ಸಂಕಷ್ಟಕ್ಕೆ ಸಿಲುಕಿದ ನೇಕಾರ ದಂಪತಿಯ ನೆರವಿಗೆ ಧಾವಿಸಿದ ನಟಿ ಪ್ರಣೀತಾ
ಭಾರಿ ಮಳೆಯಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ, ಮನೆಗಳು ಪ್ರವಾಹಕ್ಕೆ ಸಿಲುಕುತ್ತಿದೆ. ಹೀಗೆ, ಭಾರಿ ಮಳೆಯಿಂದಾಗಿ ಉಡುಪಿಯ ನೇಕಾರ ದಂಪತಿ ಮನೆ ಜಲಾವೃತವಾಗಿದೆ.
Recommended Video
ಕೈ ಮಗ್ಗದ ಯಂತ್ರ ಸಹ ನೀರು ಪಾಲಾಗಿದೆ. ದಿನದ ಬದುಕಿಗಾಗಿ ಅದನ್ನೇ ನಂಬಿಕೊಂಡಿದ್ದ ದಂಪತಿಗೆ ಈಗ ದಿಕ್ಕುತೋಚದಂತೆ ಆಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಟಿ ಪ್ರಣಿತಾ ಸುಭಾಷ್ ನೆರವಿಗೆ ಧಾವಿಸಿದ್ದಾರೆ. ಹಿರಿಯ ದಂಪತಿಗೆ ಸಹಾಯಹಸ್ತ ಚಾಚುವುದಾಗಿ ಭರವಸೆ ನೀಡಿದ್ದಾರೆ.
72 ವರ್ಷದ ಲಕ್ಷ್ಮಣ ಶೆಟ್ಟಿಗಾರ್ ಮತ್ತು ಪತ್ನಿ ಯಕ್ಷಗಾನ ಸೀರೆಗಳನ್ನು ನೇಯ್ಗೆ ಮಾಡುತ್ತಾರೆ. ಒಂದು ಸೀರೆಯನ್ನು ಸುಮಾರು 400 ರೂಪಾಯಿಗೆ ಸಿದ್ದಪಡಿಸುತ್ತಾರೆ. ಆದ್ರೆ, ಭಾರಿ ಮಳೆಯಿಂದ ಮನೆ ಜಲಾವೃತವಾಗಿದೆ. ಕೈ ಮಗ್ಗದ ಯಂತ್ರ ಸಹ ಹಾನಿಯಾಗಿದೆ. ಹಾಗಾಗಿ, ಸಹಾಯ ಮಾಡಿ ಎಂದು ಪತ್ರಕರ್ತರೊಬ್ಬರು ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಪ್ರಣಿತಾ ''ಈ ಸುದ್ದಿ ನೋಡಿ ಬಹಳ ಕಷ್ಟವಾಗಿದೆ. ಆ ಕುಟುಂಬ ಸುರಕ್ಷಿತವಾಗಿದೆ ಎಂದು ಭಾವಿಸುತ್ತೇನೆ. ಮುಂಜಾನೆ ಸಣ್ಣದೊಂದು ಸಹಾಯ ಮಾಡುವ ಮೂಲಕ ದಿನ ಆರಂಭಿಸೋಣ. ನನಗೂ ಗೊತ್ತಿದೆ ಸಮಯ ಕಷ್ಟವಾಗಿದೆ ಅಂತ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಕೈಲಾದಷ್ಟು ಸಹಾಯ ಮಾಡೋಣ'' ಎಂದು ನಟಿ ಪ್ರಣಿತಾ ಮನವಿ ಮಾಡಿದ್ದಾರೆ.
ನಟಿ ಪ್ರಣಿತಾ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲೂ ಪ್ರಣಿತಾ ತಮ್ಮ ಟ್ರಸ್ಟ್ ಮೂಲಕ ಅನೇಕರಿಗೆ ನೆರವು ನೀಡಿದ್ದಾರೆ.


Click it and Unblock the Notifications











