For Quick Alerts
  ALLOW NOTIFICATIONS  
  For Daily Alerts

  'ಸುವರ್ಣ ಸುಂದರಿ' ಜೊತೆ ರಮೇಶ್ ಅರವಿಂದ್ ಹೊಸ ಸಿನಿಮಾ

  |

  ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ, ನಿರ್ದೇಶಕ ರಮೇಶ್ ಅರವಿಂದ್ ಸದ್ಯ ವೀಕೆಂಡ್ ಮಿತ್ ರಮೇಶ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಅಪರೂಪಕ್ಕೆ ಒಮ್ಮೆ ಚಿತ್ರಮಂದಿರಗಳಲ್ಲೂ ದರ್ಶನ ನೀಡಿ ಹೋಗುವ ರಮೇಶ್ ಅರವಿಂದ್ ಈಗ ಸಿನಿಮಾ ನಿರ್ದೇಶನ ಮಾಡಲು ಭರ್ಜರಿ ತಯಾರಿಮಾಡಿಕೊಳ್ಳುತ್ತಿದ್ದಾರೆ.

  ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ರಮೇಶ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತು. ಈಗ ಅವರ ಜೊತೆ ಮತ್ತೊರ್ವ ನಟಿ ಸೇರ್ಪಡೆಯಾಗಿದ್ದಾರೆ. ರಮೇಶ್ ಅರವಿಂದ್ ಅವರ ಹೊಸ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಮತ್ತೋರ್ವ ನಾಯಕಿಗಾಗಿ ಅನೇಕ ದಿನಗಳಿಂದ ಹುಡುಕುತ್ತಿದ್ದ ರಮೇಶ್ ಅವರಿಂದ್ ಅವರಿಗೆ ಈಗ ನಾಯಕಿ ಸಿಕ್ಕಿದ್ದಾರೆ.

  ರಚಿತಾ ರಾಮ್ ಗೆ ರಮೇಶ್ ಅರವಿಂದ್ ನಿರ್ದೇಶನ? ರಚಿತಾ ರಾಮ್ ಗೆ ರಮೇಶ್ ಅರವಿಂದ್ ನಿರ್ದೇಶನ?

  ಸದ್ಯ ಹೊಸ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ರಮೇಶ್ ಅರವಿಂದ್ ನಿರ್ದೇಶನದ ಚಿತ್ರ ಅಂದ್ಮೇಲೆ ಚಿತ್ರಪ್ರಿಯರಲ್ಲಿ ಕುತೂಹಲ ತುಸು ಹೆಚ್ಚಾಗಿರುತ್ತೆ. ಅಂದ್ಹಾಗೆ ಇಬ್ಬರು ನಾಯಕಿಯರಲ್ಲಿ ಮತ್ತೋರ್ವ ನಾಯಕಿ ಯಾರು? ಸಿನಿಮಾ ಯಾವಾಗ ಸೆಟ್ಟೇರಲಿದೆ? ಮುಂದೆ ಓದಿ..

  ರಮೇಶ್ ಚಿತ್ರದಲ್ಲಿ ಸುವರ್ಣ ಸುಂದರಿ

  ರಮೇಶ್ ಚಿತ್ರದಲ್ಲಿ ಸುವರ್ಣ ಸುಂದರಿ

  ರಮೇಶ್ ಅರವಿಂದ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿ ಪೂರ್ಣ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಪೂರ್ಣ ಈ ಮೊದಲು ಸೂಪರ್ ಹಿಟ್ ಜೋಶ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರೇಕೇಶ್ ಅಡಿಗ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ಪೂರ್ಣ ಆ ನಂತರ ಕನ್ನಡದಲ್ಲಿ 'ಸುವರ್ಣ ಸುಂದರಿ' ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈಗ ಪೂರ್ಣ, ರಮೇಶ್ ಅರವಿಂದ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಚಿತ್ರದಲ್ಲಿ ಪೂರ್ಣ, ರಮೇಶ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  ನಿರ್ದೇಶನದ ಜೊತೆಗೆ ರಮೇಶ್ ಅಭಿನಯ

