For Quick Alerts
  ALLOW NOTIFICATIONS  
  For Daily Alerts

  'ಸಿನಿಮಾ ಗಿನ್ಮಾ ಸದ್ಯಕ್ಕಿಲ್ಲ': ಫೋಟೊಶೂಟ್ ಸೀಕ್ರೆಟ್ ಬಿಚ್ಚಿಟ್ಟ ಪ್ರಣೀತಾ!

  |

  ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಸಿನಿಮಾಗಳಿಂದ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಎರಡೂವರೆ ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಟ್ಟಲು ಕಂಗಳ ಚೆಲುವೆ ತಾಯ್ತನದ ಖುಷಿಯನ್ನು ಆನಂದಿಸುತ್ತಿದ್ದಾರೆ. ಹಾಲು ಗಲ್ಲದ ಸುಂದರಿ ಸದ್ಯ ತಮ್ಮ ಮುದ್ದಾದ ಮಗಳ ಲಾಲನೆ ಪಾಲನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮಗಳ ಕಲರ್‌ಫುಲ್ ಫೋಟೊಶೂಟ್‌ ಮಾಡಿಸಿ, ಫೋಟೊಗಳನ್ನು ಹಂಚಿಕೊಂಡಿದ್ದರು.

  ಕಳೆದ ವರ್ಷ ಮೇ ತಿಂಗಳಲ್ಲಿ ನಟಿ ಪ್ರಣೀತಾ ಉದ್ಯಮಿ ನಿತಿನ್ ರಾಜು ಜೊತೆ ಹಸೆಮಣೆ ಏರಿದ್ದರು. ಅಂದಹಾಗೆ ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸದ್ಯ ಬಾಪುಗಾರಿ ಬೊಮ್ಮ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಅಂದರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇನ್ನು 'ರಾಮನ ಅವತಾರ' ಸಿನಿಮಾ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ. ಸದ್ಯ ಪ್ರಣೀತಾ ಹೊಸ ಫೋಟೊಶೂಟ್ ಎಲ್ಲರ ಗಮನ ಸೆಳೆಯುತ್ತಿದೆ. ವಿವೋ ಫೋನ್ ಪ್ರಮೋಷನ್ ಭಾಗವಾಗಿ ನಿನ್ನೆ (ಆಗಸ್ಟ್ 25) ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ ತೆಗೆದ ಫೋಟೊಗಳನ್ನು ಶೇರ್ ಮಾಡಿದ್ದಾರೆ.

  ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕೃಷ್ಣನ ವೇಷದಲ್ಲಿ ನಟಿ ಪ್ರಣಿತಾ ಸುಭಾಷ್ ಪುತ್ರಿ ಆರ್ನಾ!ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕೃಷ್ಣನ ವೇಷದಲ್ಲಿ ನಟಿ ಪ್ರಣಿತಾ ಸುಭಾಷ್ ಪುತ್ರಿ ಆರ್ನಾ!

  ಬ್ಲಾಕ್‌ ಕಲರ್ ಟಾಪ್, ಅದರ ಮೇಲೆ ಗ್ರೀನ್ ಕಲರ್ ಬ್ಲೇಸರ್‌ ತೊಟ್ಟು ನಟಿ ಪ್ರಣೀತಾ ಸುಭಾಷ್ ಮಿಂಚಿದ್ದಾರೆ. ಭಿನ್ನ ವಿಭಿನ್ನವಾಗಿ ಕ್ಯಾಮರಾರೆ ಪೋಸ್ ಕೊಟ್ಟಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ಲಾಗಿರೋ ಫೋಟೊಗಳನ್ನು ನೋಡಿ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಫೋಟೊಗಳಲ್ಲಿ ಗ್ಲಾಮರಸ್ ಪ್ರಣೀತಾನ ನೋಡಿದವರು 'ಕ್ಯೂಟ್‌ ಲೇಡಿ ಬಾಸ್' ಎಂದು ಕರೆಯುತ್ತಿದ್ದಾರೆ. ಈ ಫೋಟೊಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರ ಹಿಂದಿನ ಸೀಕ್ರೆಟ್ ಅನ್ನು ಪ್ರಣೀತಾ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

  'ಸಿನಿಮಾ ಗಿನ್ಮಾ ಸದ್ಯಕ್ಕಿಲ್ಲ'- ಪ್ರಣೀತಾ

  'ಸಿನಿಮಾ ಗಿನ್ಮಾ ಸದ್ಯಕ್ಕಿಲ್ಲ'- ಪ್ರಣೀತಾ

  ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿರುವ ಪ್ರಣೀತಾ ಮಗಳ ಲಾಲನೆ ಪಾಲನೆಯಲ್ಲಿ ದಿನದ ಬಹುತೇಕ ಸಮಯ ಕಳೆಯುತ್ತಿದ್ದಾರೆ. ನಟಿಯ ಹೊಸ ಫೋಟೋಶೂಟ್ ನೋಡಿದವರಿಗೆ ಪ್ರಣೀತಾ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರಾ ಅನ್ನುವ ಅನುಮಾನ ಮೂಡಿತ್ತು. ಈ ಬಗ್ಗೆ ಮಾತನಾಡಿರುವ ಚೆಲುವೆ "ಸದ್ಯಕ್ಕೆ ಮಗಳನ್ನು ನೋಡಿಕೊಳ್ಳುವುದರಲ್ಲೇ ಬಹಳ ಬ್ಯುಸಿಯಾಗಿದ್ದೀನಿ. ಸಿನಿಮಾ ಗಿನ್ಮಾ ಎಲ್ಲಾ ಸದ್ಯಕ್ಕಿಲ್ಲ. ಆ ಬಗ್ಗೆ ಇನ್ನು ಯೋಚಿಸಿಯೇ ಇಲ್ಲ" ಎಂದಿದ್ದಾರೆ.

