿಲ್ಲದೇ ಹೋದರು ಕೂಡ ಬಿಜಿಯಾಗಿರುತ್ತಾರೆ'' ಎಂಬುದನ್ನ ಸಿನಿಮಾ ಮೂಲಕ ತೋರಿಸಲಿದ್ದಾರಂತೆ.

ಸದ್ಯ, ಈ ಚಿತ್ರಕ್ಕೆ ನಾಯಕಿ ಆಯ್ಕೆ ಮಾತ್ರ ಆಗಿದ್ದು, ನಾಯಕ ಹಾಗೂ ಇತರೆ ಕಲಾವಿದರ ಜೊತೆ ತಾಂತ್ರಿಕ ವರ್ಗವನ್ನ ಆಯ್ಕೆ ಆಗಬೇಕಿದೆ. ಸದ್ಯದಲ್ಲೇ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ ಚಿತ್ರತಂಡ.


Click it and Unblock the Notifications











