For Quick Alerts
  ALLOW NOTIFICATIONS  
  For Daily Alerts

  ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕೃಷ್ಣನ ವೇಷದಲ್ಲಿ ನಟಿ ಪ್ರಣಿತಾ ಸುಭಾಷ್ ಪುತ್ರಿ ಆರ್ನಾ!

  |

  ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಅಷ್ಟಮಿಯ ಶುಭ ದಿನದಿಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಸಂಪ್ರದಾಯವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಜಗದೋದ್ದಾರಕನ್ನು ಸಂಭ್ರಮ ಸಡಗರದಿಂದ ಪೂಜಿಸಿ ಜನ ಪಾವನರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸುತ್ತಿದ್ದಾರೆ. ಬಹುಭಾಷಾ ನಟಿ ಪ್ರಣಿತಾ ಕೂಡ ಮಗಳಲ್ಲಿ ಕೃಷ್ಣನನ್ನು ಕಂಡು ಖುಷಿಪಟ್ಟಿದ್ದಾರೆ.

  ಮಗಳಿಗೆ ಕೃಷ್ಣ ವೇಷ ತೊಡಿಸಿ ಫೋಟೊ ಹಿಡಿದು ನಟಿ ಪ್ರಣೀತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆರ್ನಾಳನ್ನು ಕೃಷ್ಣನ ವೇಷದಲ್ಲಿ ನೋಡಿದ ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಟಿ ಪ್ರಣಿತಾ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಬಹಳ ಅದ್ಧೂರಿಯಾಗಿ ಅಚರಿಸಿಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವೂ ಜೋರಾಗಿದೆ. ದೃಷ್ಟಿಯಾಗುವ ಕಾರಣಕ್ಕೆ ಫೋಟೊಗಳಲ್ಲಿ ಮಗಳ ಮುಖ ಕಾಣದಂತೆ ಮಾಡಿದ್ದಾರೆ. ಜೂನ್ ತಿಂಗಳಲ್ಲಿ ಪ್ರಣಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಚಿತ್ರರಂಗದಿಂದ ಬ್ರೇಕ್ ಪಡೆದು ಮಗಳ ಲಾಲಾನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  ಇತ್ತೀಚೆಗಷ್ಟೇ ಫೋಟೊಶೂಟ್ ಮಾಡಿಸಿ, ಹೆಸರಿನ ಸಮೇತ ಮಗಳನ್ನು ಪ್ರಣಿತಾ ಪರಿಚಯಿಸಿದ್ದರು. ಮುದ್ದಾದ ಆರ್ನಾಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ನಟಿ ಪ್ರಣಿತಾ ಉದ್ಯಮಿ ನಿತಿನ್ ರಾಜು ಜೊತೆ ಹೊಸಬಾಳಿಗೆ ಕಾಲಿಟ್ಟಿದ್ದರು. ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ದೀರ್ಘಕಾಲದ ಗೆಳೆಯನ ಜೊತೆ ನಟಿ ಪ್ರೀತಿಯಲ್ಲಿ ಬಿದ್ದಿದ್ದರು. ನಂತರ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು. ಕೆಲ ದಿನಗಳ ಹಿಂದೆ ಪತಿ ನಿತಿನ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಮನೆಗೆ ಪುಟ್ಟ ಸದಸ್ಯ ಬರುವ ಮಾಹಿತಿ ಹಂಚಿಕೊಂಡಿದ್ದರು.

  Actress Pranitha Subhash Dressed her baby girl like Krishna for Krishna Janmashtami

  'ಪೊರ್ಕಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಪ್ರಣಿತಾ ಸುಭಾಷ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ಜ್ಯೂನಿಯರ್ ಎನ್‌ಟಿಆರ್‌ರಂತಹ ಸ್ಟಾರ್‌ಗಳ ಜೊತೆ ನಟಿಸಿ ಗೆದ್ದಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬಟ್ಟಳು ಕಂಗಳ ಹುಡುಗಿ ಮಿಂಚಿದ್ದಾರೆ. ಪ್ರಣಿತಾ ನಟನೆಯ 'ಹಂಗಾಮಾ'-2 ಹಾಗೂ 'ಭುಜ್' ಸಿನಿಮಾಗಳು ಕೊನೆಯದಾಗಿ ರಿಲೀಸ್ ಆಗಿತ್ತು. 'ರಾಮನ ಅವತಾರ' ಕನ್ನಡ ಚಿತ್ರದಲ್ಲಿ ಸದ್ಯ ಪ್ರಣಿತಾ ನಟಿಸುತ್ತಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

  Recommended Video

  Darshan and Puneeth Rajkumar | ದರ್ಶನ್ ಅಪ್ಪು ಸ್ನೇಹದ ಬಗ್ಗೆ ರಾಘಣ್ಣ ಮಾತು | Raghavendra Rajkumar
  English summary
  Actress Pranitha Subhash Dressed her baby girl like Krishna for Krishna Janmashtami.
  Friday, August 19, 2022, 17:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X