»   » ಮದಿರೆಯ ಜೊತೆಗೆ ಮಾದಕ ತಾರೆ ಪ್ರಿಯಾಮಣಿ

ಮದಿರೆಯ ಜೊತೆಗೆ ಮಾದಕ ತಾರೆ ಪ್ರಿಯಾಮಣಿ

By: ಉದಯರವಿ
Subscribe to Filmibeat Kannada

ಈ ಮದಿರೆಗೂ ಹಾಗೂ ಮಾನಿನಿಗೆ ಬಿಡಿಸಲಾರದ ನಂಟು. ಎರಡಕ್ಕೂ ಇರುವ ಸಾಮಾನ್ಯ ಗುಣ ಎಂದರೆ ಮಾದಕತೆ. ಆದರೆ ಎರಡೂ ಒಟ್ಟಿಗೆ ಸೇರಿದರೆ ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು...ಹಾಡು ನೆನಪಾಗುತ್ತದೆ. ನಮ್ಮ ಬೆಂಗಳೂರು ಬ್ಯೂಟಿ ಪ್ರಿಯಾಮಣಿ ಮದಿರೆಯ ಜೊತೆ ಮಾದಕ ನೋಟ ಬೀರಿದ್ದಾರೆ.

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಅಂಬರೀಶ' ಚಿತ್ರದಲ್ಲಿನ ಪ್ರಿಯಾಮಣಿ ಹಾಟ್ ದೃಶ್ಯ. ಇತ್ತೀಚೆಗೆ ದರ್ಶನ್ ಹುಟ್ಟುಹಬ್ಬದ ಉಡುಗೊರೆಯಾಗಿ 'ಅಂಬರೀಶ' ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಈಗ ಪ್ರಿಯಾಮಾಣಿ ಹಾಟ್ ಚಿತ್ರಗಳು ಬಿಡುಗಡೆಯಾಗಿವೆ.

ಅಂಬರೀಶ ಚಿತ್ರದಲ್ಲಿ ಪ್ರಿಯಾಮಣಿ ಅವರ ಪಾತ್ರದ ಹೆಸರು ಸ್ಮಿತಾ. ಲಕ್ಷ್ಮಿ ಚಿತ್ರದ ಬಳಿಕ ಕನ್ನಡದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಪ್ರಿಯಾಮಣಿ. ಹಳದಿ ಬಣ್ಣದ ಶಾರ್ಟ್ಸ್ ನಲ್ಲಿ ಜೊತೆಗೆ ಮದಿರೆಯ ಜೊತೆ ಪ್ರಿಯಾಮಣಿ ಮಿಂಚುವ ದೃಶ್ಯಗಳನ್ನು ಸ್ಲೈಡ್ ನಲ್ಲಿ ನೋಡಿ.

ಮಹೇಶ್ ಸುಖಧರೆ ಆಕ್ಷನ್ ಕಟ್

ಸುಖಧರೆ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ 'ಅಂಬರೀಶ'. ಈಗಾಗಲೆ ಬೆಂಗಳೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ನಡೆದಿದೆ.

ಅಂಬರೀಶ ತಾಂತ್ರಿಕ ಬಳದಲ್ಲಿ ಯಾರಿದ್ದಾರೆ?

ಚಿತ್ರಕ್ಕೆ ಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಂಗೀತ ಹರಿಕೃಷ್ಣ, ಕಲೆ ಈಶ್ವರಿ ಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ, ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್‌ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.

ಅಂಬರೀಶ ಪಾತ್ರವರ್ಗದಲ್ಲಿರುವವರು

ತಾರಾಗಣದಲ್ಲಿ ದರ್ಶನ್, ಪ್ರಿಯಾಮಣಿ, ಡಾ.ಅಂಬರೀಶ್, ಸುಮಲತಾ, ಉಮಾಶ್ರೀ, ಸಾಧು ಕೋಕಿಲ, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್, ರವಿಶಂಕರ್, ರಾಜೇಂದ್ರ ಕಾರಂತ್, ಸಿದ್ಧಾರ್ಥ (ಬಾಂಬೆ), ಬಿರಾದಾರ್, ರೋಹಿತ್, ಭರತ್, ಸತೀಶ್, ಬೆಸ್ಟ್‌ಕ್ಲಬ್ ಆರ್. ಅರುಣಾಚಲಂ, ಜಯರಾಂ, ಚೇತನ, ಲೋಕಿ, ಉದಯ್, ಚೇತನ್ ಮುಂತಾದವರಿದ್ದಾರೆ.

ಸರಿಸುಮಾರು ₹ 20 ಕೋಟಿ ಬಜೆಟ್

ಭಾರಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ಸರಿಸುಮಾರು ₹ 20 ಕೋಟಿ ಬಜೆಟ್ ಎನ್ನಲಾಗಿದೆ.

ಕಾರಣಾಂತರಗಳಿಂದ ಹೊರಬಿದ್ದ ನಿಶಾ

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಈ ಮುಂಚೆ ಆಯ್ಕೆಯಾಗಿದ್ದ ನಿಶಾ ಯೋಗೇಶ್ವರ್ ಅವರು ಕಾರಣಾಂತರಗಳಿಂದ ಚಿತ್ರದಿಂದ ಹೊರಬಿದ್ದಿದ್ದಾರೆ.

English summary
Actress Priyamani looks very hot in Challenging Star Darshan upcoming movie Ambareesha. The action film directed and produced by Mahesh Sukhadhare under the Sri Sukhadhare Pictures banner.
Please Wait while comments are loading...