ಇಂತಹ ನೀಚರನ್ನ ಗೆಲ್ಲಿಸಬೇಕಾ ? ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದ ನಟಿ ಪೂನಂ ಕೌರ್..!

By ಫಿಲ್ಮಿಬೀಟ್ ಡೆಸ್ಕ್

ಲೋಕಸಭಾ ಚುನಾವಣೆಯ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಕೇವಲ ಹಾಸನದಲ್ಲಿ ಅಷ್ಟೇ ಅಲ್ಲ ಕರುನಾಡಿನೆಲ್ಲೆಡೆ ತಲುಪಿದೆ. ಸಂಚಲನ ಸೃಷ್ಟಿಸಿದೆ. ರಾಜ್ಯದೆಲ್ಲೆಡೆ ಆಕ್ರೋಶದ ಅಲೆ ಎದ್ದಿದೆ. ಪ್ರತಿಭಟನೆಗಳು ಕೂಡ ನಡೆಯುತ್ತಿವೆ.

ಇನ್ನೂ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ. ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಜೆಡಿಎಸ್‌ ಅಮಾನತುಗೊಳಿಸಿದೆ. ಇದೆಲ್ಲದರ ನಡುವೆ, ಮಾಜಿ ಸಚಿವ ರೇವಣ್ಣನ ಪುತ್ರ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೇರಿ ಕಿತ್ತಿದ್ದಾರೆ, ಜರ್ಮನಿಗೆ ಓಡಿ ಹೋಗಿದ್ದಾರೆ ಅನ್ನುವ ಸುದ್ದಿಯೂ ವ್ಯಾಪಕವಾಗಿ ಹಬ್ಬಿದೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂನಂ ಕೌರ್ ಮಾತನಾಡಿದ್ದಾರೆ. ತಮ್ಮ ಆಕ್ರೋಶವನ್ನೂ ಹೊರ ಹಾಕಿದ್ದಾರೆ

actress-poonam-kaur-criticizes-prajwal-revanna

ಹೌದು, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಅಭಿನಯಿಸಿರುವ, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಬಂಧು ಬಳಗ ಚಿತ್ರದಲ್ಲೂ ನಟಿಸಿರುವ ಪೂನಂ ಕೌರ್ ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದಿದ್ದಾರೆ. ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.

2800ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳಿವೆ. ಮಹಿಳೆಯರಿಗೆ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ ಎಂದಿರುವ ಪೂನಂ ಕೌರ್ , ಹಣ ಮತ್ತು ರಾಜಕೀಯದ ಪ್ರಭಾವ ಇರುವ ಹಿನ್ನೆಲೆ, ಸರ್ಕಾರದಿಂದ ಕೂಡ ತಪ್ಪಿಸಿಕೊಂಡ ಎಂದಿದ್ದಾರೆ. ಕರ್ನಾಟಕದಿಂದ ಕಾಲ್ಕಿತ್ತು ಸದ್ಯಕ್ಕೆ ಪ್ರಜ್ವಲ್ ಜರ್ಮನಿಯಲ್ಲಿ ನೆಮ್ಮದಿಯಾಗಿದ್ದಾನೆ. ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದಿರುವ ಪೂನಂ ಕೌರ್ ಇಂಥವರಿಗೆ ಮತ ಹಾಕಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ಜನ ತಿರುಗಿ ಬೀಳುವವರಿಗೂ ಇಂತವರನ್ನ ಶಿಕ್ಷಿಸಲು ಸಾಧ್ಯ ಇಲ್ಲ ಎಂದಿದ್ದಾರೆ.

actress-poonam-kaur-criticizes-prajwal-revanna

ಹೆಣ್ಣನ್ನೂ ಶಕ್ತಿ ಎಂದು ಪೂಜಿಸುವ ದೇಶದಲ್ಲಿ ಇಂತಹ ನೀಚರನ್ನ ಗೆಲ್ಲಿಸಬೇಕಾ ಎಂದು ಪ್ರಶ್ನೆಯನ್ನು ಕೇಳಿರುವ ಪೂನಂ ಕೌರ್‌, ಯಾರಿಗೆ ಮತ ಹಾಕಬೇಕೆಂದು, ಯೋಚಿಸಿ ಮತ ಹಾಕಿ ಅಂದಿದ್ದಾರೆ. ಮಹಿಳೆಯರಿಗೆ ರಕ್ಷಣೆ ಕೊಡುವ ಸರ್ಕಾರಕ್ಕೆ ನಿಮ್ಮ ಮತ ಹಾಕಿ ಎಂದಿದ್ದಾರೆ. ಅನ್ಯಾಯ ಮಾಡುವವರಿಗೆ ಅಧಿಕಾರ ಕೊಡಬೇಡಿ ಎಂದಿದ್ದಾರೆ

ಇನ್ನೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ವ್ಯಕ್ತಿಗೆ ಅಧಿಕಾರದ ಗದ್ದುಗೆ ಸಿಕ್ಕರೆ ಏನೆಲ್ಲ ಆಗಬಹುದು ಎಂದು ಒಮ್ಮೆ ಯೋಚಿಸಿ ಎಂಬ ಮನವಿಯನ್ನೂ ಕೂಡ ಪೂನಂ ಕೌರ್ ಮಾಡಿದ್ದಾರೆ. ಮಹಾತ್ಮ ಗಾಂಧಿ ಕಂಡ ಕನಸಿನ ರಾಮ ರಾಜ್ಯದತ್ತ ನಾವು ಹೋಗ್ತಿದ್ದೇವಾ ಅಥವಾ ರಾವಣನ ಸಾಮ್ರಾಜ್ಯ ನಿರ್ಮಾಣ ಮಾಡಲು ಅವಕಾಶ ಮಾಡಿ ಕೊಡುತ್ತಿದ್ದೇವಾ ಅನ್ನುವ ಪ್ರಶ್ನೆಯನ್ನ ಕೂಡ ಕೇಳಿದ್ದಾರೆ ಪೂನಂ ಕೌರ್.

ಇದೆಲ್ಲದರ ನಡುವೆ ರಾಜ್ಯ ಮಹಿಳಾ ಆಯೋಗ ಕೂಡ ಡಿಜಿ-ಐಜಿಪಿ ಮತ್ತು ಎಸ್​ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ. ವಿಡಿಯೋಗಳು ವೈರಲ್ ಆಗದಂತೆ ತಡೆಯಿರಿ. ವಿಡಿಯೋ ಲೀಕ್ ಆಗಿದ್ದು ಎಲ್ಲಿಂದ? ಲೀಕ್ ಮಾಡಿದ್ದು ಯಾರು? ಪ್ರಕರಣವನ್ನು ಕ್ರಿಮಿನಲ್ ಮೊಕದ್ದಮೆ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಪತ್ರ ಬರೆದಿದೆ. ಇನ್ನು ಮಹಿಳಾ ಆಯೋಗ ಸೈಬರ್ ಕ್ರೈಂ ಜೊತೆ ಸಭೆ ನಡೆಸಿದ್ದು, ವಿಡಿಯೋ ವೈರಲ್ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ವಿಡಿಯೋಗಳು ಹೆಚ್ಚು ಶೇರ್ ಆಗದಂತೆ ತಡೆಯಿರಿ ಎಂದು ಹೇಳಿದೆ.

More from Filmibeat

English summary
Actress Poonam Kaur criticized the BJP and the Modi government regarding the 'Prajwal Revanna' case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X