For Quick Alerts
  ALLOW NOTIFICATIONS  
  For Daily Alerts

  ಸೆಕೆಂಡ್ ಹ್ಯಾಂಡ್ ಲವರ್ ಕೈಹಿಡಿದ ನಟಿ ಪ್ರಣೀತಾ

  By Rajendra
  |

  ಇತ್ತೀಚೆಗಿನ 'ಅಂಗಾರಕ' ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ 'ಬ್ರಹ್ಮ' ಚಿತ್ರಗಳಲ್ಲಿ ಅಭಿನಯಿಸಿರುವ ಬೊಂಬಾಟ್ ತಾರೆ ಪ್ರಣೀತಾ ಅವರು ಇದೀಗ ಸೆಕೆಂಡ್ ಹ್ಯಾಂಡ್ ಲವರ್ ಕೈಹಿಡಿದಿದ್ದಾರೆ. ಇದೇನಿದು ಪ್ರಣೀತಾ ಏನಾದರು ಲವ್ವಲ್ಲಿ ಬಿದ್ದರೆ! ಎಂದು ಅಚ್ಚರಿ ಬೀಳ್ಬೇಡಿ.

  ಪ್ರಣೀತಾ ಅಭಿನಯಿಸುತ್ತಿರುವ ಚಿತ್ರದ ಹೆಸರೇ 'ಎ ಸೆಕೆಂಡ್ ಹ್ಯಾಂಡ್ ಲವರ್'. ಅಜಯ್ ರಾವ್ ನಾಯಕ ನಟನಾಗಿರುವ ಈ ಚಿತ್ರವನ್ನು ರಾಘವ ಲೋಕಿ ನಿರ್ದೇಶಿಸುತ್ತಿದ್ದಾರೆ. ಪ್ರಣೀತಾ ಜೊತೆಗೆ ಮತ್ತೊಬ್ಬ ನಾಯಕಿ ಅನೀಶಾ ಆಂಬ್ರೋಸ್ ಸಹ ಚಿತ್ರದಲ್ಲಿದ್ದಾರೆ. ['ಬ್ರಹ್ಮ' ಚಿತ್ರ ವಿಮರ್ಶೆ]

  ಯಾರಿಗೆ ಯಾರು ಸೆಕೆಂಡ್ ಹ್ಯಾಂಡ್ ಲವರ್ ಆಗಲಿದ್ದಾರೆ ಎಂಬುದೇ ಚಿತ್ರದ ಕಥಾನಕ. ಈಗ ಪ್ರಣೀತಾ ಹಾಗೂ ಅನೀಶಾ ಸೆಕೆಂಡ್ ಹ್ಯಾಂಡ್ ಲವರ್ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಗುರುಕಿರಣ್ ಸಂಗೀತ, ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

  ಮೊದಲ ಹಂತದ ಚಿತ್ರೀಕರಣ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ನಡೆದಿದೆ. ಸೋಮವಾರದಿಂದ (ಫೆಬ್ರವರಿ 10ನೇ) ನಾಯಕಿ ಪ್ರಣೀತಾ ಹಾಗೂ ನಾಯಕ ಅಜಯ್ ರಾವ್ ನಡುವಿನ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗಿದೆ. ಹಾಡಿನ ಭಾಗವನ್ನೂ ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

  ಮೊದಲನೇ ಹಂತದ ಚಿತ್ರೀಕರಣ ಪೂರೈಸಿದ ಮತ್ತಷ್ಟು ಬಿರುಸಿನ ಚಿತ್ರೀಕರಣ ಮಾಡಲು ಚಿತ್ರತಂಡ ಮೈಸೂರಿಗೆ ಆಗಮಿಸಲಿದೆ. ಇವರಗೆ ಬೆಂಗಳೂರಿನಲ್ಲಿ ಮೂರು ದಿವಸಗಳ ಚಿತ್ರೀಕರಣ ಮಾಡಲಾಗಿದೆ.

  ಅಜಯ್ ರಾವ್ ಅವರಿಗೆ ಪ್ರಣೀತಾ ಹಾಗೂ ಅನಿಶಾ ಇಬ್ಬರು ನಾಯಕಿಯರು. ಕನ್ನಡದಲ್ಲಿ ಸಾಹಸ, ಪ್ರೀತಿ ಭಾವನಾತ್ಮಕ ಚಿತ್ರಗಳ ಜೊತೆಗೆ ಉತ್ತಮ ಸಂಗೀತದೊಂದಿಗೆ 'ಸತ್ಯ ಇನ್ ಲವ್, ಗಿಲ್ಲಿ, ಲಕ್ಷ್ಮಿ' ಚಿತ್ರಗಳ ಮೂಲಕ ಜನಪ್ರಿಯರಾದ ರಾಘವ್ ಲೋಕಿ ಅವರು 'ಎ ಸೆಕಂಡ್ ಹ್ಯಾಂಡ್ ಲವರ್' ಸಿನೆಮಾದ ಮೂಲಕ ಕೇವಲ ರಾಘವ್ ಮರಸುರ್ ಆಗಿದ್ದಾರೆ.

  ರಾಘವ ಮರಸೂರ್ ಸಿನೆಮಾಸ್ ಲಾಂಛನದಲ್ಲಿ ಚಿತ್ರವನ್ನು ಮಂಜುನಾಥ್ ನಿರ್ಮಿಸುತ್ತಿದ್ದಾರೆ. ಆನಂದ ಪ್ರಿಯ ಅವರ ಸಂಭಾಷಣೆ, ಕವಿರಾಜ್ ಅವರ ಗೀತ ಸಾಹಿತ್ಯ, ಹರ್ಷ ಹಾಗೂ ಮುರಳಿ ಅವರ ನೃತ್ಯ ಈ ಚಿತ್ರಕ್ಕಿದೆ. 'ಎ ಸೆಕಂಡ್ ಹ್ಯಾಂಡ್ ಲವರ್' ಚಿತ್ರದ ಪೋಷಕ ಕಲಾವಿದರ ತಂಡದಲ್ಲಿ ಸಾಧು ಕೋಕಿಲ, ಐಶ್ವರ್ಯ, ವಿಶ್ವ, ಗಿರಿ, ರಾಮಕೃಷ್ಣ ಹಾಗೂ ಇತರರು ಇದ್ದಾರೆ. (ಏಜೆನ್ಸೀಸ್)

  English summary
  Actress Pranitha Subhash has been selected as the heroine for Ajay Rao starrer 'A Second Hand Lover' being directed by Raghava Loki. The film which has the story of a rock star has music by Gurukiran and cinematography by Chandrashekhar. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X