  ನಟಿ ಪ್ರಣಿತಾ ಮಗಳ ಹೆಸ್ರು 'ಆರ್ನಾ': ಹೆಸರಲ್ಲಿ ವಿಶೇಷವಾದ ಅರ್ಥ ಅಡಗಿದೆ!ನಟಿ ಪ್ರಣಿತಾ ಮಗಳ ಹೆಸ್ರು 'ಆರ್ನಾ': ಹೆಸರಲ್ಲಿ ವಿಶೇಷವಾದ ಅರ್ಥ ಅಡಗಿದೆ!

  ಕೊಂಚ ಸಣ್ಣ ಆಗಿದ್ದೀನಿ ಅಷ್ಟೆ

  ಕೊಂಚ ಸಣ್ಣ ಆಗಿದ್ದೀನಿ ಅಷ್ಟೆ

  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಗ್ಲಾಮರಸ್ ಫೋಟೊಗಳ ಬಗ್ಗೆ ಮಾತನಾಡಿರುವ ಪ್ರಣೀತಾ "ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅದೇ ಸಮಯದಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ಶೇರ್ ಮಾಡಿದ್ದೀನಿ. ಇತ್ತೀಚೆಗೆ ಕೊಂಚ ವರ್ಕೌಟ್ ಮಾಡಿ ಸಣ್ಣ ಆಗಿದ್ಧೀನಿ ಅಷ್ಟೆ. ಅಭಿಮಾನಿಗಳು ಫೋಟೊಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಹಳ ಖುಷಿಯಾಗುತ್ತಿದೆ" ಎಂದು ಹೇಳಿದ್ದಾರೆ.

  ಮಗಳು ಆರ್ನಾಳನ್ನು ಪರಿಚಯಿಸಿದ್ದರು

  ಮಗಳು ಆರ್ನಾಳನ್ನು ಪರಿಚಯಿಸಿದ್ದರು

  ಮೂರು ವಾರಗಳ ಹಿಂದೆಯಷ್ಟೆ ಪ್ರಣೀತಾ ಮಗಳ ಫೋಟೊ ಶೇರ್ ಮಾಡಿ ಹೆಸರಿನ ಸಮೇತ ಪರಿಚಯಿಸಿದ್ದರು. ಮಗಳಿಗೆ ಆರ್ನಾ ಎಂದು ನಾಮಕರಣ ಮಾಡಿದ್ದಾರೆ. ಪತಿ ಹಾಗೂ ಮಗಳ ಜೊತೆ ಫೋಟೊಶೂಟ್ ಮಾಡಿಸಿ, ಕಲರ್‌ಫುಲ್ ಫೋಟೊಗಳನ್ನು ಹಂಚಿಕೊಂಡಿದ್ದರು. ಕೃಷ್ಣ ಜನ್ಮಾಷ್ಟಮಿ ದಿನ ಮಗಳಿಗೆ ಕೃಷ್ಣನ ವೇಷ ಹಾಕಿ ಫೋಟೊಗಳನ್ನು ಶೇರ್ ಮಾಡಿದ್ದರು. ಮಗಳಲ್ಲಿ ಬಾಲಕೃಷ್ಣನನ್ನು ಕಂಡು ಸಂಭ್ರಮಿಸಿದ್ದರು.

  ಚತುರ್ಭಾಷಾ ತಾರೆಯಾಗಿ ಪ್ರಣೀತಾ

  ಚತುರ್ಭಾಷಾ ತಾರೆಯಾಗಿ ಪ್ರಣೀತಾ

  2010ರಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ನಟನೆಯ 'ಪೊರ್ಕಿ' ಸಿನಿಮಾ ಮೂಲಕ ಪ್ರಣೀತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮುಂದೆ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಗೆದ್ದರು. ಜ್ಯೂ. ಎನ್‌ಟಿಆರ್, ಪವನ್ ಕಲ್ಯಾಣ್‌, ಕಾರ್ತಿ, ಅಜಯ್ ದೇವಗನ್‌ರಂತಹ ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಗೆದ್ದರು. ಆದಷ್ಟು ಬೇಗ ಪ್ರಣೀತಾ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಅನ್ನುವುದು ಅಭಿಮಾನಿಗಳ ಆಸೆ.

  English summary
  Actress Pranitha Subhash Latest Stylish Photo shoot Photos Goes Viral.
  Friday, August 26, 2022, 19:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X