For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟಕ್ಕೆ ಸಿಲುಕಿದ ನೇಕಾರ ದಂಪತಿಯ ನೆರವಿಗೆ ಧಾವಿಸಿದ ನಟಿ ಪ್ರಣೀತಾ

  |

  ಭಾರಿ ಮಳೆಯಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ, ಮನೆಗಳು ಪ್ರವಾಹಕ್ಕೆ ಸಿಲುಕುತ್ತಿದೆ. ಹೀಗೆ, ಭಾರಿ ಮಳೆಯಿಂದಾಗಿ ಉಡುಪಿಯ ನೇಕಾರ ದಂಪತಿ ಮನೆ ಜಲಾವೃತವಾಗಿದೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada

  ಕೈ ಮಗ್ಗದ ಯಂತ್ರ ಸಹ ನೀರು ಪಾಲಾಗಿದೆ. ದಿನದ ಬದುಕಿಗಾಗಿ ಅದನ್ನೇ ನಂಬಿಕೊಂಡಿದ್ದ ದಂಪತಿಗೆ ಈಗ ದಿಕ್ಕುತೋಚದಂತೆ ಆಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಟಿ ಪ್ರಣಿತಾ ಸುಭಾಷ್ ನೆರವಿಗೆ ಧಾವಿಸಿದ್ದಾರೆ. ಹಿರಿಯ ದಂಪತಿಗೆ ಸಹಾಯಹಸ್ತ ಚಾಚುವುದಾಗಿ ಭರವಸೆ ನೀಡಿದ್ದಾರೆ.

  ಡಿಜೆ ಹಳ್ಳಿ ಗಲಭೆ ಖಂಡಿಸಿ ನಟಿ ಪ್ರಣಿತಾ ಸುಭಾಷ್ ಟ್ವೀಟ್ಡಿಜೆ ಹಳ್ಳಿ ಗಲಭೆ ಖಂಡಿಸಿ ನಟಿ ಪ್ರಣಿತಾ ಸುಭಾಷ್ ಟ್ವೀಟ್

  72 ವರ್ಷದ ಲಕ್ಷ್ಮಣ ಶೆಟ್ಟಿಗಾರ್ ಮತ್ತು ಪತ್ನಿ ಯಕ್ಷಗಾನ ಸೀರೆಗಳನ್ನು ನೇಯ್ಗೆ ಮಾಡುತ್ತಾರೆ. ಒಂದು ಸೀರೆಯನ್ನು ಸುಮಾರು 400 ರೂಪಾಯಿಗೆ ಸಿದ್ದಪಡಿಸುತ್ತಾರೆ. ಆದ್ರೆ, ಭಾರಿ ಮಳೆಯಿಂದ ಮನೆ ಜಲಾವೃತವಾಗಿದೆ. ಕೈ ಮಗ್ಗದ ಯಂತ್ರ ಸಹ ಹಾನಿಯಾಗಿದೆ. ಹಾಗಾಗಿ, ಸಹಾಯ ಮಾಡಿ ಎಂದು ಪತ್ರಕರ್ತರೊಬ್ಬರು ಮನವಿ ಮಾಡಿದ್ದರು.

  ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಪ್ರಣಿತಾ ''ಈ ಸುದ್ದಿ ನೋಡಿ ಬಹಳ ಕಷ್ಟವಾಗಿದೆ. ಆ ಕುಟುಂಬ ಸುರಕ್ಷಿತವಾಗಿದೆ ಎಂದು ಭಾವಿಸುತ್ತೇನೆ. ಮುಂಜಾನೆ ಸಣ್ಣದೊಂದು ಸಹಾಯ ಮಾಡುವ ಮೂಲಕ ದಿನ ಆರಂಭಿಸೋಣ. ನನಗೂ ಗೊತ್ತಿದೆ ಸಮಯ ಕಷ್ಟವಾಗಿದೆ ಅಂತ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಕೈಲಾದಷ್ಟು ಸಹಾಯ ಮಾಡೋಣ'' ಎಂದು ನಟಿ ಪ್ರಣಿತಾ ಮನವಿ ಮಾಡಿದ್ದಾರೆ.

  ನಟಿ ಪ್ರಣಿತಾ ಅವರ ಈ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲೂ ಪ್ರಣಿತಾ ತಮ್ಮ ಟ್ರಸ್ಟ್ ಮೂಲಕ ಅನೇಕರಿಗೆ ನೆರವು ನೀಡಿದ್ದಾರೆ.

  English summary
  72 yr old Lakshmana Shettigar & his wife weavers in Udupi, His house flooded due to heavy rains in Udupi. actress Pranitha Subhash will have help to that family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X