For Quick Alerts
  ALLOW NOTIFICATIONS  
  For Daily Alerts

  ಕುಂಚ ಕೈಗೆತ್ತಿಕೊಂಡ ನಟಿ ಪ್ರಿಯಾಂಕಾ ಉಪೇಂದ್ರ

  |

  ನಟಿ ಪ್ರಿಯಾಂಕಾ ಉಪೇಂದ್ರ ಚಿತ್ರಕಲಾವಿದೆ ಆಗಿದ್ದಾರೆ. ಕುಂಚ ಕೈಗೆತ್ತಿಕೊಂಡು ಚಿತ್ರಗಳನ್ನು ಬಿಡಿಸುವ ಕಾರ್ಯ ಆರಂಭಿಸಿದ್ದಾರೆ!

  ಪ್ರಿಯಾಂಕಾ ಉಪೇಂದ್ರ ಅವರು 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ಚಿತ್ರಕಲಾವಿದೆಯ ಪಾತ್ರ ನಿರ್ವಹಿಸಿದ್ದಾರೆ. ಪ್ರಿಯಾಂಕಾ, ಬಣ್ಣಗಳು ತುಂಬಿದ ತಟ್ಟೆ ಹಿಡಿದು ತದೇಕಚಿತ್ತದಿಂದ ಚಿತ್ರ ಬಿಡುಸುತ್ತಿರುವ ಫೊಟೊವನ್ನು ಚಿತ್ರತಂಡ ಬಿಡುಗಡೆ ಮಾಡಲಾಗಿದೆ.

  ಆಂಗ್ಲೋ ಇಂಡಿಯನ್ ಮಹಿಳೆ ಕ್ಯಾರೊಲಿನ್ ಹೆಸರಿನ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.

  'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದಲ್ಲಿ ನಟ ಪೃಥ್ವಿ ಅಂಬರ್ ನಾಯಕರಾಗಿದ್ದಾರೆ. ಸಿನಿಮಾದ ನಾಯಕಿ ಲಾಸ್ಯ ನಾಗರಾಜ್. ಪ್ರಿಯಾಂಕಾ ಅವರದ್ದು ಬಹುಮುಖ್ಯ 'ವಿಶೇಷ ಪಾತ್ರ' ಎಂದಿದ್ದಾರೆ ನಿರ್ದೇಶಕ ಅರುಣ್ ಕುಮಾರ್ ಹಾಗೂ ಸಾಬು ಅಲೋಷಿಯಸ್.

  ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿದ್ದು, ಕೊರೊನಾ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲು ತಯಾರಿದ್ದೇವೆ ಎಂದಿದ್ದಾರೆ ಸಿನಿಮಾದ ಸಹ ನಿರ್ಮಾಪಕ ಲೋಹಿತ್. ಸಿನಿಮಾವನ್ನು ಫ್ರೈಡೇ ಫಿಲಮ್ಸ್ ಹಾಗೂ ಸಿಲ್ವರ್ ಟ್ರೇನ್ ಇಂಟರ್ನ್ಯಾಷನಲ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

  ಬೆಂಗಳೂರು, ಸಕಲೇಶಪುರ ಸೇರಿದಂತೆ ರಾಜ್ಯದ ಕೆಲವು ಸುಂದರ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದೆ ಚಿತ್ರತಂಡ. 'ಇದೊಂದು ಫೀಲ್‌ ಗುಡ್ ಸಿನಿಮಾ' ಎಂದಿದ್ದಾರೆ ಸಹ ನಿರ್ಮಾಪಕ ಲೋಹಿತ್.

  'ದಿಯಾ' ಸಿನಿಮಾದ ಮೂಲಕ ಖ್ಯಾತಿಗಳಿಸಿದ ಪೃಥ್ವಿ ಅಂಬರ್ 'ಲೈಫ್ ಈಸ್ ಬ್ಯೂಟಿಫುಲ್' ಹೊರತಾಗಿ ಶಿವರಾಜ್ ಕುಮಾರ್ ನಟನೆಯ 'ಶಿವಪ್ಪ', ಮಿಲನ ನಾಗರಾಜ್ ನಾಯಕಿಯಾಗಿರುವ 'ಶುಗರ್‌ ಲೆಸ್' ಹಾಗೂ ನವೀನ್ ದ್ವಾರಕನಾಥ್ ನಿರ್ದೇಶನದ 'ಫಾರ್ ರಿಜಿಸ್ಟ್ರೇಷನ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅನುಪ್ರಭಾಕರ್ | Filmibeat Kannada

  ಇನ್ನು ನಟಿ ಪ್ರಿಯಾಂಕಾ ಉಪೇಂದ್ರ ಅವರು 'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾದ ಹೊರತಾಗಿ, '1980' ಹಾಗೂ 'ಖೈಮರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress Priyanka Upendra acting as a drawing artist in Life is Beautiful movie. Pruthvi Ambar is hero of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X