"ತುಂಬಾ ದಪ್ಪಗಾಗಿದ್ದೆ.. ಅದ್ಕೆ ಫೋಟೊ ಹಾಕಲಿಲ್ಲ.. ಸ್ವಿಮ್ಮಿಂಗ್ ಅಂದ್ರೆ ಬಲು ಇಷ್ಟ": ಪ್ರಣೀತಾ

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ನಿಧಾನವಾಗಿ ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಸದ್ಯ ಮಲಯಾಳಂನಲ್ಲಿ ದಿಲೀಪ್ ಕುಮಾರ್ ಜೊತೆ ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಇನ್‌ಸ್ಟಾ ಲೈವ್ ಬಂದಿದ್ದ 'ಪೊರ್ಕಿ' ಬೆಡಗಿ ಅಭಿಮಾನಿಗಳ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

2021ರಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣೀತಾ ಹಸೆಮಣೆ ಏರಿದ್ದರು. ಸರಳವಾಗಿ ನಡೆದ ವಿವಾಹ ಮಹೋತ್ಸವದಲ್ಲಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಕೆಲ ದಿನಗಳ ನಂತರ ಈ ವಿಚಾರ ಬಹಿರಂಗವಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ಹೆಣ್ಣು ಮಗುವಿಗೆ ಬಾಪುಗಾರಿ ಬೊಮ್ಮ ಜನ್ಮ ನೀಡಿದ್ದರು. ಪ್ರಣೀತಾ ಬೇಬಿ ಬಂಪ್ ಫೋಟೋಶೂಟ್‌ ಚಿತ್ರಗಳು ವೈರಲ್ ಆಗಿತ್ತು. ಕೆಲವೇ ದಿನಗಳ ಹಿಂದೆ ಮಗಳು 'ಆರ್ನಾ'ಳನ್ನು ಪ್ರಣೀತಾ ಪರಿಚಯಿಸಿದ್ದರು.

ಪ್ರಣೀತಾ ಈಗ ಮತ್ತೆ ಬಳಕುವ ಬಳ್ಳಿಯಂತಾಗಿದ್ದಾರೆ. ಡ್ಯಾನ್ಸ್, ವರ್ಕೌಟ್, ಸ್ವಿಮ್ಮಿಂಗ್ ಮಾಡಿ ಹಳೇ ಪಿಜಿಕ್ ವಾಪಸ್ ಪಡೆದಿದ್ದಾರೆ. ಇನ್‌ಸ್ಟಾ ಲೈವ್‌ ವೇಳೆ ಈ ಬಗ್ಗೆ ಸಾಕಷ್ಟು ಸಂಗತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಪ್ರೆಗ್ನೆನ್ಸಿ ಟೈಮಲ್ಲಿ ದಪ್ಪ ಆಗಿದ್ದೆ

ಪ್ರೆಗ್ನೆನ್ಸಿ ಟೈಮಲ್ಲಿ ದಪ್ಪ ಆಗಿದ್ದೆ

"ಪ್ರೆಗ್ನೆನ್ಸಿ ಸಮಯದಲ್ಲಿ ಬಹಳ ದಪ್ಪ ಆಗಿಬಿಟ್ಟಿದ್ದೆ. ನನ್ನ ಮೂಗು, ಕೆನ್ನೆ ದೊಡ್ಡದಾಗಿ ಮುಂದೆ ಬಂದಿತ್ತು. ನೆಂಟರೆಲ್ಲಾ ನೋಡಿ ಬಹಳ ಕ್ಯೂಟ್ ಆಗಿದ್ದೀಯಾ ಎಂದು ಹೇಳುತ್ತಿದ್ದರು. ಆದರೆ ನನಗೆ ಮಾತ್ರ ಕಸಿವಿಸಿ ಎನಿಸುತ್ತಿತ್ತು. ಡೆಲಿವರಿ ವೇಳೆಗೆ ನನ್ನ ತೂಕ 75 ಕೆಜಿ ಆಗಿತ್ತು" ಎಂದಿದ್ದಾರೆ.

ಸ್ವಿಮ್ಮಿಂಗ್ ಅಂದ್ರೆ ಬಹಳ ಇಷ್ಟ

ಸ್ವಿಮ್ಮಿಂಗ್ ಅಂದ್ರೆ ಬಹಳ ಇಷ್ಟ

"ಡೆಲಿವರಿ ನಂತರ ನನ್ನ ಇಷ್ಟದ ಆಹಾರ ತಿನ್ನುವುದನ್ನು ಬಿಟ್ಟು ತೂಕ ಇಳಿಸುವ ಕೆಲಸ ಆರಂಭಿಸಿದೆ. ಇದಕ್ಕಾಗಿ ಪ್ರತಿದಿನ ವ್ಯಾಯಾಮ, ಸ್ವಿಮ್ಮಿಂಗ್ ಮಾಡುತ್ತಿದ್ದೆ. ಹೀಗೆ ಮಾಡುತ್ತಾ ಮಾಡುತ್ತಾ ಈಗ ಮೊದಲಿನಂತೆ ಆಗಿದ್ದೇನೆ. ಅದೇ ಕಾರಣಕ್ಕೆ ಆಗ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಫೋಟೊ, ವಿಡಿಯೋ ಶೇರ್ ಮಾಡುತ್ತಿರಲಿಲ್ಲ. ಸದ್ಯ ನಾನು ಸಿನಿಮಾಗಳತ್ತ ಗಮನ ಹರಿಸಿದ್ದೇನೆ. ಸ್ವಿಮ್ಮಿಂಗ್ ಎಂದರೆ ಬಹಳ ಇಷ್ಟ. ಶೂಟಿಂಗ್ ಮುಗಿಸಿ ರಾತ್ರಿ 11 ಗಂಟೆಗೆ ಬಂದರೂ ಸ್ವಿಮ್ ಮಾಡಲು ಹೋಗುತ್ತೇನೆ."

ಮಾಲಿವುಡ್‌ಗೆ ಪ್ರಣೀತಾ ಎಂಟ್ರಿ

ಮಾಲಿವುಡ್‌ಗೆ ಪ್ರಣೀತಾ ಎಂಟ್ರಿ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರಣೀತಾ ಬ್ಯಾಕ್ ಟು ಬ್ಯಾಕ್ ಫೋಟೊಶೂಟ್‌ಗಳಲ್ಲಿ ಮಿಂಚುತ್ತಿದ್ದಾರೆ. ಫ್ಯಾನ್ಸ್ ಜೊತೆ ಟಚ್‌ನಲ್ಲಿರುವ ಚೆಲುವೆ ಲೈವ್ಸ್ ಸೆಷನ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಚೆಲುವೆ ದಿಲೀಪ್ ನಟನೆಯ 148ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗಿ ಆಗುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ ಬೆಳ್ಳಿತೆರೆಮೇಲೆ ಕಮಾಲ್ ಮಾಡಲಿದ್ದಾರೆ. 'ಪೊರ್ಕಿ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ಪ್ರಣೀತಾ ಮುಂದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿದರು.

More from Filmibeat

English summary
Actress Pranitha Subhash Shares Her Post-Baby Weight Loss Journey. Pranitha Subhash debuts in Malayalam with Dileep's next. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X