ಬಾಲಿವುಡ್ ನಟ ಅಜಯ್ ದೇವಗನ್ ಪತ್ನಿಯಾದ ಕನ್ನಡತಿ ಪ್ರಣೀತಾ

Recommended Video

ಕೊನೆಗೂ ಈಡೇರಿತು ಪ್ರಣಿತಾ ಸುಭಾಷ್ ಕನಸು..? | pranitha | FILMIBEAT KANNADA

ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಬಟ್ಟಲುಕಣ್ಣಿನ ಈ ಸುಂದರಿ ಈಗ ಸೌತ್ ಸಿನಿ ಇಂಡಸ್ಟ್ರಿಯಿಂದ ಬಾಲಿವುಡ್ ಕಡೆ ಮುಖಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಪತ್ನಿಯಾಗಿ ಪ್ರಣೀತಾ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ಪ್ರಣೀತಾ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಬಾಲಿವುಡ್ ಪಯಣ ಪ್ರಾರಂಭಿಸಿದ್ದಾರೆ.

ಭುಜ್: ದಿ ಪ್ರೈಡ್ ಆಫ್ ಇಂಡಿಯಾ 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ಆಧರಿಸಿದ ಸಿನಿಮಾ. ಚಿತ್ರದಲ್ಲಿ ದೊಡ್ಡ ತಾರಬಳಗವೆ ಇದೆ. ಪರಿಣೀತಿ ಚೋಪ್ರಾ, ರಾಣಾ ದಗ್ಗುಬಾಟಿ, ಸೋನಾಕ್ಷಿ ಸಿನ್ಹಾ ಸೇರಿದಂತೆ ಅನೇಕ ಕಾಲಾವಿದರು ಕಾಣಸಿಕೊಳ್ಳುತ್ತಿದ್ದಾರೆ.

Actress Pranitha Subhash Playing Wife Role Of Ajay Devgan In Bollywood Movie

ಬಾಲಿವುಡ್ ಸಿನಿಮಾ ಮಾಡಬೇಕು ಎನ್ನುವುದು ಪ್ರಣೀತಾ ಅವರ ದೊಡ್ಡ ಕನಸಾಗಿತ್ತಂತೆ. ಆ ಕನಸೀಗ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದ ಮೂಲಕ ನನಸಾಗಿದೆ. ಈ ಮೊದಲು ಬಾಲಿವುಡ್ ನಿಂದ ಸಾಕಷ್ಟು ಆಫರ್ ಗಳು ಬಂದರೂ ಯಾವುದಕ್ಕೂ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಆದ್ರೀಗ ಅಜಯ್ ದೇವಗನ್ ಜೊತೆ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಅಂದ್ಹಾಗೆ ಪ್ರಣೀತಾ ಪಾತ್ರದ ಬಹುತೇಕ ಭಾಗದ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಿದೆಯಂತೆ. ಚಿತ್ರಕ್ಕೆ ಅಭಿಷೇಕ್ ದುದೈಯಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಅಜಯೆ ದೇವಗನ್ ವಿಂಗ್ ಕಮಾಂಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಮುಂದಿನ ವರ್ಷ 2020 ಆಗಸ್ಟ್ 14ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Kannada actress Pranitha Subhash playing wife role of Ajay Devgan in Bollywood movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X