ಟರ್ಕಿಯಲ್ಲಿ ಸ್ವಿಮ್ ಸೂಟ್ ಧರಿಸಿ ಗ್ಲಾಮರಸ್ ಲುಕ್ ಕೊಟ್ಟ 'ಪೊರ್ಕಿ' ನಟಿ ಪ್ರಣೀತಾ ಸುಭಾಷ್
ನಟ ದರ್ಶನ್ ಅಭಿನಯದ ಪೊರ್ಕಿ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟಿ ಪ್ರಣೀತಾ ಸುಭಾಷ್ ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಯಾವಾಗಲೂ ಹಿಂದೂ ಧರ್ಮ, ಸನಾತನ ಧರ್ಮ ಎನ್ನುತ್ತಾ ಪೂಜೆ ಪುನಸ್ಕಾರ ಮಾಡುತ್ತಾ ಇರುವ ಅವರು, ಈಗ ತಮ್ಮ ಅಭಿಮಾನಿಗಳನ್ನು ಶಾಕ್‌ಗೆ ನೂಕಿದ್ದಾರೆ.
ಹೌದು, ನಟಿ ಪ್ರಣೀತಾ ಸುಭಾಷ್ ಟರ್ಕಿಯಲ್ಲಿ ಪ್ರವಾಸವನ್ನು ಏಂಜಾಯ್ ಮಾಡುತ್ತಿದ್ದಾರೆ. ಒಂದು ಮಗುವಿನ ತಾಯಿಯಾದರೂ ತಮ್ಮ ಸೌಂದರ್ಯದ ಮೂಲಕ ಹೊಸ ನಟಿಯರನ್ನು ನಾಚಿಸುವಂತಿದ್ದಾರೆ. ಈಗ ಟರ್ಕಿಯಲ್ಲಿ ಕಡಲ ಕಿನಾರೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ, ಫೋಟೋದಲ್ಲಿ ಅವರು ಧರಿಸಿರುವುದು ನೀಲಿ ಬಣ್ಣದ ಸ್ವಿಮ್ ಸೂಟ್. ಇದನ್ನು ನೋಡಿ ಅಭಿಮಾನಿಗಳು ಶಾಕ್ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ವಿಮ್ ಸೂಟ್‌ನಲ್ಲಿ ನಟಿ ಪ್ರಣೀತಾ ಸುಭಾಷ್
ನಟಿ ಪ್ರಣೀತಾ ಸುಭಾಷ್ ಇತ್ತೀಚೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಮದುವೆ ಬಳಿಕ ಸಂಸಾರ, ಮಗು ಎನ್ನುತ್ತಾ ದಿನ ಕಳೆಯುತ್ತಿರುವ ಅವರು, ತಮ್ಮ ಸನಾತನ ಧರ್ಮದ ಬಗ್ಗೆ ತಮ್ಮ ಹೇಳಿಕೆಗಳು ಮತ್ತು ಪೂಜೆ, ಪುನಸ್ಕಾರಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಈ ಹೊಸ ಇನ್‌ಸ್ಟಾಗ್ರಾಮ್ ಫೋಸ್ಟ್ ಮೂಲಕ ಸದ್ದು ಮಾಡುತ್ತಿದ್ದಾರೆ.
ಟರ್ಕಿಯ ಬೋಡ್ರಮ್‌ನಲ್ಲಿರುವ ರಮಣೀಯ ಬೀಚ್‌ನ ಮೇಲಿರುವ ಐಷಾರಾಮಿ ಈಜುಕೊಳದ ಪಕ್ಕದಲ್ಲಿ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಈ ವೇಳೆ ನಟಿ ಪ್ರಣೀತಾ ಸುಭಾಷ್ ಸಕತ್ ಆಗಿರುವ ಸ್ವಿಮ್ ಸೂಟ್ ಧರಿಸಿದ್ದಾರೆ. ನೀಲಿ ಬಣ್ಣದ ಸ್ವಿಮ್ ಸೂಟ್ ಮೇಲೆ ಸುಂದರವಾದ ನೀಲಿ ಟೋಪಿಯನ್ನು ಹಾಕಿ ಪಕ್ಕಕ್ಕೆ ತಿರುಗಿ ಅಂದವಾಗಿ ಫೋಸ್ ನೀಡಿದ್ದಾರೆ.
ಪ್ರಣೀತಾ ಫೋಸ್ಟ್‌ಗೆ ಫ್ಯಾನ್ಸ್ ಕಾಮೆಂಟ್ಸ್
ನಟಿ ಪ್ರಣೀತಾ ಸುಭಾಷ್ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ಗಳ ಮಳೆ ಸುರಿಸಿದ್ದಾರೆ. 'ತುಂಬಾ ಹಾಟ್ ಆದರೆ ಫುಲ್ ಫೋಟೋ ಮಿಸ್ ಆಗಿದೆ'.. 'ವಾಹ್, ನೀವು ಯಾವಾಗಲೂ ಮತ್ತು ಎಂದೆಂದಿಗೂ ತುಂಬಾ ಸುಂದರವಾಗಿ ಕಾಣುತ್ತೀರಿ'... 'ಹಬೀಬಿ ಭಾರತಕ್ಕೆ ಬನ್ನಿ'... 'ದಯವಿಟ್ಟು ಟರ್ಕಿಗೆ ಹೋಗಬೇಡಿ, ಅದು ಶತ್ರು ದೇಶ'... 'ಚೆನ್ನಾಗಿದ್ದಲಮ್ಮ ಯಾಕ ಬೇಕು ಚಡ್ಡಿ ಅವತಾರ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಪ್ರಣೀತಾ ನಟನೆಯ ರಾಮನ ಅವತಾರ
ಹಲವು ವರ್ಷಗಳಿಂದ ನಟನೆಯಿಂದ ಬ್ರೇಕ್ ಪಡೆದಿರುವ ನಟಿ ಪ್ರಣೀತಾ ನಟನೆಯ ರಾಮನ ಅವತಾರ ಸಿನಿಮಾ ಘೋಷಣೆಯಾಗಿದೆ. ಸಿನಿಮಾದಲ್ಲಿ ನಟ ರಿಷಿ ಹಾಗೂ ಪ್ರಣೀತಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಸಿಂಪಲ್ ಸುನಿ ಸಾಹಿತ್ಯ ಬರೆದಿರುವ 'ಮನಸ್ಸು ಬೇರೆ ದಿಕ್ಕಿಗೆ ಸಾಗಲು' ಹಾಡಿಗೆ ಸಂಚಿತ್ ಹೆಗ್ಡೆ ದನಿಯಾಗಿದ್ದಾರೆ.


Click it and Unblock the Notifications











