ಹುಡುಗರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್: ಪ್ರಿಯಾಮಣಿಗೆ ಮದುವೆ

By Suneetha

ಕನ್ನಡದ ನಟಿ ಮಲ್ಲು ಕುಟ್ಟಿ ಪ್ರಿಯಾಮಣಿ ಅವರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಮುಸ್ತಫಾ ರಾಜ್ ಅವರ ಜೊತೆ ಇದೇ ವರ್ಷದ ಕೊನೆಯಲ್ಲಿ ಸಪ್ತಪದಿ ತುಳಿಯುತ್ತಿದ್ದಾರೆ, ಎಂದು ಖುದ್ದು ಪ್ರಿಯಾಮಣಿ ಅವರೇ ಸುದ್ದಿ ಮಾಡಿದ್ದಾರೆ.

ಖಾಸಗಿ ಮಾಧ್ಯಮವೊಂದರಲ್ಲಿ ತಮ್ಮ ಮದುವೆಯ ವಿಚಾರವನ್ನು ನಟಿ ಪ್ರಿಯಾಮಣಿ ಅವರು ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ನಟಿ ಪ್ರಿಯಾಮಣಿ ಅವರ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಯಂಕರ ವೈರಲ್ ಆಗುತ್ತಿದೆ.['ದೇವರವ್ನೆ ಬಿಡು ಗುರು' ಅಂತಾವ್ರೇ ಪ್ರಿಯಾಮಣಿ]

ಧೀರ್ಘಕಾಲದ ಗೆಳೆಯ ಮುಸ್ತಫಾ ರಾಜ್ ಅವರ ಜೊತೆ ಈ ವರ್ಷದ (2016) ಅಂತ್ಯದಲ್ಲಿ ಮದುವೆಯಾಗುವುದಾಗಿ ನಟಿ ಪ್ರಿಯಾಮಣಿ ಅವರೇ ಸ್ವತಃ ತಿಳಿಸಿದ್ದಾರೆ. ಅಂತೂ ಇಂತೂ ಪ್ರಿಯಾಮಣಿ ಅವರು ಮದುವೆಯಾಗುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ಮಾತ್ರ ಭಾರಿ ಬೇಸರ ಉಂಟಾಗಿದೆ.[ಇಷ್ಟ ಆದರೆ 'ನಾಟಿಕೋಳಿ' ಓಕೆ ಎಂದ ಪ್ರಿಯಾಮಣಿ]

'ನಾನು ಈ ವರ್ಷದ ಅಂತ್ಯದಲ್ಲಿ ಮದುವೆ ಆಗಬೇಕು ಎಂಬ ನಿರ್ಧಾರ ತಳೆದಿದ್ದೇನೆ. ಅದಕ್ಕಿಂತ ಮುಂಚೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಸಿನಿಮಾಗಳಿಗೆ ಸಹಿ ಮಾಡುತ್ತೇನೆ ಎಂದು ನಟಿ ಪ್ರಿಯಾಮಣಿ ಅವರು ಖಾಸಗಿ ಚಾನೆಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮುಂದಿನ ಸ್ಲೈಡ್ಸ್ ಕ್ಲಿಕ್ ಮಾಡಿ...[ಪ್ರಿಯಾಮಣಿ ಅವರ ಹಾವಭಾವ ನೋಡಲು ಈ ಲಿಂಕ್ ಕ್ಲಿಕ್ ಮಾಡಿ]

ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯ ಒಡೆಯ

ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯ ಒಡೆಯ

ಮುಂಬೈನ ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯೊಂದರ ಒಡೆಯನಾಗಿರುವ ಮುಸ್ತಫಾ ರಾಜ್ ಮತ್ತು ನಟಿ ಪ್ರಿಯಾಮಣಿ ಅವರ ಮೊದಲ ಭೇಟಿ ಆಗಿದ್ದು, ಡ್ಯಾನ್ಸ್ ಶೋ ಕಾರ್ಯಕ್ರಮದಲ್ಲಿ. ಮೊದ ಮೊದಲು ಉತ್ತಮ ಸ್ನೇಹವನ್ನು ಹೊಂದಿದ್ದ ಇವರಿಬ್ಬರು ಬರಬರುತ್ತಾ ಪ್ರೇಮಿಗಳಾದರು.[ಪ್ರಕಾಶ್ ರೈ ಶಟರ್ ಎಳೆಯಲು ಪ್ರಿಯಾಮಣಿ ಬರ್ತಾರ? ]

ಇದೇ ವರ್ಷ (2016) ಮದುವೆ

ಇದೇ ವರ್ಷ (2016) ಮದುವೆ

ಇದೀಗ ನಟಿ ಪ್ರಿಯಾಮಣಿ ಮತ್ತು ಉದ್ಯಮಿ ಮುಸ್ತಫಾ ರಾಜ್ ಅವರು ತಮ್ಮ ಧೀರ್ಘಕಾಲದ ಪ್ರೇಮಕ್ಕೆ 'ಮದುವೆ'ಯ ಮೂಲಕ ನಾಂದಿ ಹಾಡಲು ಸಿದ್ಧರಾಗಿದ್ದು, ಇದೇ ವರ್ಷ (2016) ಅದ್ಧೂರಿಯಾಗಿ ಎರಡು ಕುಟುಂಬಗಳ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ.

