For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ಅಟಲ್ ಸುರಂಗ ಮಾರ್ಗದಲ್ಲಿ ನಟಿ ಪ್ರಣೀತಾ ಪ್ರಯಾಣ

  |

  ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಸದ್ಯ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದ ಪ್ರಣೀತಾ ಇದೀಗ ಬಿ ಟೌನ್ ನಲ್ಲಿಯೂ ಮಿಂಚಲು ಸಿದ್ಧರಾಗಿದ್ದಾರೆ. ಈಗಾಗಲೇ ಬಾಲಿವುಡ್ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿರುವ ಪ್ರಣೀತಾ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ ಅಟಲ್ ಸುರಂಗ ಮಾರ್ಗದಲ್ಲಿ ಪ್ರಯಾಣ ಮಾಡಿ ಸಂತಸ ಪಟ್ಟಿದ್ದಾರೆ.

  ಪ್ರಣೀತಾ ಸದ್ಯ ಮನಾಲಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಚಿತ್ರೀಕರಣಕ್ಕೆಂದು ಮನಾಲಿ ಪ್ರಯಾಣ ಬೆಳೆಸಿದ್ದಾರೆ. ಈ ಸಮಯದಲ್ಲಿ ಅಟಲ್ ಟನಲ್ ಗೆ ಭೇಟಿ ನೀಡಿದ್ದಾರೆ. ಅಟಲ್ ಟನಲ್ ಈಗ ಪ್ರವಾಸಿ ತಾಣವಾಗಿದೆ. ಅನೇಕರು ಭೇಟಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ನಟಿ ಪ್ರಣೀತಾ ಸಹ ಅಟಲ್ ಟನಲ್ ಬಳಿ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿವೆ.

  ಬಾಬ್ರಿ ಮಸೀದಿ ದ್ವಂಸ ಪ್ರಕರಣ ತೀರ್ಪು: 'ಕ್ಷಮಿಸಿ, ಆದ್ರೆ ಮರೆಯಬೇಡಿ'- ಪ್ರಣಿತಾಬಾಬ್ರಿ ಮಸೀದಿ ದ್ವಂಸ ಪ್ರಕರಣ ತೀರ್ಪು: 'ಕ್ಷಮಿಸಿ, ಆದ್ರೆ ಮರೆಯಬೇಡಿ'- ಪ್ರಣಿತಾ

  ಅಟಲ್ ಟನಲ್ ಗೆ ಹೋಗುವ ರಸ್ತೆ, ಟನಲ್ ಎಂಟ್ರಿ, ಒಳಗೆ ಸರೇದಂತೆ ಎಲ್ಲಾ ಕಡೆ ನಿಂತು ಪ್ರಣೀತಾ ಫೋಟೋಗೆ ಪೋಸ್ ನೀಡಿದ್ದಾರೆ. ಫೋಟೋಗಳನ್ನು ಶೇರ್ ಮಾಡಿ, 'ಎರಡು ದಿನಗಳ ಹಿಂದೆ ಪ್ರಧಾನ ಮಂತ್ರಿ ಉದ್ಘಾಟನೆ ಮಾಡಿದ ಈ ಸ್ಥಳ ಇಂದು ಐತಿಹಾಸಿಕ. ಅಟಲ್ ಟನಲ್ ಮೂಲಕ ಪ್ರಯಾಣಿಸಲು ಸಾಧ್ಯವಾಯಿತು. ಈ ಮಾರ್ಗದಲ್ಲಿ ಪ್ರಯಾಣ ಮಾಡಿದ್ದರಿಂದ ಅನೇಕ ಸಮಯ ಉಳಿಯಿತು' ಎಂದು ಬರೆದುಕೊಂಡಿದ್ದಾರೆ. 9 ಕಿ.ಮೀ ದೂರದ ಸುರಂಗ ಮಾರ್ಗ, ಮನಾಲಿಯ ರೋಹತಾಂಗ್ ಪಾಸ್ ನಿಂದ ಲೇಹ್ ಲಡಾಕ್ ನತ್ತ ಕನೆಕ್ಟ್ ಆಗುತ್ತೆ.

  ಪ್ರಣೀತಾ ಸದ್ಯ ಹಿಂದಿಯ ಹಂಗಮಾ-2 ಸಿನಿಮಾದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ಪರೇಶ್ ರಾವಲ್, ಶಿಲ್ಪ ಶೆಟ್ಟಿ ಮೀಝಾನ್ ಜಾಫೆರಿ ಸೇರಿದಂತೆ ಅನೇಕರು ಅಭಿನಯಿಸುತ್ತಿದ್ದಾರೆ. ಮನಾಲಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಸಿನಿಮಾತಂಡದ ಜೊತೆ ಮನಾಲಿ ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

  ಅವರೆಲ್ಲಾ ಪುಟ್ಟ ಪುಟ್ಟ ಮಕ್ಕಳು ಸ್ವಲ್ಪ ಎಚ್ಚರಿಕೆ ಇರಲಿ ಅಂದ್ರು Sitaram | Filmibea tKannada
  English summary
  Actress Pranitha Subhash Visits Atal Tunnel. She shares a photo on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X