For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಪೂನಂ ಪಾಂಡೆ ಐಟಂಗೆ ರು.60 ಲಕ್ಷ

  By ಜೀವನರಸಿಕ
  |

  ಜ್ಞಾನಪೀಠ ಪುರಸ್ಕೃತ ಸಾಹಿತಿ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಪೂನಂ ಪಾಂಡೆ ಇದ್ದಂತೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದ ಬೆನ್ನಲ್ಲೇ ಪೂನಂ ಪಾಂಡೆ ಕನ್ನಡ ಚಿತ್ರರಂಗದಲ್ಲಿ ಸೊಂಟ ಬಳುಕಿಸಲು ರೆಡಿಯಾಗಿದ್ದಾರೆ. ಇದಕ್ಕಾಗಿ ಆಕೆ ಭಾರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.

  ಇದು ಕನ್ನಡದ ಮಟ್ಟಿಗೆ ದಾಖಲೆ. ಮಾದಕ ಚೆಲುವೆ ಪೂನಂ ಪಾಂಡೆ ಕುಣಿಯೋ ಒಂದು ಐಟಂ ಸಾಂಗ್ ಗೆ ರು.60 ಲಕ್ಷ ಕೊಡಲಾಗುತ್ತಿದೆ. ಸುತ್ತಮುತ್ತ ಗನ್ ಮ್ಯಾನ್ ಗಳು, ಬೌನ್ಸರ್ ಗಳನ್ನ ಹೊಂದಿರೋ ಪೂನಂ ಬೆಂಗಳೂರಿಗೆ ಬಂದು ಒಂದು ಹಾಡಿಗೆ ಮೈ ಬಳುಕಿಸೋಕೆ ಪಡೀತಾ ಇರೋ ಹಣ ಇಷ್ಟು.

  ಪೂನಂ ಅಕ್ಟೋಬರ್ 5ಕ್ಕೆ ಬೆಂಗಳೂರಿಗೆ ಬಂದಿಳಿಯೋದು ಗ್ಯಾರಂಟಿ ಅಂತಿದೆ 'ಲವ್ ಇಸ್ ಪಾಯಿಸನ್ ಚಿತ್ರತಂಡ. ಪೂನಂ ಬರ್ತಾಳೆ ಅನ್ನೋ ಸುದ್ದಿ ಕೇಳೀನೇ ಬೆಚ್ಚಗಾಗಿದ್ದ ಚಿತ್ರರಸಿಕರು ಈಗ ಎನೈತಿ ಅಂಥಾದ್ದೇನೈತಿ ಅಂತಿದ್ದಾರೆ.

  ರು.60 ಲಕ್ಷ ಕೊಡ್ಬೇಕು ಅಂದ್ರೆ ಪೂನಂ ಇನ್ನೂ ಅದೇನೇನು ತೋರಿಸೋದು ಇದ್ಯೋ ಅನ್ನೋ ಕುತೂಹಲ ಪಡ್ಡೆ ಸಿನಿಪ್ರೇಮಿಗಳಿಗೆ ಶುರುವಾಗಿದೆ. ಬಾಲಿವುಡ್ ನ ಸೆಕ್ಸ್ ಬಾಂಬ್ ಪೂನಂ ಪಾಂಡೆ ಅಭಿನಯದ ಮೊದಲ ಸಿನಿಮಾ 'ನಶಾ' ಮೊದಲ ಅವಕಾಶಕ್ಕಾಗಿ ಕಾದಿದ್ದ ಪೂನಂ ಅಲ್ಲೂ ಇಷ್ಟು ಹಣ ಎಣಿಸಿದ್ದಳೋ ಇಲ್ಲವೋ ಗೊತ್ತಿಲ್ಲ.

  ಇಂಡಿಯಾ ವರ್ಲ್ಡ್ ಕಪ್ ಗೆದ್ರೆ ನಗ್ನಳಾಗಿ ಮೈದಾನದಲ್ಲಿ ಕಾಣಿಸಿಕೊಳ್ತೀನಿ ಅಂದಿದ್ದಳು ಪೂನಂ ಪಾಂಡೆ. ಕಾಂಟ್ರವರ್ಸಿಯಿಂದಲೇ ಕಾಸುಗಳಿಸೋ ಮಟ್ಟಿಗೆ ಬೆಳೆದ ಹಾಟ್ ಬೆಡಗಿ ಪೂನಂಗೆ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್ಸ್ ಇದ್ದಾರೆ.

  English summary
  'Nasha' fame Poonam Pandey has been signed for an upcoming Kannada movie, Love Is Poison, in which she is expected to perform an item number. The actress bags an item number, gets Rs.60 lakh for three-day shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X