ಹೆಣ್ಣು ಮಕ್ಕಳಿಗೆ ಅವಕಾಶಗಳು ಕಡಿಮೆ, ಹಾಗಾಗಿ ಜಗಳ ಹೆಚ್ಚು - ಪ್ರಿಯಾಂಕಾ ಚೋಪ್ರಾ
''ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶಗಳು ಕಡಿಮೆ ಇವೆ. ಹಾಗಾಗಿಯೇ ಅವರ ಮಧ್ಯೆ ಜಗಳಗಳು ಆಗುತ್ತಿದೆ'' ಎಂದು
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಕಳೆದ ಶನಿವಾರ ಅಮೆರಿಕಾದಲ್ಲಿ ನಡೆದ ಬ್ಯೂಟಿಕಾನ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದರು. ಈ ವೇಳೆ ಮನರಂಜನೆ ಕ್ಷೇತ್ರದ ತಾರತಮ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಡಬಲ್ ಸ್ಟ್ಯಾಂಡರ್ಡ್ ಇದೆ ಎಂದಿದ್ದಾರೆ.
''ನಾನು ನೀಡಿರುವ ಅನೇಕ ಸಂದರ್ಶನಗಳಲ್ಲಿ, ನೀವು ಇನ್ನೊಬ್ಬ ನಟಿ ಜೊತೆಗೆ ಸಿನಿಮಾ ಮಾಡಿದ್ದೀರಿ. ಅವರ ಮತ್ತು ನಿಮ್ಮ ನಡುವೆ ಯಾವುದೇ ಮುನಿಸು ಆಗಿಲ್ವಾ? ಎನ್ನುತ್ತಾರೆ. ಅದೇ ಇಬ್ಬರು ನಟರು ಒಟ್ಟಿಗೆ ಸಿನಿಮಾ ಮಾಡಿದಾಗ ಖುಷಿಯಿಂದ ಮಾತನಾಡುತ್ತಾರೆ.'' ಈ ರೀತಿಯ ತಾರತಮ್ಯ ಇದೆ ಎಂದು ಬೇಸರ ಹಂಚಿಕೊಂಡಿದ್ದಾರೆ.

ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಭಾಗ ಮಹಿಳೆಯರು ಇದ್ದಾರೆ. ಹೀಗಾಗಿ ಎಲ್ಲ ಕ್ಷೇತ್ರದಲ್ಲಿಯೂ ಅವರು ಗುರುತಿಸಿಕೊಳ್ಳಬೇಕು. ಅವಕಾಶಗಳು ಹೆಚ್ಚಾದಾಗ ಈ ರೀತಿಯ ಸಮಸ್ಯೆ ಬರುವುದಿಲ್ಲ. ಆಗ ಪರಸ್ಪರ ಸಹೋದರಿ ಭಾವನೆ ಬರುತ್ತದೆ. ಎನ್ನುವುದು ಪ್ರಿಯಾಂಕ ಚೋಪ್ರಾ ಅಭಿಪ್ರಾಯ.
ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯ ನಡುವೆ ಒಳ್ಳೆಯ ಒಡನಾಟ ಇದ್ದರೂ, ಅವಕಾಶಗಳ ಕೊರತೆಯಿಂದ ಅದು ಹಾಳಾಗುತ್ತಿದೆ ಎನ್ನುವುದು ಪ್ರಿಯಾಂಕಾ ಭಾವನೆಯಾಗಿದೆ.


Click it and Unblock the Notifications











