For Quick Alerts
    ALLOW NOTIFICATIONS  
    For Daily Alerts

    ನಟಿ ಪ್ರಣಿತಾ ಸುಭಾಷ್ ಸೀಮಂತ ಸಂಭ್ರಮ: ಪೋಟೊಗಳು ವೈರಲ್

    |

    ಬಹುಭಾಷಾ ನಟಿ ಪ್ರಣಿತಾ ಸುಭಾಷ್ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದರು. ಕನ್ನಡ ಮಾತ್ರವಲ್ಲದೆ ಕಾಲಿವುಡ್, ಟಾಲಿವುಡ್‌, ಬಾಲಿವುಡ್‌ ಸಿನಿಮಾಗಳಲ್ಲೂ ಬಣ್ಣ ಹಚ್ಚಿ ಮಿಂಚಿದ್ದಾರೆ. ಸದ್ಯ ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಜೊತೆಗೆ ಮದುವೆಯಾದರು. ಅಲ್ಲದೆ ಇತ್ತೀಚಿಗಷ್ಟೇ ತಾವು ಪ್ರೆಗ್ನೆಂಟ್ ಎಂಬ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಈಗ ಅದ್ದೂರಿಯಾಗಿ ಸೀಮಂತ ಮಾಡಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದ ಪ್ರಣಿತಾ ಮದುವೆ ಬಳಿಕ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಸದ್ಯ ಈಗ ಮೊದಲ ತುಂಬು ಗರ್ಭಿಣಿಯಾಗಿರುವ ಅವರು ಮೊದಲ ಮಗುವನ್ನು ಕಾಣುವ ಹಂಬಲದಲ್ಲಿದ್ದಾರೆ.

    'ಕೆಜಿಎಫ್ 2': ಭಾರತೀಯ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ಗಳಿಸಿದ 2ನೇ ಸಿನಿಮಾ! 'ಕೆಜಿಎಫ್ 2': ಭಾರತೀಯ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ಗಳಿಸಿದ 2ನೇ ಸಿನಿಮಾ!

    ಇತ್ತೀಚಿಗಷ್ಟೇ ಹಿಂದೂ ಸಂಪ್ರಾದಾಯದಂತೆ ಅದ್ದೂರಿಯಾಗಿ ಸೀಮಂತ ಕಾರ್ಯ ಮಾಡಲಾಗಿದೆ. ನಟಿ ಪ್ರಣಿತಾ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸದ್ಯ ಪ್ರಣಿತಾ ತಮ್ಮ ಸೀಮಂತ ಕಾರ್ಯಕ್ರಮದ ಪೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೋಟೊ ನೋಡಿದ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಸದ್ಯ ನಟಿ ಪ್ರಣಿತಾ ಶೇರ್ ಮಾಡಿದ ಪೋಟೊಗಳು ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

    2010 ರಿಂದಲೂ ಪ್ರಣಿತಾ ಸುಭಾಷ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿಗೆ ಕನ್ನಡದ 'ಪೊರ್ಕಿ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು, ಅವರು ಮಾಡಿದ ಮೊದಲ ಸಿನಿಮಾ ಭಾರೀ ಸಕ್ಸಸ್‌ ಕಂಡಿತು. ಇದಾದ ಬಳಿಕ ಪ್ರಣಿತಾಗೆ ಸಾಕಷ್ಟು ಸಿನಿಮಾಗಳ ಆಫರ್‌ಗಳು ಕೂಡ ಒದಗಿಬಂದವು.

    ಪರಭಾಷೆಗಳಲ್ಲೂ ನಟಿ ಪ್ರಣಿತಾಗೆ ಬೇಡಿಕೆ ಹೆಚ್ಚಾಯಿತು. ಬಳಿಕ ಅನೇಕ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಕೂಡ ಮಾಡಿಕೊಂಡರು. ಸದ್ಯ ಮದುವೆಯಾದ ಬಳಿಕ ನಟನೆಗೆ ಫುಲ್‌ ಸ್ಟಾಪ್‌ ಇಟ್ಟಿದ್ದು, ಕುಟುಂಬದೊಂದಿಗೆ ಸಂತೋಷವಾಗಿದ್ದಾರೆ. ಸದ್ಯ ಈಗ ತಾಯಿಯಾಗುವ ಖುಷಿಯಲ್ಲಿರುವ ನಟಿ ಪ್ರಣಿತಾ ತಮ್ಮ ಸೀಮಂತದ ಕಾರ್ಯಕ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    Actress Pranitha Subhashs baby Shower Photos Goes Viral

    ಇತ್ತಿಚಿಗಷ್ಟೇ ನಟಿ ಸಂಜನಾ ಗಲ್ರಾನಿ ಕೂಡ ಮುಸ್ಲಿಂ ಸಂಪ್ರಾಯದಂತೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದರು. ಸಂಜನಾ ಸೀಮಂದ ಪೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದರ ಜೊತೆಗೆ ಮತ್ತೊಬ್ಬ ನಟಿ ನಮಿತಾ ಕೂಡ ತಮ್ಮ ಹುಟ್ಟುಹಬ್ಬದ ದಿನದಂದು ತಾವು ಪ್ರೆಗ್ನೆಂಟ್‌ ಎನ್ನುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಲ್ಲದೆ ತಮ್ಮ ಬೇಬಿ ಬಂಪ್ ಪೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.

    English summary
    Kannada Actress Pranitha Subhash Seemantha Program.
    Tuesday, May 17, 2022, 9:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X