ದರ್ಶನ್, ಪುನೀತ್ ಬಗ್ಗೆ ನಟಿ ಪ್ರಣಿತಾ ಅಭಿಪ್ರಾಯವೇನು?
ಇತ್ತೀಚೆಗೆ ತೆಲುಗು, ಹಿಂದಿಯಲ್ಲಿ ಮಿಂಚುತ್ತಿರುವ ಬೆಂಗಳೂರು ಹುಡುಗಿ ಪ್ರಣಿತಾ ತಮ್ಮ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ನಡೆಸಿದ್ದಾರೆ.
Recommended Video
ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದ ಪ್ರಣಿತಾ ಅಭಿಮಾನಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ, ದರ್ಶನ್, ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಪ್ರಜ್ವಲ್ ದೇವಾಜ್ ಸೇರಿದಂತೆ ಇತರೆ ರಾಜ್ಯದ ಸ್ಟಾರ್ ನಟರ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಯಾವ ಸ್ಟಾರ್ ನಟರ ಬಗ್ಗೆ ಪ್ರಣಿತಾ ಏನು ಹೇಳಿದ್ದಾರೆ? ಮುಂದೆ ಓದಿ...

ದರ್ಶನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರಣಿತಾ ಪ್ರತಿಕ್ರಿಯೆ
ದರ್ಶನ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಣಿತಾ, ಅವರು ನನ್ನ ಮೊದಲ ಹೀರೋ. ಅವರೆಂದರೆ ನನಗೆ ಬಹಳ ಗೌರವ. ಕೊರೊನಾ ಸಂಕಷ್ಟದ ಸಮಯದಲ್ಲಿ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಕೇಳ್ಪಟ್ಟೆ. ಅವರದ್ದು ಚಿನ್ನದ ಹೃದಯ' ಎಂದಿದ್ದಾರೆ ಪ್ರಣಿತಾ.

ಪುನೀತ್ ಬಗ್ಗೆ ಪ್ರಣಿತಾ ಅಭಿಪ್ರಾಯವೇನು?
ಪುನೀತ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಣಿತಾ, 'ಇವರು ನಿಜವಾಗಿಯೂ ಬಂಗಾರದ ಮನುಷ್ಯನ ಮಗ' ಎನ್ನುವ ಮೂಲಕ ಪುನೀತ್ ಗುಣಗಾನ ಮಾಡಿದ್ದಾರೆ.

ಪ್ರಜ್ವಲ್ ದೇವರಾಜ್ ಬಗ್ಗೆಯೂ ಅಭಿಪ್ರಾಯ
ತಮ್ಮ ಸಹನಟ ಪ್ರಜ್ವಲ್ ದೇವರಾಜ್ ಬಗ್ಗೆಯೂ ಮಾತನಾಡಿರುವ ಪ್ರಣಿತಾ, 'ಪ್ರಜ್ವಲ್ ದೇವರಾಜ್ ಒಬ್ಬ ಅದ್ಭುತ ಜಂಟಲ್‌ಮ್ಯಾನ್ ಮತ್ತು ಅತ್ಯುತ್ತಮವಾದ ಸಹನಟ' ಎಂದು ಹೇಳಿದ್ದಾರೆ. ಪ್ರಜ್ವಲ್ ದೇವರಾಜ್ ಜೊತೆ ಕೆಲವು ಸಿನಿಮಾಗಳಲ್ಲಿ ಪ್ರಣಿತಾ ನಟಿಸಿದ್ದಾರೆ.

ಅಲ್ಲು ಅರ್ಜುನ್, ರಾಮ್ ಬಗ್ಗೆಯೂ ಮಾತು
ಅಲ್ಲು ಅರ್ಜುನ್, ತೆಲುಗು ನಟ ರಾಮ್ ಬಗ್ಗೆಯೂ ಮಾತನಾಡಿರುವ ಪ್ರಣಿತಾ, ಇಬ್ಬರೂ ಅದ್ಭುತವಾದ ವ್ಯಕ್ತಿಗಳು, ಸಾಕಷ್ಟು ಎನರ್ಜಿ ಅವರಲ್ಲಿದೆ. ಅವರೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದು ಹೇಳಿದ್ದಾರೆ.


Click it and Unblock the Notifications