ಕಳೆದ ವರ್ಷ ಮದುವೆ ಆಗಬೇಕಿತ್ತು

ಕಳೆದ ವರ್ಷ ಮದುವೆ ಆಗಬೇಕಿತ್ತು

ಇನ್ನು ಇವರಿಬ್ಬರ ಮದುವೆ ಕಳೆದ ವರ್ಷವೇ ಆಗಿಬಿಡುತ್ತೆ ಎಂದು ಭಾರಿ ಗುಲ್ಲೆದ್ದಿತ್ತು. ಆದ್ರೆ ಪ್ರಿಯಾಮಣಿ ಅವರ ಜಾತಕದಲ್ಲಿ ಕೆಲ ದೋಷಗಳು ಇದೆ ಎಂಬ ಕಾರಣಕ್ಕೆ ಮದುವೆ ಮುಂದೂಡಲಾಗಿತ್ತು. ಇದೀಗ ಎಲ್ಲಾ ಸಮಸ್ಯೆಗಳು ಬಗೆಹರಿದಿರುವುದರಿಂದ ಈ ವರ್ಷ ಮದುವೆ ಗ್ಯಾರೆಂಟಿ.

ಬೋಲ್ಡ್ ನಟಿ ಪ್ರಿಯಾಮಣಿ

ಬೋಲ್ಡ್ ನಟಿ ಪ್ರಿಯಾಮಣಿ

ಖಡಕ್ ಮತ್ತು ಬೋಲ್ಡ್ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿರುವ ನಟಿ ಪ್ರಿಯಾಮಣಿ ಅವರು 'ಚಾರುಲತಾ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತ ನಟನೆ ನೀಡಿದ್ದರು. ಇವರಿಗೆ 2007 ರಲ್ಲಿ 'ಪರುತೀವೀರನ್' ಎಂಬ ಸಿನಿಮಾದ ನಟನೆಗೆ ಉತ್ತಮ ಅಭಿನಯ ಎಂಬ ಪ್ರಶಸ್ತಿ ಲಭಿಸಿತ್ತು.

ಚಿಂದಿ ಉಡಾಯಿಸಿದ ಪ್ರಿಯಾಮಣಿ

ಚಿಂದಿ ಉಡಾಯಿಸಿದ ಪ್ರಿಯಾಮಣಿ

ಇತ್ತೀಚೆಗಷ್ಟೇ ಕಾಮಿಡಿ ನಟ ಕೋಮಲ್ ಅವರ ಜೊತೆ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಎಂಬ ಸಿನಿಮಾದಲ್ಲಿ ನಟಿ ಪ್ರಿಯಾಮಣಿ ಮಿಂಚಿದ್ದರು. ಈ ಚಿತ್ರದಲ್ಲೂ ತಮ್ಮ ನಟನೆಯ ಮೂಲಕ ಚಿಂದಿ ಉಡಾಯಿಸಿದ್ದರು.[ಕಲೆಕ್ಷನ್ ಚೆನ್ನಾಗಿದ್ದರೂ 'ಪುಟ್ಟಣ್ಣ'ನಿಗೆ ಮಲ್ಟಿಪ್ಲೆಕ್ಸ್ ಸಿಗುತ್ತಿಲ್ಲ]

ಕನ್ನಡತಿ ಎಂದೇ ಖ್ಯಾತಿ ಗಳಿಸಿರುವ ಪ್ರಿಯಾಮಣಿ

ಕನ್ನಡತಿ ಎಂದೇ ಖ್ಯಾತಿ ಗಳಿಸಿರುವ ಪ್ರಿಯಾಮಣಿ

ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟಿಸಿ ಕನ್ನಡದ ನಟಿಯಾಗಿಯೇ ಖ್ಯಾತಿ ಗಳಿಸಿದ ನಟಿ ಪ್ರಿಯಾಮಣಿ ಅವರು ಸದ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ 'ಕಲ್ಪನಾ 2' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದುನಿಯಾ ವಿಜಿ ಅವರು ಜೊತೆ ಕಾಣಿಸಿಕೊಂಡಿರುವ 'ದನ ಕಾಯೋನು' ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

More from Filmibeat

English summary
National-award winning actress Priyamani, opens up about wedding with her boyfriend Mustafa Raj. Kannada Actress Priyamani is all set for a happy wedding with Mustafa Raj by the end this year. It's wedding bells for Priyamani, this year, 2016.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X