ವೈರಲ್ ಆಯ್ತು ನಟಿ ಪ್ರಣಿತಾ ಸುಭಾಷ್ ಬೇಬಿ ಬಂಪ್ ಪೋಟೊಶೂಟ್

ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಫ್ಯಾಮಿಲಿ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿರುವ ನಟಿ ಪ್ರಣಿತಾ ಕೆಲವು ತಿಂಗಳುಗಳ ಹಿಂದೆ ತಮ್ಮ ಪ್ರೆಗ್ನೆಸ್ಸಿಯನ್ನು ಅನೌನ್ಸ್ ಮಾಡಿದ್ದರು. ಆದಾದ ಬಳಿಕ ಇತ್ತಿಚಿಗಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯ ಕೂಡ ನೇರವೇರಿತ್ತು.

ಸದ್ಯ ಈಗ ಪ್ರಣಿತಾ ಸುಭಾಷ್ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಸ್ಕೈ ಬ್ಲೂ ಡ್ರೆಸ್‌ನಲ್ಲಿ ವಿಭಿನ್ನವಾಗಿ ಪೋಟೊಶೂಟ್ ಮಾಡಿಸಿದ್ದಾರೆ. ಪತಿ ನಿತಿನ್ ರಾಜು ಕೂಡ ಪತ್ನಿ ಪ್ರಣಿತಾ ಜೊತೆ ಪೋಟೊಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಪ್ರಣಿತಾ ಹೊಸದಾದ ಪ್ರೆಗ್ನೆನ್ಸಿ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ ವರ್ಷ ಮೇ 31 ರಂದು ಉದ್ಯಮಿ ನಿತಿನ್ ರಾಜು ಅವರ ಜೊತೆ ಪ್ರಣಿತಾ ಸುಭಾಷ್ ಸಪ್ತಪದಿ ತುಳಿದಿದ್ದರು. ಇದಾದ ಬಳಿಕ ಕುಟುಂಬದೊಂದಿಗೆ ಕಾಲ ಕಳೆದಿದ್ದ ನಟಿ ಸಿನಿಮಾದಿಂದ ದೂರವೇ ಉಳಿದಿದ್ದರು. ಸದ್ಯ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಪ್ರಣಿತಾ ತಮ್ಮ ಪ್ರೆಗ್ನೆನ್ಸಿಯನ್ನು ಎಂಜಾಯ್ ಮಾಡ್ತಿದ್ದಾರೆ. ತಾವು ಪ್ರೆಗ್ನೆಟ್ ಎಂದು ತಿಳಿದ ದಿನದಿಂದ ಇಲ್ಲಿಯವರೆಗೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೆಗ್ನೆಸಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಆಗಾಗ ತಮ್ಮ ಪೋಟೊಗಳನ್ನು ಹಾಕುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ನಟಿ ಪ್ರಣಿತಾ ಬೇಬಿ ಬಂಪ್‌ ಪೋಟೊಗಳು ವೈರಲ್

ನಟಿ ಪ್ರಣಿತಾ ಬೇಬಿ ಬಂಪ್‌ ಪೋಟೊಗಳು ವೈರಲ್

ತಾಯ್ತನದ ಸಂಭ್ರಮದಲ್ಲಿರುವ ನಟಿ ಪ್ರಣಿತಾ ಸುಭಾಷ್ ತಮ್ಮ ಮೊದಲ ಮಗುವನ್ನು ಕಾಣುವ ತವಕದಲ್ಲಿದ್ದಾರೆ. ಹೀಗಾಗಿ ಗರ್ಭಿಣಿಯಾದಾಗಿನಿಂದ ಇಲ್ಲಿಯವರೆಗೂ ತಾಯ್ತನದ ಪ್ರತಿಯೊಂದು ಹಂತವನ್ನು ಅನುಭವಿಸುತ್ತಾ, ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಪೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಈಗ ಪತಿಯ ಜೊತೆ ರೊಮ್ಯಾಂಟಿಕ್ ಆಗಿ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿರುವ ನಟಿ ಪ್ರಣಿತಾ ಹೊಸದಾದ ಬೇಬಿ ಬಂಪ್ ಪೋಟೋಶೂಟ್ ಮಾಡಿಸಿರುವುದು ಈಗ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಹಳದಿ ಸೀರೆಯಲ್ಲಿ ಮಿಂಚಿದ್ದ ನಟಿ ಪ್ರಣಿತಾ