  ನಿರ್ದೇಶನದ ಜೊತೆಗೆ ರಮೇಶ್ ಅಭಿನಯ

  ರಮೇಶ್ ಅರವಿಂದ್ ನಿರ್ದೇಶನದ ಜೊತೆಗೆ ಅಭಿನಯ ಕೂಡ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಹಿಂದಿಯ ಸೂಪರ್ ಹಿಟ್ 'ಕ್ವೀನ್' ಚಿತ್ರವನ್ನು ಕನ್ನಡದಲ್ಲಿ 'ಬಟರ್ ಫ್ಲೈ' ಹೆಸರಿನಲ್ಲಿ ನಿರ್ದೇಶನ ಮಾಡಿರುವ ರಮೇಶ್, ಮತ್ಯಾವ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ. ಆದ್ರೀಗ ಇನ್ನು ಹೆಸರಿಡದ ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿರುವ ರಮೇಶ್ ಆ ಸಿನಿಮಾದಲ್ಲಿ ಅಭಿನಯ ಕೂಡ ಮಾಡುತ್ತಿದ್ದಾರೆ.

  ಐ ಲವ್ ಯೂ ಚಿತ್ರ ನೋಡಿ ರಚಿತಾ ರಾಮ್ ತಾಯಿ ಹೇಳಿದ್ದೇನು?ಐ ಲವ್ ಯೂ ಚಿತ್ರ ನೋಡಿ ರಚಿತಾ ರಾಮ್ ತಾಯಿ ಹೇಳಿದ್ದೇನು?

  ರಚಿತಾ-ರಮೇಶ್ ಎರಡನೆ ಸಿನಿಮಾ

  ರಚಿತಾ-ರಮೇಶ್ ಎರಡನೆ ಸಿನಿಮಾ

  ರಚಿತಾ ರಾಮ್ ಈ ಮೊದಲು ರಮೇಶ್ ಅರವಿಂದ ಜೊತೆ ಅಭಿನಯಿಸಿದ್ದಾರೆ. ರಮೇಶ್ ಅರವಿಂದ್ ಅಭಿನಯದ ನೂರನೆ ಸಿನಿಮಾ 'ಪುಷ್ಪಕ ವಿಮಾನ' ಸಿನಿಮಾದಲ್ಲಿ ರಮೇಶ್ ಮಗಳಾಗಿ ಕಾಣಿಸಿಕೊಂಡಿದ್ದರು. ಆದ್ರೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಇರಲಿಲ್ಲ. ಆದ್ರೀಗ ರಮೇಶ್ ಅರವ ನಿರ್ದೇಶನ ಮತ್ತು ಅಭಿನಯದ ಸಿನಿಮಾದಲ್ಲಿ ರಚಿತಾ ಅವರಿಗೆ ರಮೇಶ್ ಅರವಿಂದ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಪಡಿದುಕೊಂಡಿದ್ದಾರೆ.

  ಏ ಮಚ್ಚಾ ಶಿವಮಣಿ ಜೋಶ್ ಸೂಪರ್ ಮಗಾ! ಏ ಮಚ್ಚಾ ಶಿವಮಣಿ ಜೋಶ್ ಸೂಪರ್ ಮಗಾ!

  ರಮೇಶ್ ಅರವಿಂದ್ ಬಳಿ ಇವೆ ಎರಡು ಸಿನಿಮಾ

  ರಮೇಶ್ ಅರವಿಂದ್ ಬಳಿ ಇವೆ ಎರಡು ಸಿನಿಮಾ

  ರಮೇಶ್ ಈಗಾಗಲೆ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಭೈರಾದೇವಿ' ಚಿತ್ರದ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಿದೆ. ಸದ್ಯ 'ಶಿವಾಜಿ ಸೂರತ್ಕಲ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕೂಡ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಸಿನಿಮಾ ಜೊತೆಗೆ ಕಿರುತೆರೆಯಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರದಲ್ಲೂ ಬ್ಯುಸಿಯಾಗಿದ್ದಾರೆ. ಇದೆಲ್ಲದರ ಜೊತೆಗೆ ಹೊಸ ಸಿನಿಮಾದ ನಿರ್ದೇಶನಕ್ಕೆ ಭರ್ಜರಿ ತಯಾರಿ ಮಾಡುಕೊಳ್ಳುತ್ತಿದ್ದಾರೆ.

  English summary
  Actress poorna to joins cast of Ramesh Aravind new directorial film. Ramesh Aravind will ready to direct new movie.Actress Rachita Ram already on board.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X