For Quick Alerts
  ALLOW NOTIFICATIONS  
  For Daily Alerts

  ಹತ್ತನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ದಾರೆ ಗೊತ್ತೆ ನಟಿ ಪ್ರಣಿತಾ ಸುಭಾಷ್

  |

  ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಸಖತ್ ಮಿಂಚುತ್ತಿರುವ ಬಟ್ಟಲು ಕಂಗಳ ಚೆಲುವೆ ಕನ್ನಡತಿ ಪ್ರಣಿತಾ ಸುಭಾಶ್ ಇತ್ತೀಚೆಗೆ ಬಾಲಿವುಡ್‌ಗೂ ಲಗ್ಗೆ ಇಟ್ಟಿದ್ದಾರೆ.

  ನಟಿಯರು ಕಡಿಮೆ ಓದಿದವರು, ತುಸು ಪೆದ್ದುಗಳು, ದಡ್ಡರು ಎಂಬ ಲೋಕರೂಡಿ ಮಾತಿದೆ. ಇದಕ್ಕೆ ಅನ್ವರ್ಥವೆಂಬಂತೆ ಕೆಲವು ನಟಿಯರು ನಡೆದುಕೊಳ್ಳುತ್ತಾರೆ ಸಹ, ಆದರೆ ಪ್ರಣಿತಾ ಸುಭಾಷ್ ಹಾಗಲ್ಲ.

  ಪ್ರಣಿತಾ ಸುಭಾಷ್ ಹತ್ತನೇ ತರಗತಿಯಲ್ಲಿ ಗಳಿಸಿರುವ ಅಂಕ ನೋಡಿದರೆ ಶಭಾಷ್ ಎನ್ನದೇ ಇರಲಾಗದು. ಹತ್ತನೇ ತರಗತಿಯಲ್ಲಿ ಕ್ಲಿಷ್ಟಕರವಾದ ಐಸಿಎಸ್‌ಸಿ ವಿಷಯಗಳನ್ನು ಅಭ್ಯಾಸ ಮಾಡಿದ್ದ ಪ್ರಣಿತಾ ಒಳ್ಳೆಯ ಅಂಕಗಳನ್ನೇ ಗಳಿಸಿದ್ದದಾರೆ.

  ಹತ್ತನೇ ತರಗತಿಯಲ್ಲಿ ಏಳು ವಿಷಯಗಳ ಒಟ್ಟು ಅಂಕ 700 ಕ್ಕೆ ಪ್ರಣಿತಾ ಗಳಿಸಿರುವುದು ಬರೋಬ್ಬರಿ 625 ಅಂಕಗಳು. ಅಂದರೆ ಹತ್ತನೇ ತರಗತಿಯಲ್ಲಿ ಪ್ರಣಿತಾರ ಪರ್ಸೆಂಟೇಜ್‌ ಬಹುತೇಕ 90.

  ಕನ್ನಡದಲ್ಲಿ 100 ಕ್ಕೆ 90

  ಕನ್ನಡದಲ್ಲಿ 100 ಕ್ಕೆ 90

  ಕನ್ನಡದಲ್ಲಿ ನೂರಕ್ಕೆ 90 ಅಂಕಗಳಿಸಿರುವ ಪ್ರಣಿತಾ, ಕಂಪ್ಯೂಟರ್ ಅಪ್ಲಿಕೇಶನ್‌ ನಲ್ಲಿ 95 ಗಳಿಸಿದ್ದಾರೆ. ಇಂಗ್ಲಿಷ್ ಹಾಗೂ ಇತಿಹಾಸ ಹೊರತುಪಡಿಸಿ ಇನ್ನೆಲ್ಲಾ ವಿಷಯಗಳಲ್ಲೂ 90 ಕ್ಕಿಂತಲೂ ಹೆಚ್ಚು ಅಂಕಗಳಿಸಿದ್ದಾರೆ ಪ್ರಣಿತಾ.

  ಹತ್ತನೇ ತರಗತಿ ಅಂಕಪಟ್ಟಿ

  ಹತ್ತನೇ ತರಗತಿ ಅಂಕಪಟ್ಟಿ

  ಪ್ರಣಿತಾ ಸುಭಾಷ್ ತಮ್ಮ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ಹತ್ತನೇ ತರಗತಿ ಅಂಕಪಟ್ಟಿಯನ್ನು ಫೇಸ್‌ಬುಕ್‌ ನಲ್ಲಿ ಪ್ರಕಟಿಸಿದ್ದಾರೆ. ಇದು ಮಾತ್ರವಲ್ಲದೆ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಪ್ರಣಿತಾ.

  ಬಾತ್‌ಟಬ್‌ನಲ್ಲಿರುವ ಚಿತ್ರ

  ಬಾತ್‌ಟಬ್‌ನಲ್ಲಿರುವ ಚಿತ್ರ

  ಫೇಸ್‌ಬುಕ್‌ಗೆ ಹಾಕಬೇಕು ಎಂದುಕೊಂಡ ಆದರೆ ಹಾಕದ ಫೋಟೊ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಣಿತಾ, ತಾವು ಬಾತ್‌ಟಬ್‌ನಲ್ಲಿ ಕೂತು ಫೋಸ್ ಕೊಟ್ಟಿರುವ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ.

  ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆದ ರಾಗಿಣಿ | Ragini Hospitalised | Filmibeat Kannada
  ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಪ್ರಣಿತಾ

  ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಪ್ರಣಿತಾ

  ಬಾಯ್‌ಫ್ರೆಂಡ್ ಚಿತ್ರ ಹಾಕಿ ಎಂದು ಕೇಳಿದ ವ್ಯಕ್ತಿಗೆ 'ಲೋಡಿಂಗ್' ಅರ್ಥ ಬರುವಂತಹಾ ಚಿತ್ರವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ತಮ್ಮ ಕಾರು, ತಮ್ಮ ಚಿತ್ರೀಕರಣದ ಸೆಟ್, ಇಷ್ಟದ ಸಾಕುಪ್ರಾಣಿ, ಇಷ್ಟದ ಸ್ಥಳ, ಮೊಬೈಲ್‌ ವಾಲ್‌ಪೇಪರ್ ಚಿತ್ರಗಳನ್ನು ಹಾಕಿದ್ದಾರೆ ಪ್ರಣಿತಾ ಸುಭಾಷ್.

  English summary
  Kannada actress Pranitha Subhash posted her SSLC marks card on social media. She was a bright student while studying.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X