ದೀಪಾ ಸನ್ನಿಧಿ ಬಿಟ್ಟ 'ಬಚ್ಚನ್' ಜಾಗಕ್ಕೆ ಈಗ ಪ್ರಣೀತಾ

ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದಿಂದ ನಟಿ ದೀಪಾ ಸನ್ನಿಧಿ ಔಟ್ ಆಗಿರುವ ಸುದ್ದಿ ಈಗ ಹಳೆಯದು. ಹೊಸ ಸುದ್ದಿಯೆಂದರೆ ಆ ಜಾಗಕ್ಕೀಗ ನಟಿ ಪ್ರಣೀತಾ ಬಂದಿದ್ದಾರೆ. ಬಚ್ಚನ್ ಚಿತ್ರದ ಮೂವರು ನಾಯಕಿಯರಲ್ಲಿ ಮೊಟ್ಟಮೊದಲಿಗರಾಗಿ ಆಯ್ಕೆಯಾಗಿದ್ದ ದೀಪಾ, ನಂತರ ಪಾತ್ರದಲ್ಲಿ ಆದ ಬದಲಾವಣೆಯಿಂದ ಹೊರಹೋಗಿದ್ದಾರೆ.

ಸದ್ಯದ ಮಾಹಿತಿಯಂತೆ, ಬಚ್ಚನ್ ಚಿತ್ರಕ್ಕೆ ಮೂವರು ನಾಯಕಿಯರಾಗಿ ಪಾರುಲ್ ಯಾದವ್, ಜಾಕಿ ಭಾವನಾ ಹಾಗೂ ಪ್ರಣೀತಾ ಆಯ್ಕೆಯಾಗಿದ್ದಾರೆ. ಜಾಕಿ ಖ್ಯಾತಿಯ ಭಾವನಾ ಜಾಗಕ್ಕೆ ನಯನತಾರಾ ಬರಬೇಕಿತ್ತು. ಆದರೆ ಕೊನೆ ಘಳಿಗೆಯಲ್ಲಿ ಕೈಎತ್ತಿದ ನಯನತಾರಾ ಬದಲಿಗೆ ಬಂದವರು ಭಾವನಾ. ನಂತರ 'ದೀಪಾ ಔಟ್, ಪ್ರಣೀತಾ ಇನ್'.

"ಈ ಮೊದಲು ಇದ್ದಂತೆ ದೀಪಾ ಪಾತ್ರವಿಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೀಗಾಗಿ ಈಗ ಆ ಪಾತ್ರ ದೀಪಾ ಸನ್ನಿಧಿಗೆ ಸೂಟ್ ಆಗುವುದಿಲ್ಲ. ಈ ವಿಷಯವನ್ನು ನಾವಿಬ್ಬರೂ ಚರ್ಚಿಸಿದ ನಂತರವೇ ದೀಪಾ ಹೊರಗುಳಿದಿದ್ದಾರೆ ಎಂದು ಶಶಾಂಕ್ ಹೇಳಿದ್ದಾರೆ. ಅವರ ಮಾತನ್ನು 'ಹೌದು, ಅದೇ ನಿಜ' ಎನ್ನುವ ಮೂಲಕ ಈ ದೀಪಾ ಹಾಗೂ ಶಶಾಂಕ್ ಇಬ್ಬರೂ ಯಾವುದೇ ವಿವಾದ ಆಗದಂತೆ ನೋಡಿಕೊಂಡಿದ್ದಾರೆ.

ಆದರೆ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಗಾಂಧಿನಗರದಿಂದ ಬಂದ ವರ್ತಮಾನ ಬೇರೆಯದೇ ಆಗಿತ್ತು. ಬಚ್ಚನ್ ಚಿತ್ರದಿಂದ ದೀಪಾ ಸನ್ನಿಧಿ ಔಟ್ ಆಗಲು ಬಚ್ಚನ್ ನಾಯಕ ಕಿಚ್ಚ ಸುದೀಪ್ ಕಾರಣ ಎನ್ನಲಾಗಿತ್ತು. ನಿಜ ವಿಷಯ ಏನೋ! ಆದರೆ ಈಗ ದೀಪಾ ಜಾಗಕ್ಕೆ ಪ್ರಣೀತಾ ಬಂದಿರುವುದರಿಂದ ಇನ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ನಟಿ ಪ್ರಣೀತಾ ಕನ್ನಡ ಮೂಲದ ನಟಿಯಾದರೂ ತಮಿಳು ಹಾಗೂ ತೆಲುಗಿನಲ್ಲೂ ನಟಿಸಿದ್ದಾರೆ. ಕಾರ್ತಿ ಜೊತೆ ಪ್ರಣೀತಾ ನಟಿಸಿರುವ 'ಸಗುನಿ (ಕನ್ನಡದಲ್ಲಿ ಶಕುನಿ)' ಚಿತ್ರ ತಮಿಳುನಾಡಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಪ್ರಣೀತಾ ಸಿಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಬಚ್ಚನ್ ಚಿತ್ರಕ್ಕೆ ಬರುವ ಮೂಲಕ ಮತ್ತೆ ಕನ್ನಡ ಚಿತ್ರಕ್ಕೆ ನಾಯಕಿ ಎನಿಸಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Pranitha selected for Shashank movie Bachchan. Kichcha Sudeep is Lead in Bachchan movie and Pranitha is one of Heroine in the three. Before this, actress Deepa Sannidhi selected and went out from this movie. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X