»   » 'ಕರ್ವ' ಚಿತ್ರದಲ್ಲಿ 'ವಾಲಿ' ಬೆಡಗಿ ಪೂನಂ ಸಿಂಗಾರ್.!

'ಕರ್ವ' ಚಿತ್ರದಲ್ಲಿ 'ವಾಲಿ' ಬೆಡಗಿ ಪೂನಂ ಸಿಂಗಾರ್.!

Posted By:
Subscribe to Filmibeat Kannada

2001ರಲ್ಲಿ ಬಿಡುಗಡೆ ಆದ 'ವಾಲಿ' ಚಿತ್ರ ನಿಮಗೆ ನೆನಪಿದ್ಯಾ? ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಸುದೀಪ್ ಗೆ 'ವಾಲಿ' ಚಿತ್ರದಲ್ಲಿ ಜೋಡಿ ಆಗಿದ್ದು ನಟಿ ಪೂನಂ ಸಿಂಗಾರ್.

'ವಾಲಿ' ಬಳಿಕ ಅದೇ ವರ್ಷ 'ಜೋಡಿ' ಚಿತ್ರದಲ್ಲಿ ಮಿಂಚಿದ್ದ ಪೂನಂ, ನಂತರ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡಿರ್ಲಿಲ್ಲ. 'ಆಪ್ತ' ಹಾಗೂ 'ವಿಷ್ಣು' ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರೂ, ಪೂನಂ ಸುದ್ದಿ ಆಗಿರ್ಲಿಲ್ಲ. ಇದೀಗ ಸುದೀರ್ಘ ಗ್ಯಾಪ್ ನ ನಂತರ ಪೂನಂ ನಾಳೆ ಕನ್ನಡ ಬೆಳ್ಳಿಪರದೆ ಮೇಲೆ ಮಿನುಗಲಿದ್ದಾರೆ. ಅದು 'ಕರ್ವ' ಚಿತ್ರದ ಮೂಲಕ. [ಗಟ್ಟಿ ಗುಂಡಿಗೆ ಇದ್ರೆ ಈ ವಾರ 'ಕರ್ವ' ಚಿತ್ರ ನೋಡಿರಿ.!]

actress-poonam-singar-in-kannada-movie-karva

ಹೌದು, 'ಕರ್ವ' ಚಿತ್ರದ ಮೂಲಕ ಪೂನಂ ಸಿಂಗಾರ್ ಮರಳಿ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ. ಅಷ್ಟಕ್ಕೂ ನಟಿ ಪೂನಂಗೆ ಹಾರರ್ ಚಿತ್ರವೊಂದರಲ್ಲಿ ನಟಿಸಬೇಕು ಎಂಬ ಆಸೆ ಇತ್ತಂತೆ. ಅದಕ್ಕೆ ಸರಿಯಾಗಿ 'ಕರ್ವ' ಚಿತ್ರದ ಅವಕಾಶ ಒದಗಿ ಬಂದಾಗ ಹಿಂದು ಮುಂದೆ ನೋಡದೆ ಒಪ್ಪಿಕೊಂಡರಂತೆ. [ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!']

ಹಾಗಾದ್ರೆ, 'ಕರ್ವ' ಚಿತ್ರದಲ್ಲಿ ಪೂನಂ ಪಾತ್ರವೇನು ಅಂತ ಕೇಳಿದರೆ, 'ಸಸ್ಪೆನ್ಸ್' ಎನ್ನುತ್ತಾರೆ. ಆ ಎಲ್ಲಾ ಸಸ್ಪೆನ್ಸ್ ಗೆ ಬ್ರೇಕ್ ಬೀಳುವುದು ನಾಳೆ. ಯಾಕಂದ್ರೆ, 'ಕರ್ವ' ಚಿತ್ರ ನಾಳೆ ತೆರೆಗೆ ಬರಲಿದೆ.

ನವ ನಿರ್ದೇಶಕ ನವನೀತ್ ಆಕ್ಷನ್ ಕಟ್ ಹೇಳುತ್ತಿರುವ 'ಕರ್ವ' ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್, ಆರ್.ಜೆ ರೋಹಿತ್, ತಿಲಕ್, ಅನು ಪೂವಮ್ಮ, ವಿಜಯ್ ಚೆಂಡೂರ್, ಅನಿಶಾ 'ಕರ್ವ' ಚಿತ್ರದ ಪ್ರಮುಖ ಪಾತ್ರಧಾರಿಗಳು. 'ಕರ್ವ' ಚಿತ್ರಕ್ಕೆ ಟಿಕೆಟ್ ಬುಕ್ ಮಾಡುವ ಜವಾಬ್ದಾರಿ ಈಗ ನಿಮ್ಮ ಕೈಯಲ್ಲಿ.....

English summary
Suspense-thriller film 'Karva' is all set to release on May 27th. 'Karva' features Actress Poonam Singar of 'Vali' and 'Jodi' fame in prominent role. The movie is directed by Navneeth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada