twitter
    For Quick Alerts
    ALLOW NOTIFICATIONS  
    For Daily Alerts

    ಹೆಣ್ಣು ಮಕ್ಕಳಿಗೆ ಅವಕಾಶಗಳು ಕಡಿಮೆ, ಹಾಗಾಗಿ ಜಗಳ ಹೆಚ್ಚು - ಪ್ರಿಯಾಂಕಾ ಚೋಪ್ರಾ

    |

    ''ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶಗಳು ಕಡಿಮೆ ಇವೆ. ಹಾಗಾಗಿಯೇ ಅವರ ಮಧ್ಯೆ ಜಗಳಗಳು ಆಗುತ್ತಿದೆ'' ಎಂದು

    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

    ಕಳೆದ ಶನಿವಾರ ಅಮೆರಿಕಾದಲ್ಲಿ ನಡೆದ ಬ್ಯೂಟಿಕಾನ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದರು. ಈ ವೇಳೆ ಮನರಂಜನೆ ಕ್ಷೇತ್ರದ ತಾರತಮ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಡಬಲ್ ಸ್ಟ್ಯಾಂಡರ್ಡ್ ಇದೆ ಎಂದಿದ್ದಾರೆ.

    ಯಪ್ಪಾ.. ಪ್ರಿಯಾಂಕಾ ಚೋಪ್ರಾ ಬರ್ತ್ ಡೇ ಕೇಕ್ ಬೆಲೆ ಇಷ್ಟೊಂದಾ..ಯಪ್ಪಾ.. ಪ್ರಿಯಾಂಕಾ ಚೋಪ್ರಾ ಬರ್ತ್ ಡೇ ಕೇಕ್ ಬೆಲೆ ಇಷ್ಟೊಂದಾ..

    ''ನಾನು ನೀಡಿರುವ ಅನೇಕ ಸಂದರ್ಶನಗಳಲ್ಲಿ, ನೀವು ಇನ್ನೊಬ್ಬ ನಟಿ ಜೊತೆಗೆ ಸಿನಿಮಾ ಮಾಡಿದ್ದೀರಿ. ಅವರ ಮತ್ತು ನಿಮ್ಮ ನಡುವೆ ಯಾವುದೇ ಮುನಿಸು ಆಗಿಲ್ವಾ? ಎನ್ನುತ್ತಾರೆ. ಅದೇ ಇಬ್ಬರು ನಟರು ಒಟ್ಟಿಗೆ ಸಿನಿಮಾ ಮಾಡಿದಾಗ ಖುಷಿಯಿಂದ ಮಾತನಾಡುತ್ತಾರೆ.'' ಈ ರೀತಿಯ ತಾರತಮ್ಯ ಇದೆ ಎಂದು ಬೇಸರ ಹಂಚಿಕೊಂಡಿದ್ದಾರೆ.

    Actress Priyanka Chopra Spoke About Fights for Female Actors

    ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಭಾಗ ಮಹಿಳೆಯರು ಇದ್ದಾರೆ. ಹೀಗಾಗಿ ಎಲ್ಲ ಕ್ಷೇತ್ರದಲ್ಲಿಯೂ ಅವರು ಗುರುತಿಸಿಕೊಳ್ಳಬೇಕು. ಅವಕಾಶಗಳು ಹೆಚ್ಚಾದಾಗ ಈ ರೀತಿಯ ಸಮಸ್ಯೆ ಬರುವುದಿಲ್ಲ. ಆಗ ಪರಸ್ಪರ ಸಹೋದರಿ ಭಾವನೆ ಬರುತ್ತದೆ. ಎನ್ನುವುದು ಪ್ರಿಯಾಂಕ ಚೋಪ್ರಾ ಅಭಿಪ್ರಾಯ.

    ದುಬಾರಿ ಬೆಲೆಗೆ ಲಾಸ್ ಏಂಜಲೀಸ್ ಮನೆ ಮಾರಿದ ಪ್ರಿಯಾಂಕಾ ಚೋಪ್ರಾ.! ದುಬಾರಿ ಬೆಲೆಗೆ ಲಾಸ್ ಏಂಜಲೀಸ್ ಮನೆ ಮಾರಿದ ಪ್ರಿಯಾಂಕಾ ಚೋಪ್ರಾ.!

    ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯ ನಡುವೆ ಒಳ್ಳೆಯ ಒಡನಾಟ ಇದ್ದರೂ, ಅವಕಾಶಗಳ ಕೊರತೆಯಿಂದ ಅದು ಹಾಳಾಗುತ್ತಿದೆ ಎನ್ನುವುದು ಪ್ರಿಯಾಂಕಾ ಭಾವನೆಯಾಗಿದೆ.

    English summary
    Bollywood actress Priyanka Chopra spoke about fights for female actors.
    Tuesday, August 13, 2019, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X