ಹಳದಿ ಸೀರೆಯಲ್ಲಿ ಮಿಂಚಿದ್ದ ನಟಿ ಪ್ರಣಿತಾ

ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದ ಪ್ರಣಿತಾ ಮದುವೆ ಬಳಿಕ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಸದ್ಯ ಈಗ ತುಂಬು ಗರ್ಭಿಣಿಯಾಗಿರುವ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಇತ್ತೀಚಿಗಷ್ಟೇ ಹಿಂದೂ ಸಂಪ್ರಾದಾಯದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಲಾಗಿದೆ. ನಟಿ ಪ್ರಣಿತಾ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದು, ಜೊತೆಗೆ ತಮ್ಮ ಸೀಮಂತ ಕಾರ್ಯಕ್ರಮದ ಪೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪೋಟೊ ನೋಡಿದ ಅಭಿಮಾನಿಗಳು ಶುಭಾಶಯ ತಿಳಿಸಿದ್ದರು.

ಮದುವೆ ಬಳಿಕ ನಟನೆಗೆ ಫುಲ್ ಸ್ಟಾಪ್

ಮದುವೆ ಬಳಿಕ ನಟನೆಗೆ ಫುಲ್ ಸ್ಟಾಪ್

2010 ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿಗೆ ಕನ್ನಡದ ಪೊರ್ಕಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ಮಾಡಿದ ಮೊದಲ ಸಿನಿಮಾ ಭಾರೀ ಸಕ್ಸಸ್‌ ಕಂಡಿತು. ಇದಾದ ಬಳಿಕ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್‌ಗಳು ಕೂಡ ಒದಗಿಬಂದವು. ಪರಭಾಷೆಗಳಲ್ಲೂ ನಟಿ ಪ್ರಣಿತಾಗೆ ಬೇಡಿಕೆ ಹೆಚ್ಚಾಯಿತು. ನಂತರ ಅನೇಕ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಕೂಡ ಮಾಡಿಕೊಂಡರು. ಸದ್ಯ ಮದುವೆಯಾದ ಬಳಿಕ ನಟನೆಗೆ ಫುಲ್‌ ಸ್ಟಾಪ್‌ ಇಟ್ಟಿದ್ದು, ಕುಟುಂಬದೊಂದಿಗೆ ಸಂತೋಷವಾಗಿದ್ದಾರೆ. ಸದ್ಯ ಈಗ ತಾಯಿಯಾಗುವ ಖುಷಿಯಲ್ಲಿರುವ ನಟಿ ಪ್ರಣಿತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ತಾಯ್ತನದ ಸಂಭ್ರಮದಲ್ಲಿರುವ ಸೌತ್ ನಟಿಯರು

ತಾಯ್ತನದ ಸಂಭ್ರಮದಲ್ಲಿರುವ ಸೌತ್ ನಟಿಯರು

ಇತ್ತೀಚೆಗಷ್ಟೇ ನಟಿ ಸಂಜನಾ ಗಲ್ರಾನಿ ಕೂಡ ಮುಸ್ಲಿಂ ಸಂಪ್ರಾಯದಂತೆ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದರು. ಸಂಜನಾ ಸೀಮಂದ ಪೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದರ ಜೊತೆಗೆ ಮತ್ತೊಬ್ಬ ನಟಿ ನಮಿತಾ ಕೂಡ ತಮ್ಮ ಹುಟ್ಟುಹಬ್ಬದ ದಿನದಂದು ತಾವು ಪ್ರೆಗ್ನೆಂಟ್‌ ಎನ್ನುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಲ್ಲದೆ ತಮ್ಮ ಬೇಬಿ ಬಂಪ್ ಪೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.

More from Filmibeat

English summary
Actress Pranitha Subhash Baby Bump Photos Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X