»   » ಪತ್ನಿಯ ಹುಟ್ಟುಹಬ್ಬಕ್ಕೆ ಬಿಗ್ ಸರ್ ಪ್ರೈಸ್ ನೀಡಿದ ಉಪ್ಪಿ!

ಪತ್ನಿಯ ಹುಟ್ಟುಹಬ್ಬಕ್ಕೆ ಬಿಗ್ ಸರ್ ಪ್ರೈಸ್ ನೀಡಿದ ಉಪ್ಪಿ!

Posted By:
Subscribe to Filmibeat Kannada

ಬಹುಭಾಷಾ ತಾರೆ, ನಿರ್ಮಾಪಕಿ ಕಮ್ ನಟಿ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಹುಟ್ಟುಹಬ್ಬವನ್ನು ನಿನ್ನೆ (ನವೆಂಬರ್ 12) ತಮ್ಮ ಮನೆಯಲ್ಲಿಯೇ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಇನ್ನು ಪತ್ನಿಯ ಹುಟ್ಟುಹಬ್ಬ ಅಂದರೆ ಕೇಳಬೇಕೆ ಅದಕ್ಕಾಗಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಏನು ಮಾಡಿದರು ಗೊತ್ತಾ?.

ದೀಪಾವಳಿ ಹಬ್ಬಕ್ಕೆ ಎಂದು ಮುದ್ದಿನ ಪತ್ನಿಯ ಹತ್ತಿರ ಸುಳ್ಳು ಹೇಳಿ ಗೆಳೆಯರು ಹಾಗೂ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ, ಸರ್ ಪ್ರೈಸ್ ಆಗಿ ಭರ್ಜರಿ ಪಾರ್ಟಿಯೊಂದನ್ನು ಆರೆಂಜ್ ಮಾಡಿದ್ದರು.

Actress Priyanka Upendra celebrates his Birthday

ಕುಟುಂಬದವರು ಹಾಗೂ ಗೆಳೆಯರೊಂದಿಗೆ ಭರ್ಜರಿಯಾಗಿ ಬರ್ತ್ ಡೇ ಆಚರಿಸಿಕೊಂಡ ಸುಂದರಿ ಪ್ರಿಯಾಂಕ ಉಪೇಂದ್ರ ಅವರು 3 ಕೇಕ್ ಗಳನ್ನು ಕತ್ತರಿಸಿ ಫುಲ್ ಖುಷಿ ಪಟ್ಟರು.

ಇನ್ನು ರಿಯಲ್ ಸ್ಟಾರ್ ಉಪ್ಪಿ ಅವರು ಶ್ಯಾಂಪೇನ್ ಬಾಟಲ್ ಓಪನ್ ಮಾಡಿದರೆ ಮಗ ಆಯುಷ್ ಅಮ್ಮನ ಕೈಯಿಂದ ಕೇಕ್ ತಿಂದು ಸಂಭ್ರಮ ಪಟ್ಟನು.

ತಮ್ಮ ಪ್ರೀತಿಯ ಪತಿ ಹುಟ್ಟುಹಬ್ಬಕ್ಕೆ ಕೊಟ್ಟ ಸುಂದರ ಸರ್ ಪ್ರೈಸ್ ನೋಡಿ ನಟಿ ಪ್ರಿಯಾಂಕ ಉಪೇಂದ್ರ ಅವರು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಸುಂದರವಾಗಿ ಕಂಗೊಳಿಸುತ್ತಿದ್ದ ಬರ್ತ್ ಡೇ ಬೆಡಗಿ ಕುಟುಂಬದ ಸದಸ್ಯರೊಡನೆ ಫೊಟೋ ಕ್ಲಿಕ್ಕಿಸಿಕೊಂಡು ಪಾರ್ಟಿ ಎಂಜಾಯ್ ಮಾಡಿದರು.

Actress Priyanka Upendra celebrates his Birthday

ಪ್ರಿಯಾಂಕ ಉಪೇಂದ್ರ ನಿರ್ಮಾಣದಲ್ಲಿ ಮೂಡಿಬಂದಿದ್ದ 'ಉಪ್ಪಿ 2' ಚಿತ್ರ ಭರ್ಜರಿ ಯಶಸ್ಸು ಗಳಿಸಿದ ಖುಷಿಯಲ್ಲಿರುವ ಪ್ರಿಯಾಂಕ ಉಪೇಂದ್ರ ಅವರು ಇದೀಗ 'ಪ್ರಿಯಾಂಕ' ಹಾಗೂ 'ಮಮ್ಮಿ' ಚಿತ್ರದಲ್ಲಿ ಬ್ಯಸಿಯಾಗಿದ್ದಾರೆ.

English summary
Kannada actress Priyanka Upendra celebrated his birthday Yesterday (November 12) with his Husbend Upendra and family members and close friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada