For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶಾಲೆಗೆ ಮರಳಿದ ನಟಿ ಪ್ರಣೀತಾ ಸುಭಾಷ್

  |

  ಪ್ರಣೀತಾ ಈಗ ಏನು ಮಾಡ್ತಿದ್ದಾರೆ ಅಂತ ಅಭಿಮಾನಿಗಳಿಲ್ಲಿ ಕುತೂಹಲ ಇದೆ. ಯಾಕೆಂದರೆ 'ಮಾಸ್ ಲೀಡರ್' ಚಿತ್ರದ ನಂತರ ಪ್ರಣೀತಾ ಸ್ಯಾಂಡಲ್ ವುಡ್ ಪ್ರೇಕ್ಷಕರ ಮುಂದೆ ಬಂದಿಲ್ಲ. ಅನೇಕ ದಿನಗಳ ಬಳಿಕ ಪ್ರಣೀತಾ ಈಗ ಒಂದು ಶಾಲೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಿನಿಮಾ ಬಿಟ್ಟು ಶಾಲೆ ಸೇರಿದ್ರಾ ಅಂತ ಅಚ್ಚರಿ ಪಡಬೇಡಿ. ಪ್ರಣೀತಾ ಮತ್ತೆ ಶಾಲೆ ಮೆಟ್ಟಿಲು ಹತ್ತಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ.

  ಈ ಹಿಂದೆ ಪ್ರಣೀತಾ ಹಾಸನ ಜಿಲ್ಲೆಯ ಒಂದು ಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ತೆಗೊಂಡಿದ್ದರು. ಹೋಳಿ ಹಬ್ಬದ ಪ್ರಯುಕ್ತ ಶಾಲೆಗೆ ತೆರಳಿದ ಪ್ರಣೀತಾ ಮಕ್ಕಳಿಗೆ ಇಷ್ಟವಾಗುವ ಹಾಗೆ ವಿವಿಧ ಬಣ್ಣಗಳಿಂದ ಗೋಡೆಗಳಿಗೆ ಪೇಯಿಂಟ್ ಮಾಡಿ ಗೋಡೆಗಳ ಮೇಲೆ ಆಕರ್ಷಕವಾದ ಚಿತ್ರಗಳನ್ನು ಬಿಡಿಸಿದ್ದಾರೆ. ಪ್ರಣೀತಾ ಅವರ ಈ ಕೆಲಸಕ್ಕೆ ಒಂದು ಎನ್ ಜಿ ಓ ಸಂಸ್ಥೆ ಸಾಥ್ ನೀಡಿದೆ. ಈ ಮೂಲಕ ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

  ಕನ್ನಡ ನಟಿ ಪ್ರಣೀತಾ ಸುಭಾಷ್ ಮಾಡಿದ ಕೆಲಸಕ್ಕೆ ಭೇಷ್ ಎನ್ನಬೇಕುಕನ್ನಡ ನಟಿ ಪ್ರಣೀತಾ ಸುಭಾಷ್ ಮಾಡಿದ ಕೆಲಸಕ್ಕೆ ಭೇಷ್ ಎನ್ನಬೇಕು

  ಸ್ಟಾರ್ ನಟಿ ಎನ್ನುವುದನ್ನು ಬದಿಗಿಟ್ಟು ಶಾಲೆಗೋಸ್ಕರ, ಮಕ್ಕಳಿಗೋಸ್ಕರ ಸ್ವತಃ ಪ್ರಣೀತಾ ಪೇಯಿಂಟ್ ಮಾಡುವ ರಿಸ್ಕ್ ತೆಗೆದುಕೊಂಡಿದ್ದರು. ಶಾಲೆ ಈಗ ಕಲರ್ ಕಲರ್ ಬಣ್ಣಗಳಿಂದ ಕಂಗೊಳಿಸುತ್ತಿದೆ. ಶಾಲೆಗೋಸ್ಕರ ಬಣ್ಣ ಬಳಿದ ಕೈಗಳ ಮೂಲಕ ಹೋಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ ನಟಿ ಪ್ರಣೀತಾ.

  ದತ್ತು ಪಡೆದ ಶಾಲೆಯನ್ನು ಪ್ರಣೀತಾ ಸಾಕಷ್ಟು ಅಭಿವೃದ್ದಿ ಪಡಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ತೆ, ಸ್ವಚ್ಚತೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ತೆ ಮಾಡಿಕೊಡುವ ಜೊತೆಗೆ ಮಕ್ಕಳಿಗೆ ಆಕರ್ಷಣೆ ಆಗುವ ಹಾಗೆ ಶಾಲೆಯನ್ನು ಕಲರ್ ಫುಲ್ ಮಾಡಿದ್ದಾರೆ.

  English summary
  Kannada actress pranitha celebrate holi festival very different way in adapted school hassan. she goes back to school for painted and needed makeover.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X